Advertisment

ದೇವಸ್ಥಾನಕ್ಕೆ ಹೋಗಿದ್ದಾಗ ದಾರುಣ ಘಟನೆ.. ದೇಗುಲದ ಗೇಟ್​ ಬಿದ್ದು ಜೀವ ಬಿಟ್ಟ 5 ವರ್ಷದ ಮಗು; ಅಸಲಿಗೆ ಆಗಿದ್ದೇನು?

author-image
Gopal Kulkarni
Updated On
ದೇವಸ್ಥಾನಕ್ಕೆ ಹೋಗಿದ್ದಾಗ ದಾರುಣ ಘಟನೆ.. ದೇಗುಲದ ಗೇಟ್​ ಬಿದ್ದು ಜೀವ ಬಿಟ್ಟ 5 ವರ್ಷದ ಮಗು; ಅಸಲಿಗೆ ಆಗಿದ್ದೇನು?
Advertisment
  • ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗಿದ್ದ ಮಗುವಿನ ದುರಂತ ಅಂತ್ಯ
  • ದೇವಸ್ಥಾನದ ಗೇಟ್ ತಲೆಯ ಮೇಲೆ ಬಿದ್ದು 5 ವರ್ಷದ ಜಿಷ್ಣು ಸಾ*ವು
  • ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದ ಗ್ರಾಮಸ್ಥರು

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಐದು ವರ್ಷದ ಮಗು, ಹೆಚ್​.ಎಸ್​. ಜಿಷ್ಣುವಿನ ತಲೆಯ ಮೇಲೆ ದೇಗುಲದ ಗೇಟ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಜಿಷ್ಣು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ. ನಿನ್ನೆ ಕಾರ್ತಿಕ ಸೋಮವಾರವಾದ ಹಿನ್ನೆಲೆಯ ಕುಟುಂಬದೊಂದಿಗೆ ಗ್ರಾಮದ ಚೆನ್ನಕೇಶವ ದೇಗುಲಕ್ಕೆ ಹೋಗಿತ್ತು ಮಗು. ಈ ವೇಳೆ ದೇಗುಲದ ಗೇಟ್ ಜಿಷ್ಣು ತಲೆ ಮೇಲೆ ಬಿದ್ದು ತೀವ್ರ ಗಾಯವಾಗಿತ್ತು.

Advertisment

ಇದನ್ನೂ ಓದಿ:ಬೆಂಗಳೂರು ಏರ್​ಪೋರ್ಟ್​​ ರಸ್ತೆಯಲ್ಲಿ ಸರಣಿ ಅಪಘಾತ; ಇಬ್ಬರ ಸಾ*ವಿಗೆ ಕಾರಣವಾಯ್ತು ಜಗಳ

ಗಂಭೀರವಾಗಿ ಗಾಯಗೊಂಡ ಮಗುವನ್ನ ಕೂಡಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಗು ಇಂದು ಸಾವನ್ನಪ್ಪಿದೆ.
ಘಟನೆ ಸಂಬಂಧ ಅರಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

publive-image

ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಪೊಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೇಟು ಮುರಿದು ಸಾಕಷ್ಟು ದಿನಗಳಾದರೂ ಕೂಡ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರಿದ ಆರೋಪ ಮಾಡಿರುವ ಜಿಷ್ಣು ಪೋಷಕರು ಹಾಗೂ ಗ್ರಾಮಸ್ಥರು, ಧಾರ್ಮಿಕ ದತ್ತಿ ಇಲಾಖೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ದೂರಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment