Advertisment

ಇನ್ನೋವಾ ಕಾರಲ್ಲಿ 10 ಕೋಟಿ ಹಣದ ಜತೆಗೆ 52 ಕೆಜಿ ಚಿನ್ನ ಪತ್ತೆ; ಬೆಚ್ಚಿಬಿದ್ದ ಐಟಿ ಅಧಿಕಾರಿಗಳು

author-image
Gopal Kulkarni
Updated On
Gold Rate: ಇಂದು ಬಂಗಾರ ಖರೀದಿಸಬಹುದೇ? ಎಷ್ಟಿದೆ ಬೆಲೆ? ಇಲ್ಲಿದೆ ಮಾಹಿತಿ
Advertisment
  • ಮಧ್ಯಪ್ರದೇಶದ ಇಂದೋರ್, ಭೋಪಾಲ್​ನಲ್ಲಿ ಐಟಿ ಮಿಂಚಿನ ದಾಳಿ
  • ದಾಳಿಗೆ ಹೆದರಿ ಕಾಡಿನ ಮಧ್ಯ ಕಾರ್ ಬಿಟ್ಟು ಹೋದರಾ ಆಗಂತುಕರು?
  • ಸ್ಥಳಕ್ಕೆ ಬಂದ ಐಟಿ ಅಧಿಕಾರಿಗಳಿಗೆ ಕಾರ್​ನಲ್ಲಿ ಕಂಡಿದ್ದು ಎಷ್ಟು ಕೆಜಿ ಚಿನ್ನ

ಕಾಡಿನಲ್ಲಿ ಬಿಟ್ಟು ಹೋದ ಕಾರಿನಲ್ಲಿ ಸುಮಾರು 52 ಕೆಜಿ ಚಿನ್ನ ಹಾಗೂ 10 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಕಮಿಷನರ್ ಇತ್ತೀಚೆಗೆ ಅನೇಕ ಕನ್​​ಸ್ಟ್ರಕ್ಷನ್ ಕಂಪನಿಗಳ ಮೇಲೆ ನಡೆಯುತ್ತಿರುವ ರೇಡ್​ಗಳ ಪರಿಣಾಮ ಇಂತಹದೊಂದು ಸೀಜ್​ಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

Advertisment

ಸದ್ಯ ನಡೆಯುತ್ತಿರುವ ದಾಳಿಯಿಂದಾಗಿ ಭೂಪಾಲ್ ಹಾಗೂ ಇಂದೋರ್​ನಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಇಂದು ಕಾಡಿನಲ್ಲಿ ಒಂದು ಕಾರು ಅನಾಥವಾಗಿ ನಿಂತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಅಲ್ಲಿ ನೂರು ಜನ ಪೊಲೀಸ್ ಟೀಮ್​ ಜೊತೆ ಐಟಿ ಅಧಿಕಾರಿಗಳು ಮೆಂಡೋರಿ ಹಳ್ಳಿಯ ಬಳಿ ಇದ್ದ ಈ ಕಾರ್​ನ್ನು ಸೀಜ್ ಮಾಡಿದ್ದೇವೆ ಅದರಲ್ಲಿ 52 ಕೆಜಿ ಚಿನ್ನ ಹಾಗೂ 10 ಕೋಟಿ ರೂಪಾಯಿ ನಗದು ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಅಪರಿಚಿತ ವ್ಯಕ್ತಿ ಶ*ವದ ಜೊತೆಗೆ ಬಂತು ಲೆಟರ್​​; ಪಾರ್ಸೆಲ್ ನೋಡಿ ಬೆಚ್ಚಿಬಿದ್ದ ಮಹಿಳೆ

ಕಳೆದ ಒಂದು ವಾರದಲ್ಲಿ ಐಟಿ ಇಲಾಖೆ ಇಂದೋರ್ ಹಾಗೂ ಭೋಪಾಲ್​ನಲ್ಲಿ ನಿರಂತರ ದಾಳಿ ನಡೆಸುತ್ತಿದೆ. ಈಗಾಗಲೇ 2.85 ಕೋಟಿ ರೂಪಾಯಿಯನ್ನು ಆರ್​ಟಿಒ ಕಾನ್​ಸ್ಟೇಬಲ್ ಸುರಭ್ ಶರ್ಮಾ ಎಂಬುವವರ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಡಿಎಸ್​ಪಿ ರವೀಂದ್ರ ಸಿಗ್​ ಹೇಳುವ ಪ್ರಕಾರ ಕಾನ್​ಸ್ಟೇಬಲ್ ಮನೆಯಲ್ಲಿ 60ಕೆಜಿ ಸಿಲ್ವರ್ ಬಾರ್​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆಯಂತೆ.

Advertisment

ಇದನ್ನೂ ಓದಿ:ಮಧ್ಯರಾತ್ರಿ ಹೆಣ್ಣುಮಕ್ಕಳಿಗೆ ಲಿಫ್ಟ್​​ ಕೊಡೋ ಮುನ್ನ ಎಚ್ಚರ! ಪುರುಷರು ಓದಲೇಬೇಕಾದ ಸ್ಟೋರಿ

ಇದರಾಚೆ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳು ಸೇರಿದಂತೆ 50 ಲಕ್ಷ ರೂಪಾಯಿಯನ್ನು ದಾಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಇನ್ನು ಸೌರಭ ಶರ್ಮಾ ಮನೆಯಲ್ಲಿ 4 ಲಕ್ಸೂರಿ ಕಾರ್​ಗಳು ಕೂಡ ಕಂಡು ಬಂದಿವೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment