1 ಮುತ್ತಿಗೆ ₹50 ಸಾವಿರ​​.. ಕಿಸ್ ಕೊಟ್ಟ ಟೀಚರ್‌ ಕೇಸ್‌ಗೆ 7 ಮುಖಗಳು; ಕಂಪ್ಲೀಟ್ ಹನಿ ಕಹಾನಿ ಇಲ್ಲಿದೆ!

author-image
admin
Updated On
1 ಮುತ್ತಿಗೆ ₹50 ಸಾವಿರ​​.. ಕಿಸ್ ಕೊಟ್ಟ ಟೀಚರ್‌ ಕೇಸ್‌ಗೆ 7 ಮುಖಗಳು; ಕಂಪ್ಲೀಟ್ ಹನಿ ಕಹಾನಿ ಇಲ್ಲಿದೆ!
Advertisment
  • ನಿನ್ನ ಜೊತೆ ರಿಲೇಷನ್​ಶಿಪ್​ನಲ್ಲಿ ಇರ್ತೇನೆಂದು ಶ್ರೀದೇವಿ ಆಫರ್!
  • ಒಂದಾದ ಮೇಲೆ ಒಂದರಂತೆ ಮುತ್ತು ಕೊಟ್ಟ ಟೀಚರ್‌ ಹನಿಟ್ರ್ಯಾಪ್
  • ಟೀಚರ್‌ ಜೊತೆ ಮಾತಾಡಲು ಹೊಸ ಸಿಮ್ ಖರೀದಿಸಿದ್ದ ಉದ್ಯಮಿ

ಬೆಂಗಳೂರು: ಒಂದು ಮುತ್ತಿಗೆ 50 ಸಾವಿರ ರೂಪಾಯಿ ಚಾರ್ಜ್‌ ಮಾಡಿರೋ ಟೀಚರ್ ಸ್ಟೋರಿ ಇವತ್ತು ಹಲ್‌ಚಲ್‌ ಸೃಷ್ಟಿಸಿದೆ. ಸಿಲಿಕಾನ್ ಸಿಟಿಯ ಈ ಮೇಡಂ ಸುಲಿಗೆ ಸ್ಟೋರಿಯೇ ಡಿಫರೆಂಟ್ ಆಗಿದೆ. ಟೀಚರ್ ಕೊಟ್ಟ ಮುತ್ತು ಉದ್ಯಮಿಯ ಜೀವ ಬಾಯಿಗೆ ಬಂತು ಅನ್ನೋ ಹಾಗಾಗಿದೆ. ಈ ಟೀಚರ್ ಹನಿ ಟ್ರ್ಯಾಪ್‌ನ ಸೀನ್ ಟು ಸೀನ್ ಕಂಪ್ಲೀಟ್ ಕಹಾನಿ ಇಲ್ಲಿದೆ.

publive-image

ಸೀನ್ 1 : ಶ್ರೀದೇವಿ ಪರಿಚಯ!
ಶ್ರೀದೇವಿ ಟೀಚರ್‌ ಕಿಸ್ಸಿಂಗ್ ಸ್ಟೋರಿ ಶುರುವಾಗೋದು ಪ್ರೀಸ್ಕೂಲ್‌ನಿಂದ. ಈ ಶ್ರೀದೇವಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ಪ್ರೀಸ್ಕೂಲ್ ನಡೆಸುತ್ತಾ ಇದ್ದರು. 2023ರಲ್ಲಿ ತನ್ನ ಮಗುವನ್ನು ಪ್ರೀಸ್ಕೂಲ್‌ಗೆ ಸೇರಿಸುವ ಮೂಲಕ ಉದ್ಯಮಿಯೊಬ್ಬರು ಶ್ರೀದೇವಿಗೆ ಪರಿಚಯ ಆಗುತ್ತಾರೆ. ಉದ್ಯಮಿ ತನ್ನ ಮಕ್ಕಳನ್ನು ಶ್ರೀದೇವಿಯ ಪ್ಲೇ ಹೋಮ್​ಗೆ ಕಳಿಸುತ್ತಿದ್ದರು. ಆಗಾಗ ಮಗುವನ್ನ ಪ್ಲೇ ಹೋಮ್​ಗೆ ಬಿಡಲು ಹೋಗುತ್ತಿದ್ದ. ಶ್ರೀದೇವಿಯನ್ನ ನೋಡ್ತಾ ನೋಡ್ತಾ ಮಗುವಿನ ಮೂಲಕ ಪರಿಚಯ ಆಗಿದೆ.

publive-image

ಸೀನ್ 2 : ಸ್ನೇಹ.. ಸಾಲ.. ಆಮೇಲೆ ಸಲುಗೆ!
ಉದ್ಯಮಿ ಹಾಗೂ ಶ್ರೀದೇವಿ ನಡುವಿನ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. ಶ್ರೀದೇವಿ ತನ್ನ ಪ್ರೀಸ್ಕೂಲ್ ನಿರ್ವಹಣೆಗೆ ಉದ್ಯಮಿಯಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಸ್ನೇಹ ಬೆಳೆದಿದ್ದ ಕಾರಣ ಉದ್ಯಮಿಯು ನಂಬಿ ಶ್ರೀದೇವಿಗೆ ಹಣ ಕೊಟ್ಟಿದ್ದಾರೆ. 2024ರಲ್ಲಿ ಹಣ ವಾಪಸ್​ ಕೊಡೋದಾಗಿ ಶ್ರೀದೇವಿ ಉದ್ಯಮಿಗೆ ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ತನ್ನ ತಂದೆಗೆ ಹುಷಾರಿಲ್ಲ ಅಂತ ಮತ್ತೆ 2 ಲಕ್ಷ ರೂಪಾಯಿ ಕೇಳಿದ್ದಾರೆ. ಹಣ ವಾಪಸ್ ಕೇಳಿದಾಗ ಕಷ್ಟ ಸರ್, ಶಾಲೆ ಪಾರ್ಟ್ನರ್ ಆಗಿ ಎಂದಿದ್ದರಂತೆ. ಈ ಗ್ಯಾಪಲ್ಲಿ ಉದ್ಯಮಿ ಹಾಗೂ ಶ್ರೀದೇವಿ ಮಧ್ಯೆ ಸಲುಗೆ ಬೆಳೆದು ಸುತ್ತಾಟ ಶುರುವಾಗಿದೆ. ಉದ್ಯಮಿಯು ಶ್ರೀದೇವಿ‌ ಜೊತೆ ಮಾತಾಡಲು ಹೊಸ ಸಿಮ್, ಫೋನ್ ಖರೀದಿ ಮಾಡಿದ್ದಾರೆ.

publive-image

ಸೀನ್ 3 : 50 ಸಾವಿರಕ್ಕೊಂದು ಮುತ್ತು!
2025ರ ಜನವರಿ ಮೊದಲ ವಾರದಲ್ಲಿ ಉದ್ಯಮಿಯು ಕೊಟ್ಟ ಹಣ ವಾಪಸ್ ಕೇಳಿದ್ದಾರೆ. ಆಗ ನಿನಗೆ ಏನು ಬೇಕು ಕೊಡುತ್ತೇನೆ. ಹಣದ ವ್ಯವಹಾರ ಮುಗಿಸು ಎಂದಿದ್ದಳಂತೆ. ಉದ್ಯಮಿ ಮನೆಗೆ ತೆರಳಿದ್ದ ಶ್ರೀದೇವಿ, ಸಲುಗೆಯಿಂದ ಮಾತನಾಡಿದ್ದರಂತೆ. ಆಗ ಟೀಚರ್ ಶ್ರೀದೇವಿ ಉದ್ಯಮಿಗೆ ಮುತ್ತಿಟ್ಟು ಮತ್ತೆ 50 ಸಾವಿರ ಪಡೆದಿದ್ದರಂತೆ. ಬಳಿಕ ನಿನ್ನ ಜೊತೆ ರಿಲೇಷನ್​ಶಿಪ್​ನಲ್ಲಿ ಇರ್ತೇನೆಂದು ಶ್ರೀದೇವಿ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.

publive-image

ಸೀನ್ 4 : ಉದ್ಯಮಿ ಊಟ.. ಶ್ರೀದೇವಿ ಆಟ!
ಒಂದಾದ ಮೇಲೆ ಒಂದರಂತೆ ಮುತ್ತು ಕೊಟ್ಟು ಹಣ ಪಡೆದ ಬಳಿಕ ಶ್ರೀದೇವಿಯ ಅಸಲಿ ಆಟ ಆರಂಭ ಆಗಿದೆ. ಈ ವೇಳೆ ಮತ್ತೆ 15 ಲಕ್ಷ ರೂಪಾಯಿ ಹಣಕ್ಕೆ ಶ್ರೀದೇವಿ ಡಿಮ್ಯಾಂಡ್ ಮಾಡಿದ್ದಾರೆ. ಉದ್ಯಮಿ ಪದೇ ಪದೆ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ರಿಂದ ಸಿಮ್ ಮುರಿದು ಹಾಕಿದ್ದರು.

ಇದನ್ನೂ ಓದಿ: ಮುತ್ತಿಟ್ಟರೆ 15 ಸಾವಿರ.. ವಿಡಿಯೋ ಡಿಲೀಟ್​ಗೆ 20 ಲಕ್ಷ; ಟೀಚರಮ್ಮನ ಹನಿ-ಮನಿ ಕಹಾನಿ.. 

ಶ್ರೀದೇವಿ ಮಾರ್ಚ್ 12ರಂದು ಉದ್ಯಮಿ ಪತ್ನಿಗೆ ಕರೆ ಮಾಡಿ ಮಕ್ಕಳ ಸ್ಕೂಲ್ ಟಿ.ಸಿ ಕೊಡುತ್ತೇನೆ. ನಿಮ್ಮ ಪತಿಯನ್ನ ಸ್ಕೂಲ್‌ಗೆ ಕಳಿಸಿ ಎಂದಿದ್ದಾರೆ. ಶ್ರೀದೇವಿ ಪತ್ನಿಗೆ ಕರೆ ಮಾಡಿದ ಬೆನ್ನಲ್ಲೇ ಉದ್ಯಮಿ ಪ್ರೀ ಸ್ಕೂಲ್​ಗೆ ತೆರಳಿದ್ದಾರೆ.
ಉದ್ಯಮಿ ಪ್ರೀಸ್ಕೂಲ್​ಗೆ ಬಂದಾಗ ಶ್ರೀದೇವಿ ಜೊತೆಗಿದ್ದ ಸಾಗರ್, ಗಣೇಶ್ ಎಂಬುವವರು ಆವಾಜ್ ಹಾಕಿದ್ದಾರೆ. ಸಾಗರ್ ಜೊತೆ ಶ್ರೀದೇವಿಗೆ ಎಂಗೇಜ್ಮೆಂಟ್ ಆಗಿದೆ. ನೀನು ಯಾಕೆ ಹುಡುಗಿ ಮಜಾ ಮಾಡ್ತಿದ್ಯಾ? ಈ ವಿಚಾರ ಶ್ರೀದೇವಿ ತಂದೆ, ನಿನ್ನ ಪತ್ನಿಗೆ ತಿಳಿಸ್ತೇನೆಂದು ಬ್ಲ್ಯಾಕ್​ಮೇಲ್ ಮಾಡಿದ್ದಾರೆ.

ಆಗ ಉದ್ಯಮಿ ಶ್ರೀದೇವಿಗೆ ಬಾಯ್ ಫ್ರೆಂಡ್ ಇರೋ ವಿಚಾರ ನನಗೆ ಗೊತ್ತಿಲ್ಲ. ಶ್ರೀದೇವಿ ಜೊತೆ ಊಟ, ತಿಂಡಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

publive-image

ಸೀನ್ 5 : ಕಿಸ್​ To ಕ್ಯಾಶ್!
ಶ್ರೀದೇವಿ ಸ್ಕೂಲ್​ನಿಂದ ಆರೋಪಿ ಸಾಗರ್ ಹಾಗೂ ಗಣೇಶ್ ಉದ್ಯಮಿಯನ್ನು ಹೊರಗೆ ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಗೆ ಹೋಗೋಣ ಎಂದು ಉದ್ಯಮಿ ಕರೆದೊಯ್ದು, ಮಹಾಲಕ್ಷ್ಮಿ ಲೇಔಟ್​ನ ಉದ್ಯಮಿ ಮನೆ ಬಳಿ ಹೋಗಿದ್ದಾರೆ. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವೆಂದು ಬೆದರಿಕೆ ಹಾಕಿ ₹1 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಿಂದ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಫೈನಲ್ ಸೆಟಲ್ಮೆಂಟ್ ಅಂತ 20 ಲಕ್ಷಕ್ಕೆ ಉದ್ಯಮಿಯ ಬಳಿ ಡಿಮ್ಯಾಂಡ್ ಮಾಡಿದ್ದಾರೆ. ಬೆದರಿಕೆಗೆ ಹೆದರಿದ ಉದ್ಯಮಿ ಮೊದಲ ಕಂತಿನ ಭಾಗವಾಗಿ 1.90 ಲಕ್ಷ ರೂಪಾಯಿ ಕೊಟ್ಟಿದ್ದಾರೆ.

publive-image

ಸೀನ್ 6 : ಶ್ರೀದೇವಿ ಡಬಲ್ ಡಿಮ್ಯಾಂಡ್
ಹೀಗೆ ಲಕ್ಷ, ಲಕ್ಷ ಹಣ ಪೀಕಿದ್ರೂ ಶ್ರೀದೇವಿ ಹಣದ ದಾಹ ಕಡಿಮೆಯಾಗಿರಲಿಲ್ಲ. ಮಾರ್ಚ್ 17ರಂದು ಮತ್ತೆ ಉದ್ಯಮಿಗೆ ಶ್ರೀದೇವಿ ಕರೆ ಮಾಡಿದ್ದು, ಮತ್ತೆ 15 ಲಕ್ಷ ರೂಪಾಯಿ ಕೊಡುವಂತೆ ಕೇಳಿದ್ದಾರೆ. 15 ಲಕ್ಷ ರೂಪಾಯಿ ಕೊಟ್ಟರೆ ಅಶ್ಲೀಲ ವಿಡಿಯೋ, ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದ್ರೆ ನಿನ್ನ ಪತ್ನಿಗೆ ತೋರಿಸಿ ಸಂಸಾರ ಹಾಳು ಮಾಡೋ ಬೆದರಿಕೆ ಹಾಕಿದ್ದಾರೆ.

publive-image

ಸೀನ್ 7 : ಶ್ರೀದೇವಿ ಬಳಗ ಅರೆಸ್ಟ್
ಹೀಗೆ ನಿರಂತರ ಬ್ಲ್ಯಾಕ್​ ಮೇಲ್ ಹಾಗೂ ಸುಲಿಗೆಯಿಂದ ಬೇಸತ್ತ ಉದ್ಯಮಿ ಕೊನೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಶ್ರೀದೇವಿ ಗ್ಯಾಂಗ್ ಕಳ್ಳಾಟ ಬೆಳಕಿಗೆ ಬಂದಿದೆ. ಉದ್ಯಮಿ ದೂರಿನನ್ವಯ ಟೀಚರ್ ಶ್ರೀದೇವಿ, ಗಣೇಶ್​ ಮತ್ತು ಸಾಗರ್ ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment