Advertisment

ವೀಕ್​ ಆಫ್​ ಅಂತ ಎಣ್ಣೆ ಹಾಕ್ತೀರಾ?.. ಎಣ್ಣೆ ನಮ್ದು ಊಟ ನಿಮ್ದು ಅಂತ ಪಂಗನಾಮ ಹಾಕ್ತಾರೆ.. ಹುಷಾರ್​ ಕಣ್ರಿ

author-image
AS Harshith
Updated On
ಸಬ್​ ಇನ್ಸ್ಪೆಕ್ಟರ್​ ಮೇಲೆ ಮದ್ಯ ಸಾಗಾಟದ ವಾಹನ ಹರಿಸಿ ಹತ್ಯೆ; ಓರ್ವ ಹೋಮ್‌ಗಾರ್ಡ್​ಗೆ ತೀವ್ರ ಗಾಯ
Advertisment
  • ಒಂದಲ್ಲಾ, ಎರಡಲ್ಲಾ ಬರೋಬ್ಬರಿ 52 ಸಾವಿರ ರೂಪಾಯಿ ವಂಚನೆ
  • ಬೆಸ್ಕಾಂ ಉದ್ಯೋಗಿಗೆ ಕುಡಿದ ಮತ್ತಿನಲ್ಲಿ ಸರಿಯಾಗಿ ಯಾಮಾರಿಸಿದ ಯುವಕ
  • ಅಪರಿಚಿತ ವ್ಯಕ್ತಿ ಹತ್ರ ಬಂದ್ರೆ ಕೊಂಚ ಎಚ್ಚರ.. ಎಣ್ಣೆ ಹೊಡೆಯೋ ನೆಪದಲ್ಲಿ ಮೋಸ ಹೋಗ್ಬೇಡಿ

ಬೆಂಗಳೂರು: ವೀಕ್​ ಆಫ್​ ಅಂತ ಎಣ್ಣೆ ಹೊಡೆಯೋರೋ ಹುಷಾರ್​. ಟೈಟ್ ಆದ ಬಳಿಕ ಊಟ ಕೇಳುವ ನೆಪದಲ್ಲಿ ಹತ್ತಿರ ಬಂದು ವಂಚಿಸಿದ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಯುವಕನೋರ್ವ ಬಲೆಗೆ ಬೆಸ್ಕಾಂ ಉದ್ಯೋಗಿ ಬಿದ್ದು ಮೋಸ ಹೋಗಿದ್ದು,. ಬರೋಬ್ಬರಿ 52 ಸಾವಿರ ರೀಪಾಯಿ ಕಳೆದುಕೊಂಡಿದ್ದಾರೆ.

Advertisment

ಎಣ್ಣೆ ನಮ್ದು ಊಟ ನಿಮ್ದು 

ಶ್ರೀನಿವಾಸ್ ಎಂಬ ಬೆಸ್ಕಾಂ ಉದ್ಯೋಗಿ ಮೋಸಹೋದವರು. ವಾರದ ರಜೆ ಎಂದು ಅದಾಗಲೇ ಎರಡು ಬಾರ್ ನಲ್ಲಿ ಮಧ್ಯ ಸೇವೆಸಿದ್ದ ಶ್ರೀನಿವಾಸ್, ರಾತ್ರಿ ಊಟಕ್ಕೆಂದು ಮನೆಯಿಂದ ಮತ್ತೆ ಹೊರ ಬಂದಿದ್ದರು. ಈ ವೇಳೆ ಹೋಟೆಲ್ ನಲ್ಲಿ ಹತ್ತಿರ ಬಂದ ಅಪರಿಚಿತ ಯುವಕ ಊಟ ಕೊಡಿಸುವಂತೆ ಕೇಳಿದ್ದ. ನಾನ್ ವೆಜ್ ಕೊಡಿಸಿದ ಕೂಡಲೇ ಅಪರಿಚಿತ ಯುವಕ ಶ್ರೀನಿವಾಸ್ ಕೈ ಹಿಡಿದಿದ್ದ. ಬಳಿಕ ಊಟ ನಿಮ್ದು ಎಣ್ಣೆ ನಂದು ಅಂತ ಬಲವಂತ ಮಾಡಿದ್ದಾನೆ. ಆ ಬಳಿಕ ಆತನ ಜೊತೆ ಮತ್ತೆ ಎಣ್ಣೆ ಹೊಡೆಯಲು ಶ್ರೀನಿವಾಸ್ ಹೋಗಿದ್ದಾರೆ.

ಎಣ್ಣೆ ಹೊಡೆಯುತ್ತಾ ಟೈಟ್ ಆದ ಬಳಿಕ ಶ್ರೀನಿವಾಸ್ ಜೇಬಿನಲ್ಲಿದ್ದ 52 ಸಾವಿರ ನಗದನ್ನು ಎಗರಿಸಿ ಯುವಕ ಪರಾರಿಯಾಗಿದ್ದಾನೆ. ಈ ವಿಚಾರಗೊತ್ತಾದಂತೆ ಮರುದಿನ ಶ್ರೀನಿವಾಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನ ಹಿನ್ನಲೆ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment