ಜಸ್ಟ್​ 1 ವರ್ಷ.. 50 ಕೆಜಿ ತೂಕ ಇಳಿಸಿದ ಯುವತಿ.. ನಿಶ್ಚಿತಾರ್ಥದಲ್ಲಿ ನೋಡಿ ನಕ್ಕವರಿಗೆ ತಕ್ಕ ಉತ್ತರ

author-image
Gopal Kulkarni
Updated On
ಜಸ್ಟ್​ 1 ವರ್ಷ.. 50 ಕೆಜಿ ತೂಕ ಇಳಿಸಿದ ಯುವತಿ.. ನಿಶ್ಚಿತಾರ್ಥದಲ್ಲಿ ನೋಡಿ ನಕ್ಕವರಿಗೆ ತಕ್ಕ ಉತ್ತರ
Advertisment
  • ಜಸ್ಟ್ ಒಂದೇ ವರ್ಷದಲ್ಲಿ 50 ಕೆ.ಜಿ ತೂಕ ಇಳಿಸಿದ ಬೆಡಗಿ!
  • ‘129 ಕೆ.ಜಿಯಿಂದ 79 ಕೆ.ಜಿ’.. ಅಬ್ಬಬ್ಬಾ ಎಲ್ಲಿಂದ ಎಲ್ಲಿಗೆ..?
  • ಎಂಗೇಜ್ಮೆಂಟ್ ದಿನ ಅವಳನ್ನು ನೋಡಿ ನಕ್ಕವರಿಗೆ ತಕ್ಕ ಉತ್ತರ

ಲೈಫಲ್ಲಿ ಛಲ ಅನ್ನೋದಿದ್ರೆ.. ಯಾರ್ ಏನ್ ಬೇಕಾದ್ರು ಮಾಡಬಹುದು ಅನ್ನೋದಕ್ಕೆ ಈ ಕಥೆನೇ ಸಾಕ್ಷಿ. ಇಲ್ಲೊಬ್ಬಳು ಹುಡುಗಿ ತನ್ನ ಮದುವೆಗೋಸ್ಕರ ಜಸ್ಟ್ ಒಂದೇ ವರ್ಷದಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 50 ಕೆ.ಜಿ ತೂಕ ಇಳಿಸಿ ಇದೀಗ ಟಾಕ್ ಆಫ್ ದಿ ಟೌನ್ ಅಗಿದ್ದಾಳೆ. ಯಾಕ್ ಆಕೆ? ತೂಕ ಇಳಿಸೋಕೆ ಆಕೆ ಮಾಡಿದ್ದ ಐಡಿಯಾ ಏನು?

publive-image

ಹೆಸರು ಸುಶ್ಮಿತಾ ಗೌತಮ್. ಜಸ್ಟ್ ಒಂದು ವರ್ಷದ ಹಿಂದೆ ಹೀಗಿದ್ದ ಈಕೆ ಹೀಗ್ ಫಿಟ್ ಅಂಡ್ ಪೈನ್ ಆಗಿದ್ದಾಳೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಸುಶ್ಮಿತಾ ಬರೋಬ್ಬರಿ 50 ಕೆ.ಜಿ ತೂಕ ಇಳಿಸಿ.. ಎಲ್ಲರನ್ನ ನಿಬ್ಬೆರಗಾಗಿಸಿದ್ದಾಳೆ. ಇಂಟ್ರೆಸ್ಟಿಂಗ್ ಅಂದ್ರೆ, ಈಕೆ ತುಕ ಇಳಿಸಿದ್ದು ಮದುವೆಗಾಗಿ ಅನ್ನೋದು. 2023ರ ಕೊನೆಯಲ್ಲಿ ಸುಶ್ಮಿತಾ ಗೌತಮ್ ಅವ್ರ ತೂಕ ಇದ್ದಿದ್ದು ಬರೋಬ್ಬರಿ 129 ಕೆ.ಜಿ. ಆದ್ರೆ ಈಗ ಸುಶ್ಮಿತಾ ಅವ್ರ ತೂಕ 79 ಕೆ.ಜಿ ಅಂದ್ರೆ ನಂಬ್ತೀರಾ ? ನಂಬಲೇ ಬೇಕು. ಇನ್ಸ್​​ಸ್ಟಾ ಗ್ರಾಂ ತಮ್ಮ ವೇಯ್ಟ್​ ಲಾಸ್ ಜರ್ನಿ ಶೇರ್ ಮಾಡ್ಕೊಂಡಿರುವ ಸುಶ್ಮಿತಾ ತಮ್ಮ ತೂಕ ಇಳಿಸಲು ಆಕೆ ಫಾಲೋ ಮಾಡಿದ ಡಯಟ್ ಕೂಡ ಹಂಚಿಕೊಂಡಿದ್ದಾರೆ.

publive-image

ಅಷ್ಟಕ್ಕೂ 2023ಕ್ಕೂ ಮುಂಚೆ ಸುಶ್ಮಿತಾ ತಮ್ಮ ತೂಕ ಇಳಿಸಲು ಹಲವು ಬಾರಿ ಪ್ರಯತ್ನ ಮಾಡಿದ್ರೂ ಅದು ವರ್ಕ್​​ ಆಗಿರಲಿಲ್ಲ.. ಗ್ಯಾಪ್ ಆಗ್ತಿದ್ದ ಕಾರಣ ಇಳಿದಿದ್ದ ತೂಕ ಕೂಡ ವಾಪಾಸ್ ಬಂದು ದಪ್ಪ ಆಗ್ತಿದ್ರಂತೆ. ಆದ್ರೆ, 2024ರಲ್ಲಿ ಅವ್ರು ಸ್ಟ್ರಿಕ್ಟ್​ ಡಯಟ್​ ಫಾಲೋ ಮಾಡೋಕೆ ಶುರು ಮಾಡಿದ್ರು,. ಅದ್ರ ಫಲವಾಗೇ ಇದೀಗ ಸುಶ್ಮಿತಾ ಫುಲ್ ಫಿಟ್ ಆಗಿದ್ದಾರೆ.

ಇದನ್ನೂ ಓದಿ: Health Benefits: ರಾತ್ರಿ ಮಲಗೋ ಮುನ್ನ ಕೊತ್ತಂಬರಿ ಸೊಪ್ಪಿನ ನೀರು ಕುಡಿದರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ತೂಕ ಇಳಿಕೆಗೆ ಮೂನ್ನವೇ ಸುಶ್ಮಿತಾಗೇ ಎಂಗೇಜ್ಮೆಂಟ್​ ಆಯ್ತಂತೆ. ಆಗ ಆಕೆ 126 ಕೆ.ಜಿ ಇದ್ರು.. ಆ ವೇಳೆ ಅನೇಕರು ಆಕೆಯನ್ನ ನೋಡಿ ನಗುತ್ತಿದ್ರಂತೆ. ಅವ್ರ ಫಿಯಾನ್ಸೆಗೂ ಕೂಡ ಸರಿಯಾದ ಜೋಡಿ ಅಲ್ಲ ಅಂತ ಹೇಳಿದ್ರಂತೆ. ಆದ್ರೆ, ಇಷ್ಟೆಲ್ಲಾ ಮಾತುಗಳ ನಡುವೆ ಕೂಡ ಅವ್ರ ಸಂಗಾತಿ ಸಪೋರ್ಟ್​ ಮಾಡಿದ್ರು ಅನ್ನೋದು ಸುಶ್ಮಿತಾಳ ಮಾತು

ಇನ್ನೂ ಓದಿ: ಡಿಫರೆಂಟ್ ಗೆಟಪ್​ನಲ್ಲಿ ಫೇಮಸ್​ ಫ್ಯಾಷನ್ ಬ್ಲಾಗರ್.. ನ್ಯಾನ್ಸಿತ್ಯಾಗಿ ಹೊಸ ಲುಕ್​ಗೆ ಫ್ಯಾನ್ಸ್​ ಫಿದಾ!

ಸುಶ್ಮಿತಾಳ ವೇಯಟ್ ಲಾಸ್ ಸಿಕ್ರೇಟ್​ಗೆ ಅಂದ್ರೆ ಪನ್ನೀರ್​. ಸುಶ್ಮಿತಾ ತಾನು ಊಟ ಮಾಡೋ ವಿಧಾನವನ್ನ ಚೇಂಜ್ ಮಾಡಿಕೊಂಡ್ರಂತೆ. ಆದಷ್ಟು ಡಯಟ್​ನಲ್ಲಿ ಹೆಚ್ಚು ಪನ್ನೀರ್​ನ ಸೇರಿಸ್ತಿದ್ರಂತೆ. ಜೊತೆಗೆ ಮನೆಯಲ್ಲಿ ಮಾಡಿದ್ದ ಬೇಯಿಸಿದ ಆಹಾರವನ್ನೇ ಹೆಚ್ಚು ಸೇವನೆ ಮಾಡ್ತಿದ್ರಂತೆ. ​ ಏನೇ ಹೇಳಿ. ಅಂದುಕೊಂಡ ಹಾಗೇ ಸುಶ್ಮಿತಾ 50 ಕೆ.ಜಿ ತೂಕ ಇಳಿಸಿ, ಇತತರಿಗೂ ತೂಕ ಇಳಿಸಲು ಸಹಾಯ ಕೂಡ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment