/newsfirstlive-kannada/media/post_attachments/wp-content/uploads/2025/01/AYODHYA-RAMAMANDIR.jpg)
ಅಯೋಧ್ಯೆ. ಭಕ್ತಕೋಟಿಯಿಂದ ಮತ್ತೊಂದು ತುಂಬಿ ಹೋಗಿದೆ. ಕೇವಲ 72 ಗಂಟೆಯಲ್ಲಿ ಸುಮಾರು 50 ಲಕ್ಷ ಭಕ್ತರು ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ಮಂದಿರದ ಆಡಳಿತ ಮಂಡಳಿ ಹೇಳಿದೆ. ಮೌನಿ ಅಮಾವಾಸ್ಯೆಯ ಪ್ರಯುಕ್ತವಾಗಿ ಸರಯೂ ನದಿಯಲ್ಲಿ ಮಿಂದೆದ್ದು ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಲಕ್ಷಾಂತರ ಮಂದರಿ ಹರಿದು ಬಂದಿದ್ದಾರೆ. ತಜ್ಞರು ಹೇಳುವ ಪ್ರಕಾರು ಸುಮಾರು 50 ಲಕ್ಷ ಭಕ್ತಾದಿಗಳು ಕೇವಲ 72 ಗಂಟೆಯಲ್ಲಿ ಅಯೋಧ್ಯೆಯ ದರ್ಶನ ಪಡೆದಿದ್ದು ಇದು ಮುಂದೆ ವಸಂತ ಪಂಚಮಿಯವರೆಗೆಯೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಮಂದಿರದ ಅರ್ಚಕರು ಇಡೀ ದಿನ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಂತೆ. ರಾಮಮಂದಿರದ ಎದುರು ಲಕ್ಷಾಂತರ ಭಕ್ತರು ಸಾಲುಗಟ್ಟಿಕೊಂಡು ತುಂಬಾ ಸಹನೆಯಿಂದಲೇ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇನ್ನು ಹನುಮಾನಘರಿ ಮಂದಿರದ ದರ್ಶನಕ್ಕೆ ಮಧ್ಯರಾತ್ರಿಯವರೆಗೂ ಅವಕಾಶ ಕಲ್ಪಿಸಿಕೊಡಲಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ:ಮಹಾಕುಂಭಮೇಳ: ಮೌನಿ ಅಮಾವಾಸ್ಯೆಯ ಒಂದೇ ದಿನ ಅಮೃತ ಸ್ನಾನ ಮಾಡಿದ್ದು ಎಷ್ಟು ಕೋಟಿ ಭಕ್ತರು?
ಮಹಾಕುಂಭಮೇಳಕ್ಕೆ ಬಂದ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಅಯೋಧ್ಯಗೆ ದರ್ಶನಕ್ಕೆ ಬರಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಅದಕ್ಕಾಗಿಯೇ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಮೊದಲೇ ಜನಜಂಗುಳಿಯನ್ನು ಸಮರ್ಥವಾಗಿ ನಿಭಾಯಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಮ್ಯಾನೆಜ್ಮೆಂಟ್ಗೆ ಹೇಳಿದ್ದರು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ