ಎಳೆ ಕಂದನನ್ನು ಸೇತುವೆಯಿಂದ ಎಸೆದಿದ್ದ ನೀಚರು, ವೈದ್ಯರೇ ಭರವಸೆ ಕಳೆದುಕೊಂಡಿದ್ದರೂ ನಡೆಯಿತೊಂದು ಪವಾಡ!

author-image
Gopal Kulkarni
Updated On
ಎಳೆ ಕಂದನನ್ನು ಸೇತುವೆಯಿಂದ ಎಸೆದಿದ್ದ ನೀಚರು, ವೈದ್ಯರೇ ಭರವಸೆ ಕಳೆದುಕೊಂಡಿದ್ದರೂ ನಡೆಯಿತೊಂದು ಪವಾಡ!
Advertisment
  • ಎಳು ದಿನಗಳ ಮಗುವನ್ನು ಸೇತುವೆಯಿಂದ ಕೆಳಕ್ಕೆ ಎಸೆದಿದ್ದ ನೀಚರು
  • ಮರದಲ್ಲಿ ನೇತಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಿದ ಸ್ಥಳೀಯರು
  • ವೈದ್ಯರೇ ಭರವಸೆ ಕಳೆದುಕೊಂಡಿದ್ದರೂ ನಡೆಯಿತೊಂದು ಪವಾಡ

ಉತ್ತರಪ್ರದೇಶದ ಹಮೀರಪುರ್​​ನಲ್ಲಿ ನಡೆದ ಒಂದು ಕರುಣಾಜನಕ ಕಥೆ ಇದು.  ಈ ಕಥೆಯನ್ನು ಕೇಳಿದರೆ ಎಂತವರ ಕರುಳು ಕೂಡ ಚುರುಕ್ ಅನ್ನದೇ ಇರಲಾರದು. ಅನಾಥವಾಗಿ ಮರವೊಂದರ ಕೊಂಬೆಯಲ್ಲಿ ನೇತಾಡುತ್ತಿದ್ದ ನವಜಾತ ಶಿಶುವೊಂದನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಮೇಲೆದಾ ಗಾಯಗಳು ಹಾಗೂ ಅದರ ಸ್ಥಿತಿ ಕಂಡ ವೈದ್ಯರೇ ಅದು ಬದುಕುತ್ತೆ ಅನ್ನೋ ಭರವಸೆಯನ್ನೇ ಬಿಟ್ಟಿದ್ದರು. ಆದರೆ ಚಿಕಿತ್ಸೆ ಶುರು ಮಾಡಿದ ಮೇಲೆ ನಡೆದಿದ್ದು ಅಕ್ಷರಶಃ ಪವಾಡ.

ಕಳೆದ ಆಗಸ್ಟ್​ನಲ್ಲಿ ಉತ್ತರಪ್ರದೇಶದ ಹಮೀರ್​ಪುರ್​ನ ಬ್ರಿಡ್ಜ್​ ಬಳಿ ಪೋಷಕರು ಮಗುವನ್ನು ಎಸೆದು ಪರಾರಿಯಾಗಿದ್ದಾರೆ. ನೀಚರು ಎಸೆದಿದ್ದ ಆ ನವಜಾತ ಶಿಶು ಮರವೊಂದರ ಕೊಂಬೆಯಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದನ್ನು ಗಮನಿಸಿದ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ತಂದಾಗ, ಮಗುವಿನ ಬೆನ್ನ ಮೇಲೆ ಪ್ರಾಣಿ ಪಕ್ಷಿಗಳು ಕಚ್ಚಿದ ಗಾಯ ಸೇರಿ ಒಟ್ಟು 50 ಗಾಯಗಳಾಗಿದ್ದವು. ಮಗುವನ್ನು ಕಂಡ ಸ್ಥಳೀಯರು ನಾಗಪುರ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗುವಿನ ಸ್ಥಿತಿ ಕಂಡ ವೈದ್ಯರು ಅದು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಿದ್ದರು. ಆದ್ರೆ ಈಗ ಆ ಮಗು ಕೃಷ್ಣನ ಹೆಸರು ಪಡೆದುಕೊಂಡು ವೈದ್ಯರ ಕೈಯಗಳ ಮಡಿಲಲ್ಲಿ ಕಿಲಕಿಲ ಎಂದು ನಗುತ್ತಿದೆ.

publive-image

ಈ ಮಗು ಆಗಸ್ಟ್ 26 ಅಂದ್ರೆ ಕೃಷ್ಣ ಜನ್ಮಾಷ್ಟಮಿಯಂದೇ ಹುಟ್ಟಿದ್ದರಿಂದ ಕೃಷ್ಣ ಎಂದೇ ಹೆಸರಿಡಲಾಗಿದೆ ಎರಡು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಕಳೆದ ಕೃಷ್ಣ ಈಗ ಸಂಪೂರ್ಣವಾಗಿ ಗುಣಮುಖಗೊಂಡು ಆಸ್ಪತ್ರೆಯಿಂದ ತೆರಳುವಾಗ ಅಲ್ಲಿಯ ಎಲ್ಲರ ಕಣ್ಣುಗಳು ಕೂಡ ತೇವಗೊಳಿಸಿದ್ದ. ಅಷ್ಟೊಂದು ಭಾವನಾತ್ಮಕ ನಂಟು ಆಸ್ಪತ್ರೆಯ ಸಿಬ್ಬಂದಿಗೂ ಹಾಗೂ ಆ ಮಗುವಿನ ನಡುವೆಯೂ ಬೆಳೆದುಬಿಟ್ಟಿತ್ತು.

ಇದನ್ನೂ ಓದಿ:ವೈದ್ಯನ ಕೊ*ಲೆ ಪ್ರಕರಣ ಭೇದಿಸಿದ ಪೊಲೀಸರು: 24 ಗಂಟೆಯಲ್ಲಿ 1600km ಚೇಸ್​ ಮಾಡಿ ಅರೆಸ್ಟ್

ಕಾನ್ಪುರ್​ನ ಲಾಲಾ ಲಜಪತ್ ರಾಯ್ ಆಸ್ಪತ್ರೆ, ಇದನ್ನು ಹಾಲ್ಲೆಟ್​ ಆಸ್ಪತ್ರೆ ಅಂತಲೂ ಕರೆಯುತ್ತಾರೆ. ಈ ಆಸ್ಪತ್ರೆಯ ಹಿರಿಯ ಅಧಿಕಾರಿ ಡಾ ಸಂಜಯ್ ಹೇಳುವ ಪ್ರಕಾರ ಮಗುವನ್ನು ಈಗಾಗಲೇ ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಮಗುವನ್ನು ಯಾರೋ ಸೇತುವೆಯ ಮೇಲಿಂದ ಎಸೆದಿದ್ದಾರೆ ಅದೃಷ್ಟವಷಾತ್ ಅದು ಮರವೊಂದರಲ್ಲಿ ಸಿಲುಕಿ ಬದುಕಿದೆ. ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಗುವಿನ ಬೆನ್ನಿನ ಮೇಲೆ 50ಕ್ಕೂ ಹೆಚ್ಚು ಗಾಯಗಳಾಗಿದ್ದವು. ಕಾಗೆ ಸೇರಿದಂತೆ ಹಲವು ಪ್ರಾಣಿಗಳು ಕಚ್ಚಿದ ಗುರುತುಗಳು ಇದ್ದವು.ಆ ಮಗುವನ್ನು ಆರೈಕೆ ಮಾಡಲು ಆಸ್ಪತ್ರೆಯ ಸ್ಟಾಫ್​ ನರ್ಸ್​ಗಳು ಅಕ್ಷರಶಃ ಅದರ ತಾಯಂದಿರಾಗಿ ಬದಲಾಗಿದ್ದರು. ನೋವಿಗೆ ಮಗು ಅಳಲು ಶುರು ಮಾಡಿದರೆ ಅದನ್ನು ಕೈಯಲ್ಲಿ ತೆಗೆದುಕೊಂಡು ಲಾಲಿ ಹಾಡಿ ಮಲಗಿಸುತ್ತಿದ್ದರು. ಅದರ ಅಳು ವಿಪರೀತಕ್ಕೆ ಮುಟ್ಟಿದಾಗ ಇಲ್ಲಿಯ ನರ್ಸ್​ಗಳು ಅದನ್ನು ಹೆತ್ತ ತಾಯಿಯಂತೆಯೇ ಅತ್ತಿದ್ದರು. ಹಾಡು ಹಾಡಿದ್ದಾರೆ. ಅದಕ್ಕೆ ಹಾಲು ಕುಡಿಸಿ ಲಾಲಿ ಹಾಡಿ ಮಲಗಿಸಿದ್ದಾರೆ. ಎರಡು ತಿಂಗಳುಗಳ ಕಾಲ ಅದನ್ನು ತಮ್ಮ ಕರುಳಿನ ಕುಡಿಯಂತೆ ಜೋಪಾನ ಮಾಡಿರುವ ನರ್ಸ್​ಗಳು ಕೊನೆಗೆ ಅದನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವಾಗ ಅವರೆಲ್ಲರ ಕಣ್ಣುಗಳು ಜಿನುಗಿದ್ದವು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮದುವೆಗಾಗಿ IPS ನಾಟಕ; ತಾನೇ ತೋಡಿದ ಹಳ್ಳಕ್ಕೆ ಯುವಕ ಬಿದ್ದಿದ್ದು ಹೇಗೆ?

ಅಕ್ಟೋಬರ್ 24 ರಂದು ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ವೇಳೆ ನಮ್ಮ ಆಸ್ಪತ್ರೆಯ ಇಡೀ ಸಿಬ್ಬಂದಿಯ ಕಣ್ಣಲ್ಲಿ ನೀರು ಜಿನುಗಿದ್ದವು. ಆ ಮಗುವಿನೊಂದಿಗೆ ಎಲ್ಲ ಸಿಬ್ಬಂದಿಯೂ ಅಷ್ಟೊಂದು ಭಾವುಕವಾದ ಒಂದು ಸಂಬಂಧ ಬೆಸೆದುಕೊಂಡಿತ್ತು ಎಂದು ಅದೇ ಆಸ್ಪತ್ರೆಯ ವೈದ್ಯೆ ಡಾ ಕಲಾ ಹೇಳಿದ್ದಾರೆ. ಮಗು ಆಸ್ಪತ್ರೆಗೆ ಬಂದಾಗ ಅದು ಹುಟ್ಟಿ ಕೇವಲ ಎಳು ದಿನಗಳಾಗಿದ್ದವು. ಅದನ್ನು ಜೋಪಾನವಾಗಿ ಆರೈಕೆ ಮಾಡಿ ಕಳುಹಿಸಿಕೊಡುವಾಗ ಮನೆಯ ಮಗನನ್ನು ಎಲ್ಲಿಗೋ ಯಾರದ ಕೈಗೊ ಒಪ್ಪಿಸಿದಂತಹ ಭಾವ ನಮಗಾಗಿತ್ತು ಎಂದು ಡಾ ಕಲಾ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment