/newsfirstlive-kannada/media/post_attachments/wp-content/uploads/2024/06/milk.jpg)
ಹಾಲು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಲು ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶ ಸಿಗುತ್ತವೆ ಅಂತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಲು ಕುಡಿದರೆ ಮೂಳೆ, ಮೆದುಳಿಗೆ ಬಲ ಅಂತ ಅಂತಾರೆ. ಆದರೆ ಇಲ್ಲಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಮಾತು ಮತ್ತೆ ಸಾಬೀತಾಗಿದೆ.
ಹಾಲಿನಲ್ಲಿ ನೀರು ಕಲಿಸಿ ಮಾರಾಟ ಮಾಡುವುದು ಹಳೆಯ ವಿಚಾರ. ಈಗ ನಾವು ಕುಡಿಯುವ ಹಾಲೇ ವಿಷ ಎಂಬ ಆಘಾತಕಾರಿ ಸಂಗತಿ ಉತ್ತರ ಪ್ರದೇಶದ ಬುಲಂದಶಹರ್​ನಿಂದ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಬುಲಂದ್​ಶಹರ್​ನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದರು. ಈ ವೇಳೆ ನಕಲಿ ಹಾಲು ತಯಾರಿಕಾ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಬುಲಂದ್​ಶಹರ್​ನ ಉದ್ಯಮಿ ಅಜಯ್ ಅಗರ್ವಾಲ್​ ಎಂಬುವನನ್ನು ಬಂಧಿಸಿದ್ದಾರೆ. 1 ಲೀಟರ್ ರಾಸಾಯನಿಕ ಬಳಸಿ 500 ಲೀಟರ್ ಹಾಲು ತಯಾರಿಸುತ್ತಿದ್ದ ಎಂಬ ಮಾಹಿತಿ ಬಯಲಿಗೆ ಬಂದಿದೆ.
ಇದನ್ನೂ ಓದಿ:ನಾಳೆ ಒಂದೇ ದಿನ ಬಾಕಿ.. ಆಧಾರ್​ ಕಾರ್ಡ್​ ಇರೋರು ಓದಲೇಬೇಕಾದ ಸ್ಟೋರಿ..!
FSSAI ಅಧಿಕಾರಿಗಳ ಪ್ರಕಾರ ಹಾಲು, ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದ ಉದ್ಯಮಿ ಅಗರ್​ವಾಲ್​, ನಿಜವಾದ ಹಾಲಿನಂತೆ ಕಾಣುವಂತೆ ರಾಸಾಯನಿಕ ಬಳಸಿ ಕೃತಕ, ಸಿಹಿ ಕಾರಕ ಸುವಾಸನೆ ಬೆರೆಸುತ್ತಿದ್ದನಂತೆ. ಈ ನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ ಮಾಡುತ್ತಿದ್ದನಂತೆ. ನಿಜವಾದ ಹಾಲಿನ ರುಚಿ ಬರುವಂತೆ ರಾಸಾಯನಿಕ ಬಳಸಲಾಗುತ್ತಿದ್ದನಂತೆ.
ಅಗರ್ವಾಲ್​ಗೆ ಸೇರಿದ ಅಂಗಡಿ ಮತ್ತು 4 ಗೋಡೌನ್​ಗಳ ಮೇಲೆ ದಾಳಿ ನಡೆಸಿ ನಕಲಿ ಹಾಲು ತಯಾರಿಸಲು ಬಳಸುತ್ತಿದ್ದ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ. ಈ ಕೃತಕ ಹಾಲು ನಿಜವಾದ ಹಾಲಿಗಿಂತಲೂ ಏನೂ ಕಡಿಮೆ ಇಲ್ಲ ಅಂತಾರೆ ಅಧಿಕಾರಿಗಳು. ಹಾಲಿನ ಬಣ್ಣ, ರುಚಿ, ಸುವಾಸನೆ ನಿಜವಾದ ಹಾಲನ್ನೂ ಮೀರಿಸುವಂತಿದೆ ಅಂತೆ.
ಇದನ್ನೂ ಓದಿ:ಮಳೆ ಬರುವ ಹಾಗಿದೆ.. ಬೆಂಗಳೂರಲ್ಲಿ ಇನ್ನೂ ಎಷ್ಟು ದಿನ ಈ ವಾತಾವರಣ..?
🚨 A businessman in Uttar Pradesh's Bulandshahr has been held after he created 500 litres of fake milk using one litre of chemicals. Accused of selling such products for 20 years 🙏 pic.twitter.com/erJo7eACV6
— Indian Tech & Infra (@IndianTechGuide) December 10, 2024
ದಾಳಿ ವೇಳೆ ಪತ್ತೆಯಾದ ರಾಸಾಯನಿಕಗಳ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳೇ ಹೌಹಾರಿದ್ದಾರೆ. ಕೇವಲ 5 ಮಿ.ಗ್ರಾಂ ರಾಸಾಯನಿಕ ಬಳಸಿ 2 ಲೀಟರ್ ಸಿಂಥೆಟಿಕ್ ಹಾಲು ರೆಡಿ ಮಾಡ್ತಿದ್ದರಂತೆ. ಕಲಬೆರಕೆಯ ಗೊತ್ತಾಗದಂತೆ ಸಿಹಿಕಾರಕ, ಕಾಸ್ಟಿಕ್ ಪೊಟ್ಯಾಶ್, ಹಾಲಿನ ಪರ್ಮಿಯೇಟ್​ ಪೌಡರ್, ಸೊರ್ಬಿಟೋಲ್ ಮತ್ತು ಸಂಸ್ಕೃತಿಕ ಸೋಯಾ ಕೊಬ್ಬು ಸೇರಿ ರಾಸಾಯನಿಕ ಬಳಸಲಾಗುತ್ತಿತ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಈ ನಕಲಿ ಹಾಲು ತಯಾರಿಸುವುದನ್ನು ಅಗರ್ವಾಲ್ ಕಲಿತಿದ್ದು ಎಲ್ಲಿ ಅಂತ ಪ್ರಶ್ನಿಸುತ್ತಿದ್ದಾರೆ. ಅಗರ್ವಾಲ್ ಮಾರಾಟ ಮಾಡಿದ ಹಾಲು, ಹಾಲಿನ ಉತ್ಪನ್ನ ಖರೀದಿದಾರರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಅಂತ FSSAIನ ಅಧಿಕಾರಿ ವಿನಿತ್ ಸಕ್ಸೇನಾ ತಿಳಿಸಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ, ಸಚಿನ್, MS ಧೋನಿ.. ಇವರಲ್ಲಿ ಯಾರಿಗೆ ಜಾಹೀರಾತುಗಳಲ್ಲಿ ಹೆಚ್ಚು ಡಿಮ್ಯಾಂಡ್​..?
ಬಂಧಿತ ಉದ್ಯಮಿ ತಾನೊಬ್ಬನೇ ಹಾಲು ತಯಾರಿಸಿ ಮಾರಾಟ ಮಾಡಿದ್ದು ಅಲ್ಲದೇ, ಸಿಂಥೆಟಿಕ್ ಹಾಲಿನ ಸೂತ್ರವನ್ನು ಇತರ ಹಾಲು ಮಾರಾಟಗಾರರೊಂದಿಗೂ ಹಂಚಿಕೊಂಡಿದ್ದಾನಂತೆ. ಅಲ್ಲದೇ ದಾಳಿ ವೇಳೆ ಪತ್ತೆಯಾಗಿರವ ಕೆಲವು ಕೃತಕ ಸಿಹಿಕಾರಕಗಳು 2 ವರ್ಷಗಳ ಹಿಂದೆಯೇ ಅವಧಿ ಮುಗಿದು ಹೋಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ವರದಿ: ವಿಶ್ವನಾಥ್, ಹಿರಿಯ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ