ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು

author-image
Veena Gangani
Updated On
ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು
Advertisment
  • ಮೃತ ಬಾಲಕ ಕೆಳಗಳಹಟ್ಟಿಯ ಓಬಣ್ಣ ಹಾಗೂ ದೀಪಾ ದಂಪತಿಯ ಮಗ
  • ತಾತಾನ ಜತೆ ಟ್ರ್ಯಾಕ್ಟರ್​ನಲ್ಲಿ ಕುಳಿತ್ತಿದ್ದಾಗ ಕೆಳಗಡೆ ಬಿದ್ದ ಬಾಲಕ ಸಾವು
  • ಈ ಘಟನಾ ಸಂಬಂಧ ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲು

ವಿಜಯನಗರ: ಟ್ರ್ಯಾಕ್ಟರ್‌ ನಡಿ ಸಿಲುಕಿ ಬಾಲಕ ದಾರುಣವಾಗಿ ಸಾವನ್ನಪ್ಪಿರೋ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆಯಲ್ಲಿ ನಡೆದಿದೆ. ನವದೀಪ್ (5) ಮೃತ ಬಾಲಕ.

ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!

ಮೃತ ಬಾಲಕ ಮೊಳಕಾಲ್ಮೂರು ತಾಲೂಕಿನ ಕೆಳಗಳಹಟ್ಟಿಯ ಓಬಣ್ಣ ಹಾಗೂ ದೀಪಾ ದಂಪತಿ ಮಗ. ತಾಯಿ ದೀಪಾ ತವರು ಮನೆ ಗುಡೇಕೊಟೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಮೃತ ಬಾಲಕ ಸಂಜೆ ತಾತಾ ಮಾರಣ್ಣ ಜತೆ ಹೊಲಕ್ಕೆ ಹೋಗಿದ್ದ.

ತಾತಾನ ಜತೆ ಟ್ರ್ಯಾಕ್ಟರ್​ನಲ್ಲಿ ಕುಳಿತ್ತಿದ್ದಾಗ ಆಯತಪ್ಪಿ ರೂಟರ್ ಯಂತ್ರಕ್ಕೆ ಬಾಲಕ ಸಿಕ್ಕಿಹಾಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಗುಡೇಕೊಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment