/newsfirstlive-kannada/media/post_attachments/wp-content/uploads/2024/10/Andhrapradesh-Money.jpg)
ಮಳೆಯ ನೀರು ಸಾಗಿ ಹೋಗುವ ಮೋರಿ ಒಂದಷ್ಟು ಹೊತ್ತು ನೂರಾರು ಜನರನ್ನು ಆಕರ್ಷಿಸಿಬಿಟ್ಟಿತ್ತು. ನೋಡ ನೋಡುತ್ತಲೇ ಅಲ್ಲಿ ಬಂದವರ ಕೈಗೆಲ್ಲಾ ₹500 ನೋಟುಗಳು ಸಿಕ್ಕಿಬಿಟ್ಟವು. ಯಾರೆಲ್ಲಾ ಸಾಲುಗಟ್ಟಿ ಅಲ್ಲಿ ಓಡಿ ಬಂದರೋ, ಪ್ರತಿಯೊಬ್ಬರಿಗೂ 1 ಸಾವಿರ, 5 ಸಾವಿರ, 10, 50 ಸಾವಿರದವರೆಗೂ ನೋಟುಗಳು ಸಿಕ್ಕಿವೆ. ಹೀಗೆ ಏಕಾಏಕಿ ಆ ಮೋರಿ ಬಳಿ ಬಂದವರಿಗೆ ಅದೃಷ್ಟ ಲಕ್ಷಿಯೇ ಸಿಕ್ಕಂತಾಗಿದೆ. ಎಲ್ಲರ ಮುಖದಲ್ಲೂ ಖುಷಿ, ಇರುಸುಮುರುಸು ಅನಿಸಿದ್ದು ಕೈಗಂಟ್ಟಿದ್ದ ಕೆಸರು ಮಾತ್ರ.
ಇದನ್ನೂ ಓದಿ: 100, 200, 500.. ಮರದ ಕೆಳಗೆ ಎಲೆಗಳ ಬದಲು ನೋಟು; ಬಾಚಿಕೊಂಡವರಿಗೆ ಬಿಗ್ ಶಾಕ್; ಏನಾಯ್ತು?
ಕೈ ಇಟ್ಟವರಿಗೆಲ್ಲಾ ₹500 ನೋಟು ಸಿಕ್ಕಿದ್ದು ಹೇಗೆ?
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡುತ್ತಿದ್ದವು. ಮೊದಲಿಗೆ ನಕಲಿ ನೋಟು ಅಂದುಕೊಂಡಿದ್ದರು. ತೀರಾ ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮೇಲೆಯೇ ಇದು ಅಸಲಿ ನೋಟು ಅನ್ನೋದು ಗೊತ್ತಾಗಿದ್ದು. ಅತಿಯಾದ ಮಳೆಯಿಂದ ಮೋರಿಗಳಲ್ಲಿ ನೀರು ಹೆಚ್ಚುತ್ತಿತ್ತು. ಮಳೆ ಪ್ರವಾಹಕ್ಕೆ ಒಮ್ಮೊಮ್ಮೆ ಶವಗಳೇ ಕೊಚ್ಚಿಕೊಂಡು ಬರುತ್ತವೆ. ಆದರೇ ಮಹಾರಾಷ್ಟ್ರದ ಅಟಪಡಿ ಜನಕ್ಕೆ ಮೋರಿಯಲ್ಲಿ ₹500 ನೋಟುಗಳು ಸಿಕ್ಕಿವೆ. ಹಾಗಾಗಿಯೇ ಜನ ಅದೃಷ್ಟ ಖುಲಾಯಿಸಿದೆ ಅಂತ ಜೇಬಿಗೆ ಹಾಕಿಕೊಂಡಿದ್ದಾರೆ.
30 ನಿಮಿಷಗಳಲ್ಲಿ ಅಲ್ಲಿ ಸಿಕ್ಕಿದ್ದೆಷ್ಟು ಹಣ ಗೊತ್ತಾ?
ಈ ಕ್ಷಣಕ್ಕೂ ಅಲ್ಲಿ ಹಣ ತೆಗೆದುಕೊಂಡವರು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನೋದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೀಬಹುದು ಅನ್ನೋ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರೋ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನೋ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us