newsfirstkannada.com

ಕಾಡ್ಗಿಚ್ಚಿನಿಂದ ಧಗಧಗಿಸಿದ ಚಿಲಿ ರಾಷ್ಟ್ರ; ಸಾವಿರಾರು ಮನೆಗಳಿಗೆ ಬೆಂಕಿ; 51ಕ್ಕೂ ಹೆಚ್ಚು ಬಲಿ

Share :

Published February 5, 2024 at 6:15am

    ಚಿಲಿ ರಾಷ್ಟ್ರದ ಅರಣ್ಯ ಪ್ರದೇಶದಲ್ಲಿ ಅಗ್ನಿಯ ನರ್ತನ

    ಅಗ್ನಿದೇವನ ರೌದ್ರಾವತಾರಕ್ಕೆ ವನ್ಯಪ್ರಾಣಿಗಳು ಬಲಿ

    ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಚಿಲಿ ದೇಶದಲ್ಲಿ ಕಾಡ್ಗಿಚ್ಚಿನಿಂದ ಭಾರೀ ಅನಾಹುತ ಸೃಷ್ಟಿಯಾಗಿದೆ. ಅಗ್ನಿಯ ರೌದ್ರ ತಾಂಡವಕ್ಕೆ ಅದೆಷ್ಟೋ ಮನೆಗಳು ಸುಟ್ಟು ಭಸ್ಮವಾಗಿದೆ. ಅಗ್ನಿ ನರ್ತನಕ್ಕೆ ಇಡೀ ಅರಣ್ಯ ಸಂಪತ್ತೇ ಸುಟ್ಟು ಭಸ್ಮವಾಗಿದೆ. ಕಾಡು ಪ್ರಾಣಿಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಜೊತೆಗೆ 50ಕ್ಕೂ ಹೆಚ್ಚು ಮಂದಿ ಕಾಡ್ಗಿಚ್ಚಿನ ಜ್ವಾಲೆಯಲ್ಲಿ ಸಜೀವ ದಹನವಾಗಿದ್ದಾರೆ.

ಸಾವಿರಾರು ಮನೆಗಳು ಧಗಧಗ.. ಜನ ಬದುಕು ಭಸ್ಮ

ದಕ್ಷಿಣ ಅಮೆರಿಕದಲ್ಲಿರೋ ಚಿಲಿ ರಾಷ್ಟ್ರದಲ್ಲಿ ಕಾಡ್ಗಿಚ್ಚಿನ ಭರಾಟೆ ಭಾರೀ ಜೋರಾಗಿದೆ. ಫೆಬ್ರವರಿ 2ರಂದು ಕಾಣಿಸಿಕೊಂಡಿದ್ದ ಬೆಂಕಿ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಅಗ್ನಿಯ ಜ್ವಾಲೆ ಊಹಿಸಲು ಆಗದ ರೀತಿಯಲ್ಲಿ ರೌದ್ರತಾಂಡವವಾಡುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಬೆಂಕಿಯ ವೇಗ ಹೆಚ್ಚಾಗುತ್ತಿದೆ. ಸಿಕ್ಕ ಸಿಕ್ಕ ನಗರಗಳು ಮನೆಗಳು, ಕಾಡುಗಳು, ವನ್ಯಪ್ರಾಣಿಗಳನ್ನ ತನ್ನ ಕೆನ್ನಾಲಿಗೆ ಚಾಚಿ ಸರ್ವನಾಶ ಮಾಡುತ್ತಿದೆ. ಇಡೀ ಅರಣ್ಯ ಸಂಪತ್ತು ಅಗ್ನಿಯ ಜ್ವಾಲೆಯಲ್ಲಿ ಅರೆಬೆಂದು ಹೋಗಿದೆ. ಎತ್ತ ನೋಡಿದ್ರೂ ಸ್ಮಶಾನದ ರೀತಿಯಲ್ಲಿ ಮನೆಗಳು ಕಾಣುತ್ತಿವೆ.

ಮಧ್ಯ ಚಿಲಿಯ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚು. ನಗರ ಪ್ರದೇಶಗಳಿಗೂ ಆವರಿಸಿದೆ. ಈಗಾಗಲೇ ಬೆಂಕಿಯ ಬಲೆಯಲ್ಲಿ ಸಿಲುಕಿ ಸುಮಾರು ಒಂದು ಸಾವಿರದ ನೂರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಇಡೀ ಊರಿಗೆ ಊರೇ ಸ್ಮಶಾನದಂತೆ ಭಾಸವಾಗುತ್ತಿದೆ. ಅಲ್ಲದೇ ಕೇಂದ್ರ ವಾಲ್ಪಾರೈಸೊ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯ ನರ್ತನದಲ್ಲಿ ಸಿಲುಕಿ ಈಗಾಗಲೇ 51ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ

ಚಿಲಿ ಕಾಡಿನಲ್ಲಿ ಹಬ್ಬಿರೋ ಬೆಂಕಿಯನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ. ವಾಲ್ಪಾರೈಸೊ ಪ್ರದೇಶದ ಹಲವು ಭಾಗಗಳಲ್ಲಿ ಕಪ್ಪು ಹೊಗೆಯು ಆಕಾಶವನ್ನೇ ಆವರಿಸಿಬಿಟ್ಟಿದೆ. ಅಗ್ನಿಶಾಮಕ ಸಿಬ್ಬಂದಿ, ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಹೆಣಗಾಡುತ್ತಿದ್ದಾರೆ. ಕರಾವಳಿ ಭಾಗದ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಇನ್ನೂ ಬೆಂಕಿಯಲ್ಲಿ ಸಿಲುಕಿದ ಜನರನ್ನ ರಕ್ಷಿಸಲು ರಕ್ಷಣಾ ಪಡೆಗಳು ಎಂಟ್ರಿ ಕೊಟ್ಟಿವೆ. ಆದ್ರೆ, ಬೆಂಕಿ ಆವರಿಸಿರೋ ಪ್ರದೇಶಗಳನ್ನ ತಲುಪಲು ಆಗದೇ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

ತುರ್ತು ಪರಿಸ್ಥಿತಿ ಘೋಷಣೆ.. ಜನರಲ್ಲಿ ಮೂಡಿದ ಆತಂಕ

ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅಲ್ಲದೇ ಈ ಬಗ್ಗೆ ಮಾತನಾಡಿ ಬೋರಿಕ್ ಮಾತನಾಡಿದ್ದು, ದೇಶದ ಪರಿಸ್ಥಿತಿ ನಿಜವಾಗಿಯೂ ತುಂಬಾ ಕಷ್ಟಕರವಾಗಿದೆ ಎಂದಿದ್ದಾರೆ. ಇನ್ನೂ ಚಿಲಿಯಲ್ಲಿ 92 ಕಡೆಗಳಲ್ಲಿ ಬೆಂಕಿ ಉರಿಯುತ್ತಿದ್ದು, 43,000 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶಕ್ಕೆ ಬೆಂಕಿ ಆವರಿಸಿದೆ. ಸುಮಾರು 110,000 ಎಕರೆ ಪ್ರದೇಶವನ್ನ ಸುಟ್ಟು ಭಸ್ಮವಾಗಿದೆ. ಅಲ್ಲದೇ ಕ್ಷಣ ಕ್ಷಣಕ್ಕೂ ಅಗ್ನಿದೇವ ತನ್ನ ಕಬಂಧಬಾಹುವನ್ನ ಚಾಚುತ್ತಾ ಸಾಗಿದ್ದಾನೆ. ಹೀಗಾಗಿ ಚಿಲಿ ದೇಶಾದ್ಯಂತ ಜನರು ತುಂಬಾ ಭಯಭೀತಗೊಂಡಿದ್ದಾರೆ. ಒಟ್ಟಾರೆ, ಅಗ್ನಿಯ ನರ್ತನಕ್ಕೆ ಅದೆಷ್ಟೋ ಮಂದಿ ಮನೆಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.. ಇದೀಗ ಸರ್ಕಾರ ಅವರ ರಕ್ಷಣೆಗೆ ಧಾವಿಸೋದಾಗಿ ತಿಳಿಸಿದೆ. ಅದೇನೆ ಇರಲಿ ಚಿಲಿ ದೇಶದಲ್ಲಿ ಪದೇ ಪದೇ ಈ ರೀತಿಯ ಅಗ್ನಿ ದುರಂತಗಳು ಸಂಭವಿಸತ್ತಲೇ ಇರುತ್ತವೇ. ಪ್ರಕೃತಿ ಮಾತೆಯ ಅವಕೃಪೆಯನ್ನ ಎದುರಿಸುತ್ತಲೇ ಇದೆ. ಇದೀಗ ಹಬ್ಬಿರೋ ಬೆೆಂಕಿ ಮತ್ತೆಷ್ಟು ಜೀವಗಳನ್ನ ಬಲಿಪಡಿಯುತ್ತೋ ಆ ಅಗ್ನಿದೇವನಿಗೇ ಗೊತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಡ್ಗಿಚ್ಚಿನಿಂದ ಧಗಧಗಿಸಿದ ಚಿಲಿ ರಾಷ್ಟ್ರ; ಸಾವಿರಾರು ಮನೆಗಳಿಗೆ ಬೆಂಕಿ; 51ಕ್ಕೂ ಹೆಚ್ಚು ಬಲಿ

https://newsfirstlive.com/wp-content/uploads/2024/02/chili.jpg

Load More