newsfirstkannada.com

ಅನಗತ್ಯ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆದ್ರೆ ಬೀಳುತ್ತೆ ದಂಡ.. ನೀವು ಓದಲೇಬೇಕಾದ ಸ್ಟೋರಿ!

Share :

Published May 12, 2024 at 6:05am

  ಬಿಎಂಆರ್​ಸಿಎಲ್ ರೂಲ್ಸ್​ನಿಂದ ಕಂಗಾಲಾದ ಸಿಟಿ ಮಂದಿ

  ಮೊಬೈಲ್​​ನಲ್ಲಿ ಚಾರ್ಜ್ ಇಲ್ಲದ ಕಾರಣಕ್ಕೆ ಚಾರ್ಜ್ ಹಾಕಿದ್ದ

  5 ನಿಮಿಷ ಹೆಚ್ಚಿಗೆ ಮೆಟ್ರೋ ಸ್ಟೇಷನ್​ನಲ್ಲಿ ಇದ್ದಿದ್ದಕ್ಕೆ ಬಿತ್ತು ಫೈನ್

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಚಾರ್ಜರ್​ ಪಾಯಿಂಟ್​ ಹುಡುಕೋದಕ್ಕೆ ಓಡಾಡ್ತೀರಾ. ಅಥವಾ ಇನ್ನಾವುದೋ ಕಾರಣಕ್ಕೆ ಸ್ಟೇಷನ್​ನಲ್ಲಿಯೇ 20 ನಿಮಿಷಕ್ಕೂ ಅಧಿಕ ಕಾಲ ಕುಳಿತುಕೊಂಡಿರುತ್ತೀರಾ. 20 ನಿಮಿಷದ ಮೇಲೆ 1 ನಿಮಿಷ ಸ್ಟೇಷನ್​ನಲ್ಲಿ ಇದ್ರೂ ದಂಡ ಫಿಕ್ಸ್​. ವಿಜಯನಗರ ಮೆಟ್ರೋ ನಿಲ್ದಾಣದಲ್ಲಾದಂತೆ ನಿಮಗೂ ತಲೆದಂಡ ಬೀಳತ್ತೆ ಹುಷಾರ್.​

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಚಾರ್ಜರ್ ಪಾಯಿಂಟ್ ಇಟ್ಟಿರುತ್ತಾರೆ. ಅದ್ರಂತೆ ಮೊಬೈಲ್​ನಲ್ಲಿ ಚಾರ್ಜ್ ಇಲ್ಲದ ಕಾರಣ ಪ್ರಯಾಣಿಕರೊಬ್ಬರು ಮೆಟ್ರೋ ಸ್ಟೇಷನ್​ನಲ್ಲಿ ಚಾರ್ಜ್ ಹಾಕಿಕೊಂಡಿದ್ದರು. ಚಾರ್ಜರ್ ಪಾಯಿಂಟ್ ಹುಡುಕೊದಕ್ಕೆ ಜೊತೆಗೆ ಚಾರ್ಜ್ ಹಾಕುವಾಗ ಒಂದಷ್ಟು ಟೈಮ್ ಕಳೆದು ಹೋಗುತ್ತೆ. ಅದು ಈ ಪ್ರಯಾಣಿಕನ ಗಮನಕ್ಕೆ ಬಂದಿಲ್ಲ. ನಂತರ ತನ್ನ ಪಾಡಿಗೆ ತಾನು ಅದೇ ಸ್ಟೇಶನ್ ಅಲ್ಲಿ ಎಕ್ಸಿಟ್ ಆಗಲು ಹೋಗ್ತಾನೆ. ಈ ವೇಳೆ ಆತನ ಮೆಟ್ರೋ ಕಾರ್ಡ್​ನಿಂದ 50 ರೂಪಾಯಿ ಹೆಚ್ಚುವರಿಯಾಗಿ ಕಟ್ ಆಗುತ್ತೆ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೇ ಆತ ಸ್ಟೇಶನ್​ಲ್ಲಿ 20 ನಿಮಿಷಕ್ಕೂ ಅಧಿಕ ಕಾಲ ಕಳೆದಿರೋದಕ್ಕೆ ಪೆನಾಲ್ಟಿ ಹಾಕಲಾಗಿದೆ ಅನ್ನೋದು ಗೊತ್ತಾಗುತ್ತದೆ.

ಕೆಲ ಕಾಲ ಮೆಟ್ರೋ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ಈ ವಿಚಾರವಾಗಿ ವಾಗ್ವಾದ ನಡೆಯುತ್ತೆ. ನೀವು ಸ್ಟೇಷನ್​ನಲ್ಲಿ 25 ನಿಮಿಷ ಇದ್ದೀರಾ? ಫೈನ್ ಕಟ್ಟಬೇಕಾಗುತ್ತೆ ಅಂತ ಸಿಬ್ಬಂದಿ ಕ್ಯಾತೆ ತೆಗೆದಿದ್ದಾರೆ. 5 ನಿಮಿಷ ಹೆಚ್ಚಿಗೆ ಸ್ಟೇಷನ್​ನಲ್ಲಿ ಇದ್ದಿದ್ದಕ್ಕೆ 50 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದಾರೆ ಅಂತಾ ಪ್ರಯಾಣಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟೇಷನ್​ನಲ್ಲಿ ಕೇವಲ 20 ನಿಮಿಷವಷ್ಟೇ ಇರುವ ಅನುಮತಿ ಇದೆ. ಕೇವಲ 1 ನಿಮಿಷ ಹೆಚ್ಚಿದ್ದರೂ ದಂಡದ ಬಿಸಿ ತೆರೆಬೇಕಾಗುತ್ತದೆ ಅನ್ನೋ ಈ ರೂಲ್ಸ್‌ ಪ್ರಯಾಣಿಕರನ್ನ ಬೆರಾಗಾಗಿಸಿದೆ. ಅನಾವಶ್ಯಕವಾಗಿ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆಯೋದನ್ನ ತಪ್ಪಿಸೋಕೆ ಮೊದಲಿನಿಂದಲೂ ಮೆಟ್ರೋ ಈ ರೂಲ್ಸ್‌ ಫಾಲೋ ಮಾಡ್ತಿದ್ಯಂತೆ. ಆದ್ರೆ ಈ ಬಗ್ಗೆ ಪ್ರಯಾಣಿಕರಿಗೆ ಮಾತ್ರ ಗೊತ್ತೇ ಇಲ್ಲ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಜನರಿಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಗತ್ಯ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆದ್ರೆ ಬೀಳುತ್ತೆ ದಂಡ.. ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/11/namma-metro-1.jpg

Load More