/newsfirstlive-kannada/media/post_attachments/wp-content/uploads/2024/11/Hypersonic-Commercial-Aircraft_.jpg)
ಇದು ವೇಗದ ದುನಿಯಾ. ಓಡುವ ಅನಿವಾರ್ಯತೆಯಲ್ಲಿ ಎಲ್ಲರೂ ಇದ್ದಾರೆ. ಸ್ಪರ್ಧೆಯೆಂಬುದು ಕೇವಲ ಮನುಷ್ಯ ಮನುಷ್ಯರ ನಡುವೆ ಅಲ್ಲ. ಅದು ಈಗ ದೇಶ ದೇಶಗಳ ನಡುವೆಯೂ ಇದೆ. ಅದರಲ್ಲೂ ನಾವು ಜಗತ್ತಿನ ಸೂಪರ್ಪವರ್ ರಾಷ್ಟ್ರಗಳಾಗಬೇಕು ಎಂಬ ಕನಸಿನಲ್ಲಿ ಅಮೆರಿಕಾ, ರಷ್ಯಾ ಹಾಗೂ ಚೀನಾ ನಡುವೆ ಭಾರೀ ಪೈಪೋಟಿಯೇ ನಡೆದಿದೆ. ಅದರಲ್ಲೂ ಚೀನಾ ಎಂಬ ಬೃಹತ್ ದೇಶ ಜಾಗತಿಕ ಮಾರುಕಟ್ಟೆಯ ಮೇಲೆ ತನ್ನ ಬಿಗಿ ಹಿಡಿತವನ್ನು ಸಾಧಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ಚೀನಾದ ಕಚ್ಚಾವಸ್ತುಗಳ ಹಾಗೂ ವೈದ್ಯಕೀಯ ಸಾಮಗ್ರಿಗಳ ಮೇಲೆ ಅವಲಂಬಿತಗೊಂಡಿವೆ. ಆದ್ರೆ ಚೀನಾ ಈಗ ಮತ್ತೊಂದು ಕನಸು ಕಾಣುತ್ತಿದೆ. ಜಗತ್ತಿನಲ್ಲಿ ಆ ಮಾರುಕಟ್ಟೆಯಲ್ಲಿಯೂ ತನ್ನದೇ ಏಕಸ್ವಾಮ್ಯತೆ ಸಾಧಿಸುವ ಗುರಿಯನ್ನು ಹೊಂದಿದೆ. ವಿಶ್ವದ ಶಸ್ತ್ರಾಸ್ತ್ರ ಪೂರೈಕೆಯ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯ ಸಾಧಿಸಬೇಕೆಂಬ ಕನಸನ್ನು ಹೊತ್ತುಕೊಂಡಿದೆ ಚೀನಾ.
ಸದ್ಯ ಜಾಗತಿಕವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾರುಕಟ್ಟೆಯಲ್ಲಿ ಅಮೆರಿಕಾ, ಫ್ರಾನ್ಸ್, ಇಸ್ರೇಲ್ ಹಾಗೂ ರಷ್ಯಾ ತಮ್ಮ ಬಿಗಿ ಹಿಡಿತವನ್ನು ಸಾಧಿಸಿವೆ. ಆದ್ರೆ ತಂತ್ರಜ್ಞಾನದ ವಿಚಾರದಲ್ಲಿ ಈ ನಾಲ್ಕು ದೇಶಗಳಿಗಿಂತ ಚೀನಾ ಒಂದು ಹೆಜ್ಜೆ ಮುಂದೆಯೇ ಇದೆ. ಈಗಾಗಲೇ ಹೈಪರ್ಸಾನಿಕ್ ಕ್ಷಿಪಣಿಯನ್ನು ತಯಾರಿಸಿ ಬೀಗುತ್ತಿರುವ ಚೀನಾ ಈಗ ಹೈಪರ್ಸಾನಿಕ್ ವಿಮಾನವನ್ನು ತಯಾರಿಸಲು ಸಜ್ಜಾಗಿದೆ. ಅದರ ವೇಗ ಹಾಗೂ ಕಾರ್ಯಕ್ಷಮತೆ ಎಲ್ಲರನ್ನೂ ಒಂದು ಕ್ಷಣ ದಂಗುಬಡಿಸುವಂತಿವೆ.
ಇದನ್ನೂ ಓದಿ:US Presidential Election; ಮಂಗಳವಾರ ದಿನವೇ ಅಮೆರಿಕ ಪ್ರಜೆಗಳು ವೋಟ್ ಮಾಡುವುದು ಯಾಕೆ?
ಒಂದು ವೇಳೆ ಚೀನಾ ಈ ವಿಮಾನವನ್ನು ಸಿದ್ಧಗೊಂಡಿದ್ದೇ ಆದಲ್ಲಿ ಇದು ಇಡೀ ವಿಶ್ವವವನ್ನೇ ಕೇವಲ ಅಂದ್ರೇ ಕೇವಲ 7 ಗಂಟೆಗಳಲ್ಲಿ ಸುತ್ತುಹೊಡೆದುಕೊಂಡು ಬರುತ್ತೆ. ಇದರ ವೇಗ ಗಂಟೆಗೆ 5 ಸಾವಿರ ಕಿಲೋಮೀಟರ್ ಎಂದು ಹೇಳಲಾಗುತ್ತಿದೆ. ಅಂದರೆ ಈ ಒಂದು ವಿಮಾನ ವಿಶ್ವದ ಈ ಮೂಲೆಯಿಂದ ಕೊನೆಯ ಮೂಲೆ ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 7 ಗಂಟೆ ಮಾತ್ರ. ಬೀಜಿಂಗ್ ಮೂಲದ ಸ್ಪೇಸ್ ಟ್ರಾಸ್ಪೊರ್ಟೆಷನ್ ಹೆಸರಿನ ಕಂಪನಿ ಈಗಾಗಲೇ ಯುನ್ಕ್ಷಿಂಗ್ ಪ್ರೊಟೊಟೈಪ್ ಎಂಬ ಈ ವಿಮಾನವನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿ ಮುಗಿಸಿದ್ದಾರೆ. ಈ ಒಂದು ವಿಮಾನದ ವೇಗೆ ಅದ್ಯಾವ ಪರಿ ಇದೆ ಅಂದ್ರೆ ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗದಲ್ಲಿ ಇದು ಹಾರಾಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:US Elections; ಇಂದು ಅಮೆರಿಕದಲ್ಲಿ ಮತದಾನ.. ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಫೈಟ್, ಗೆಲ್ಲುವುದು ಯಾರು?
ಈ ಒಂದು ಹೈಪರ್ಸಾನಿಕ್ ಪ್ಲೇನ್ನ ವೇಗ ಕಾನ್ಕೊರ್ಡ್ ಸೂಪರ್ಸಾನಿಕ್ ವಿಮಾನದ ವೇಗಕ್ಕಿಂತ ಎರಡ ಪಟ್ಟು ಜಾಸ್ತಿ ವೇಗವಿದೆ. ಲಂಡನ್ನಿಂದ ನ್ಯೂಯಾರ್ಕ್ಗೆ ಕ್ರಮಿಸಲು ಈ ಒಂದು ವಿಮಾನ ತೆಗೆದುಕೊಳ್ಳುವ ಸಮಯ ಜಸ್ಟ್ ಎರಡೂವರೆ ಗಂಟೆ ಮಾತ್ರ. ಈ ಒಂದು ಅದ್ಭುತ ಸೃಷ್ಟಿಗೆ ಚೀನಾ ತನ್ನೆಲ್ಲಾ ಶಕ್ತಿಯನ್ನು ಹಾಕಿ ಶ್ರಮಿಸುತ್ತಿದೆ.
ಈ ಒಂದು ಹೈಪರ್ಸಾನಿಕ್ ವಿಮಾನವನ್ನು ತಯಾರಿಸುತ್ತಿರುವುದು ಬೀಜಿಂಗ್ ಮೂಲದ ಲಿಂಗ್ಕಾಂಗ್ ಟಿಯಾನ್ಕ್ಸಿಂಗ್ ಟೆಕ್ನಾಲಜಿ ಎಂಬ ಕಂಪನಿ. ಈಗಾಗಲೇ ಒಂದು ಹಂತದಲ್ಲಿ ಯಶಸ್ವಿ ಹಾರಾಟ ನಡೆಸಿರುವ ಯುಕ್ಸಿಂಗ್ ಪ್ಲೇನ್ ಪ್ರೊಟೊಟೈಪ್, ನವೆಂಬರ್ನಲ್ಲಿ ಇಂಜಿನ್ ಟೆಸ್ಟ್ಗೆ ಒಳಗಾಗಲಿದೆ. ಹೆಚ್ಚು ಕಡಿಮೆ 2027ರಷ್ಟೊತ್ತಿಗೆ ಈ ಒಂದು ವಿಮಾನ ಆಗಸದಲ್ಲಿ ತನ್ನ ಚಮತ್ಕಾರ ತೋರಲು ಆರಂಭಿಸುತ್ತದೆ ಎಂದು ಬೀಜಿಂಗ್ನ ಮೂಲಗಳು ತಿಳಿಸಿವೆ. ಇಂತಹ ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಮುನ್ನೆಲೆಗೆ ಬರುತ್ತಿರುವ ಚೀನಾ ಮುಂದೆ ಜಾಗತಿಕವಾಗಿ ಶಸ್ತ್ರಾಸ್ತ್ರ ಪೂರೈಕೆಯ ರಾಷ್ಟ್ರಗಳಲ್ಲಿ ತಾನು ಮುಂಚೂಣಿಯಲ್ಲಿ ಬಂದು ನಿಲ್ಲುವ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ