/newsfirstlive-kannada/media/post_attachments/wp-content/uploads/2025/01/5000-rs.jpg)
‘ಕೇಂದ್ರ ಸರ್ಕಾರ ಮತ್ತೆ ಅದೇ ಹಾದಿ ಹಿಡಿಯಲಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ 5000 ರೂಪಾಯಿ ನೋಟು ಬರುತ್ತಿದೆಯೇ?’ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಊಹಾಪೋಹಗಳು ಬಲವಾಗಿವೆ.
ದೇಶದಲ್ಲಿ 2000 ರೂಪಾಯಿ ನೋಟುಗಳು ಅಮಾನ್ಯೀಕರಣವಾದಾಗಿನಿಂದ ಇಂಥ ಪ್ರಶ್ನೆಗಳು ಶುರುವಾಗಿವೆ. ಪ್ರಸ್ತುತ ಭಾರತದಲ್ಲಿ ಅತ್ಯಧಿಕ ಕರೆನ್ಸಿ ಮೌಲ್ಯ ಅಂದರೆ ಅದು 500 ರೂಪಾಯಿ. ಇದೀಗ 5000 ರೂಪಾಯಿಯ ನೋಟುಗಳು ಬಿಡುಗಡೆಯಾಗುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ. ದೇಶದ ಹಣಕಾಸು ನೀತಿಯನ್ನು ನಿರ್ಧರಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಇದಕ್ಕೆ ಸ್ಪಷ್ಟನೆ ನೀಡಿದೆ.
ರಿಸರ್ವ್ ಬ್ಯಾಂಕ್ ಹೇಳಿದ್ದೇನು?
ಹಸಿರು ಬಣ್ಣದ ರೂ. 5000 ನೋಟಿನ ಬಗ್ಗೆ ಆರ್‌ಬಿಐ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗ್ತಿರುವ ಸುದ್ದಿ ಸುಳ್ಳು. ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. 2000 ನೋಟುಗಳನ್ನು ಮಾತ್ರ ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ. 5000 ನೋಟುಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ:2025 ಕೇಂದ್ರ ಬಜೆಟ್​: ಮೋದಿ ಸರ್ಕಾರದ ಮೇಲೆ ಹಿರಿಯ ನಾಗರಿಕರಿಗೆ 5 ಪ್ರಮುಖ ನಿರೀಕ್ಷೆಗಳು
/newsfirstlive-kannada/media/post_attachments/wp-content/uploads/2025/01/5000-rs-1.jpg)
ಪ್ರಸ್ತುತ ದೇಶದಲ್ಲಿ 500, 200, 100, 50, 20 ಮತ್ತು 10 ರೂಪಾಯಿ ನೋಟುಗಳು ಚಲಾವಣೆಯಲ್ಲಿವೆ. ಕೇಂದ್ರ ಸರ್ಕಾರವು ಭಾರತದಲ್ಲಿ ಡಿಜಿಟಲ್ ಪಾವತಿಯ ಆದ್ಯತೆ ಹೆಚ್ಚಿಸಿದೆ. ಡಿಜಿಟಲ್ ಪಾವತಿ ಮೂಲಕ ವಹಿವಾಟು ನಡೆಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ. ಯುಪಿಐ ಸೈಬರ್‌ಸ್ಪೇಸ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್‌ಗಳು ನೋಟುಗಳನ್ನು ಬದಲಾಯಿಸುತ್ತಿವೆ. ಕರೆನ್ಸಿ ಸುದ್ದಿಗಳಲ್ಲಿ ಸರ್ಕಾರಿ ಮೂಲಗಳನ್ನು ಮಾತ್ರ ನಂಬಬೇಕು ಎಂದು ಆರ್​ಬಿಐ ಮನವಿ ಮಾಡಿಕೊಂಡಿದೆ.
ಭಾರತದಲ್ಲಿ ಮೊದಲು ಇದ್ದವು ಈ ನೋಟುಗಳು..
ಅಧಿಕ ಮುಖಬೆಲೆಯ ನೋಟುಗಳು ಭಾರತಕ್ಕೆ ಹೊಸದಲ್ಲ. 5000 ಮತ್ತು 10000 ರೂಪಾಯಿ ನೋಟುಗಳು 1947 ಸ್ವಾತಂತ್ರ್ಯ ನಂತರ ಚಲಾವಣೆಯಲ್ಲಿದ್ದವು. 1954 ರಲ್ಲಿ 5000 ರೂಪಾಯಿ ನೋಟನ್ನು ಭಾರತೀಯ ಕರೆನ್ಸಿಗೆ ಸೇರಿಸಲಾಗಿತ್ತು. 1978ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರವು 1000, 5000 ಮತ್ತು 10,000 ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿತು. ಈ ಮೊದಲು ಅಧಿಕ ಮೌಲ್ಯದ ನೋಟುಗಳು ದೇಶದಲ್ಲಿ ಸುಮಾರು 24 ವರ್ಷಗಳ ಕಾಲ ಚಲಾವಣೆಯಲ್ಲಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us