Advertisment

ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು

author-image
AS Harshith
Updated On
ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು
Advertisment
  • ಬೆಳಗ್ಗೆ ಅಂಗನವಾಡಿಗೆ ಹೊರಟಿದ್ದ 5 ವರ್ಷದ ಬಾಲಕ
  • ರಸ್ತೆ ದಾಟುವ ವೇಳೆ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ
  • ಖಾಸಗಿ ವಾಹನ ಹರಿದು ಬಾಲಕ ಸ್ಥಳದಲ್ಲೇ ಸಾವು, ಮುಗುಲಿ ಮುಟ್ಟಿದ ಕುಟುಂಬಸ್ಥರ ಆಕ್ರಂದನ

ವಿಜಯಪುರ: ಅಂಗನವಾಡಿ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ ಹರಿದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ನಿಡಗುಂಡಿ ತಾ. ಅರಳದಿನ್ನಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಮಂಜುನಾಥ ಚೋಪಡೆ (5) ಸಾವನ್ನಪ್ಪಿದ ಬಾಲಕ.

Advertisment

ಬಸವರಾಜ್ ಅಂಗನವಾಡಿಗೆ ಹೊರಟಿದ್ದನು. ರಸ್ತೆ ದಾಟುವ ವೇಳೆ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಮಳವಳ್ಳಿ ಶಾಸಕ ನರೇಂದ್ರಸ್ವಾಮಿಗೆ ಪಿತೃ ವಿಯೋಗ.. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಂದೆ

ನಿಡಗುಂದಿಯ BMS ಶಾಲೆಯ ವಾಹನ ಹರಿದು ಬಸವರಾಜ್ ಮಂಜುನಾಥ ಚೋಪಡೆ ಸಾವನ್ನಪ್ಪಿದ್ದಾನೆ. 5 ವರ್ಷದ ಮಗನ ಸಾವನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

Advertisment

ಇದನ್ನೂ ಓದಿ: ಚಿನ್ನದ ಹಕ್ಕಿಯ ಬೇಟೆಗೆ ಹೊರಟ ನೀರಜ್​ ಚೋಪ್ರಾ.. ಭಾರತೀಯ ಪುತ್ರನ ಎದುರಿಗಿದೆ ಸಾಲು ಸಾಲು ಸವಾಲು

ಘಟನಾ ಸ್ಥಳಕ್ಕೆ ನಿಡಗುಂದಿ ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಈ ವೇಳೆ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment