ಖಾಸಗಿ ಶಾಲೆಯಲ್ಲೂ ಹೆಣ್ಮಕ್ಕಳಿಗೆ ಮೀಸಲಾತಿ.. 50 ಪರ್ಸೆಂಟ್ ಮೀಸಲು ನಿಯಮ ಏನ್ ಹೇಳುತ್ತದೆ..?

author-image
Ganesh
Updated On
ನಿಮ್ಮ ಮಕ್ಕಳು ಕಲಿಯುವ ಶಾಲೆ, ಕಲಿಸುವ ಶಿಕ್ಷಕರು ಹೇಗಿರಬೇಕು..? ಪೋಷಕರು ಓದಲೇಬೇಕಾದ ಸ್ಟೋರಿ
Advertisment
  • ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ
  • ಇಲಾಖೆ ಆದೇಶವಿದ್ದರೂ ನಿಯಮ ಪಾಲನೆ ಆಗ್ತಾ ಇರಲಿಲ್ಲ
  • ಈ ಬಾರಿ ಪಾಲನೆಯಾಗದ ಶಾಲೆಗಳಿಗೆ ಮೂಗುದಾರ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತಾರೆ. ಹೆಣ್ಣು ಮಕ್ಕಳ ಕಲಿಕಾ ಬಲ ವರ್ಧನೆಗೆ ಹಿಂದಿನಿಂದಲೂ ಶಿಕ್ಷಣ ಇಲಾಖೆ ಸಾಕಷ್ಟು ಯೋಜನೆಗಳ ಅನುಷ್ಠಾನ ಮಾಡ್ತಾನೇ ಇತ್ತು. ಅದ್ರಂತೆ ಶಾಲೆಗಳಲ್ಲಿ 50 ಪರ್ಸೆಂಟ್ ಸೀಟ್ ಹೆಣ್ಣು ಮಕ್ಕಳಿಗೆ ಮೀಸಲಿಡುವುದು ಕೂಡ ಅದರ ಒಂದು ಭಾಗವೇ ಹೌದು. ಎಷ್ಟೋ ಕಡೆ ಶಿಕ್ಷಣ ಇಲಾಖೆ  ಆದೇಶ ಇದ್ದರೂ ಪಾಲನೆ ಆಗ್ತಾ ಇರಲಿಲ್ಲ. ಆದ್ರೆ ಈ  ಬಾರಿ ಪಾಲನೆಯಾಗದ ಶಾಲೆಗಳಿಗೆ ಮೂಗುದಾರ ಹಾಕಲು ಇಲಾಖೆ ಚಿಂತನೆ ನಡೆಸಿದೆ.

50 ಪರ್ಸೆಂಟ್ ಮೀಸಲು ನಿಯಮ..!

ರಾಜ್ಯದ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಸಗಿ ಶಾಲೆಗಳಲ್ಲಿಯೂ ಈ ನಿಯಮ  ಅನ್ವಯ  ಆಗುತ್ತೆ. CBSE, ICSE,  ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಅನ್ವಯ  ಆಗಲಿದ್ದು, ಪ್ರತಿ ತರಗತಿ ಅಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇಕಡಾ 50ರಷ್ಟು ಹೆಣ್ಣು ಮಕ್ಕಳಿಗೆ ಮೀಸಲು ಇಡಬೇಕು. ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೇ ಇದ್ದಾಗ ಉಳಿದ ಸೀಟು ಬಾಲಕರಿಗೆ ಹಂಚಿಕೆ ಮಾಡಬಹುದು ಅಂತ ಇಲಾಖೆ ಹೇಳಿದೆ. ಭಾಷಾ ಮತ್ತು ಧಾರ್ಮಿಕ ಅಲ್ಪ ಸಂಖ್ಯಾತ ಶಾಲೆ ಹೊರತು ಪಡಿಸಿ ಉಳಿದ ಎಲ್ಲಾ ಶಾಲೆಗಳಿಗೂ ಈ ಆದೇಶ ಅನ್ವಯ ಆಗುತ್ತೆ.

ಇದನ್ನೂ ಓದಿ: ಹಾಸನದ ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

publive-image

ರಾಜ್ಯದ ಹಲವೆಡೆ ಬಹುತೇಕ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಅಡ್ಮಿಷನ್ ಕೊಡಿಸಬೇಕು ಅಂದ್ರೆ ಪೇರೆಂಟ್ಸ್ ಗೆ ಪರೀಕ್ಷೆ ನಡೆಸುವ ಕೆಟ್ಟ ಪದ್ಧತಿ ಇದ್ದು, ಇನ್ಮುಂದೆ ಆ ರೀತಿಯೂ ಮಾಡುವಂತಿಲ್ಲ. ಕಡ್ಡಾಯವಾಗಿ 50 ಪರ್ಸೆಂಟ್ ಸೀಟ್ ಹೆಣ್ಣು ಮಕ್ಕಳಿಗೆ ಕೊಡಬೇಕು ಅಂತ ಆರ್ಡರ್ ಪಾಸ್ ಮಾಡಲಾಗಿದ್ದು ಪೋಷಕರು ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ.

ಇನ್ಮುಂದೆ ಎಗ್ಗಿಲ್ಲದೆ ಶುಲ್ಕ ಏರಿಸುವ ಹಾಗಿಲ್ಲ. ಶಾಲೆಯ ಫೀಸ್ ಅನ್ನ ನೋಟಿಸ್ ಬೋರ್ಡ್ ಅಲ್ಲಿ ಹಾಕಲೇಬೇಕು. ಅಷ್ಟೇ ಶುಲ್ಕವನ್ನು ಪೋಷಕರಿಂದ ಪಡೆಯಬೇಕು ಅನ್ನೋ ನಿಯಮ ಜಾರಿ ಮಾಡಿದ್ದು ಪ್ರತಿಯೊಂದು ನಿಯಮ ಪಾಲನೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇರಲಿದೆ. ಒಂದ್ವೇಳೆ ನಿಯಮ ಉಲ್ಲಂಘನೆ ಆದ್ರೆ ಕ್ರಮದ ಅಸ್ತ್ರ ಪ್ರಯೋಗ ಮಾಡುವುದಾಗಿ ಶಿಕ್ಷಣ ಇಲಾಖೆ ಎಚ್ಚರಿಸಿದ್ದು ಎಷ್ಟರ ಮಟ್ಟಿಗೆ ಅನುಷ್ಠಾನ ಆಗುತ್ತೆ ಅಂತ ಕಾದು ನೋಡಬೇಕು.

ಇದನ್ನೂ ಓದಿ: ಮೈಸೂರು ಸೋಪ್ ರಾಯಭಾರಿಯಾದ ತಮನ್ನಾ.. 2 ವರ್ಷಕ್ಕೆ ಪಡೆಯೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment