/newsfirstlive-kannada/media/post_attachments/wp-content/uploads/2024/10/Mayyalagan.jpg)
ಮಯ್ಯಳಗನ್ ಅನ್ನೋ ಸಿನಿಮಾ ಮನುಷ್ಯನೊಳಗಿನ ಸಂತನನ್ನ ಪರಿಚಯಿಸುತ್ತದೆ. ಥೇಟ್ ಮಯ್ಯಳಗನ್ ಸಿನಿಮಾದಂತೆಯೇ ಇಲ್ಲೊಬ್ಬ ಹೃದಯವಂತ ಕಳ್ಳ ಮಾಡಿದ ಕೆಲಸ ಇದೀಗ ವೈರಲ್ ಆಗುತ್ತಿದೆ. ಕೊನೆಗೂ ಪ್ರಾಮಾಣಿಕತೆ ಮೆರೆದ ಕಳ್ಳನ ಸ್ಟೋರಿ ಮನಮಿಡಿಯುವಂತಿದೆ. ಯಾರೀ ಕಳ್ಳ? ಏನೀವನ ಕಥೆ ಅನ್ನೋದು ನಿಮಗೆ ಅರ್ಥವಾಗಬೇಕು ಅಂದ್ರೆ ಫ್ಲಾಶ್ಬ್ಯಾಕ್ಗೆ ಹೋಗಬೇಕು.
54 ವರ್ಷಗಳ ಹಿಂದೆ... ಕಳ್ಳ!
ಹೊಟ್ಟೆಪಾಡಿಗಾಗಿ ಅವತ್ತು ಎಷ್ಟೋ ತಮಿಳುನಾಡಿನ ಜನ ಶ್ರೀಲಂಕಾಗೆ ಹೋಗುತ್ತಿದ್ದರು. ಅದೇ ರೀತಿ ಸುಬ್ರಹ್ಮಣ್ಯ ಹಾಗೂ ಇಗವೈ ಅನ್ನೋ ದಂಪತಿ ಜೊತೆ ಪಕ್ಕದ ಮನೆಯ ಹುಡುಗ ರಾಜನ್ ಕೂಡ ಶ್ರೀಲಂಕಾಗೆ ಹೋಗಿದ್ದ. 1977ನೇ ಇಸವಿ ರಾಜನ್ಗೆ 17 ವರ್ಷ ವಯಸ್ಸು. ಸುಬ್ರಹ್ಮಣ್ಯ ಹಾಗೂ ಇಗವೈ ದಂಪತಿ ಮತ್ತೊಂದು ಟೀ ಎಸ್ಟೇಟ್ಗೆ ಕೆಲಸಕ್ಕೆ ಹೋಗಲು ನಿರ್ಧರಿಸಿದ್ರು. ತಾವಿದ್ದ ಮನೆಯಲ್ಲಿ ತೊರೆಯೋದಕ್ಕೆ ಮುಂದಾಗಿದ್ದರು. ಈ ಸಂದರ್ಭ ರಾಜನ್ ಅವರನ್ನು ಕಳುಹಿಸಿಕೊಡೋದಕ್ಕೆ ಮನೆಯ ಸಾಮಾನು ಜೋಡಿಸುತ್ತಿದ್ದ. ಇದೇ ವೇಳೆ ತಲೆದಿಂಬಿನ ಕೆಳಗೆ 37 ರೂಪಾಯಿ ಇರುವುದು ಕಂಡಿತ್ತು. ಈ ವಿಷಯವನ್ನು ದಂಪತಿಗಳಿಗೆ ತಿಳಿಸದೇ ತಾನೇ ಎತ್ತಿಟ್ಟುಕೊಂಡುಬಿಟ್ಟಿದ್ದ. ಮುಂದೆ ಅಂಗಡಿ ತೆರೆದ, ಮತ್ತೊಂದು ಮಗದೊಂದು ವ್ಯವಹಾರ ಮಾಡಿ ವಾಪಾಸ್ ತಮಿಳುನಾಡಿಗೆ ಬಂದುಬಿಟ್ಟ.
ಇದನ್ನೂ ಓದಿ: ನ್ಯೂಸ್ಫಸ್ಟ್ಗೆ ಲಂಡನ್ನಿಂದ ಧನ್ಯವಾದ ತಿಳಿಸಿದ PhD ವಿದ್ಯಾರ್ಥಿನಿ.. ಈ ಥ್ಯಾಂಕ್ಸ್ ಹಿಂದಿದೆ ನೋವಿನ ಕಥೆ
ಸೀನ್ ಕಟ್ ಮಾಡಿದ್ರೆ ಶ್ರೀಮಂತ!
ಬಡ ದಂಪತಿಗಳ ಬಳಿ ಬಡವನಾಗಿದ್ದಾಗಲೇ ರಾಜನ್ 37 ರೂಪಾಯಿ ಕದ್ದಿದ್ದ. 54 ವರ್ಷಗಳಲ್ಲಿ ತಮಿಳುನಾಡಿಗೆ ಬಂದು ದೊಡ್ಡದಾಗಿ ಬೆಳೆದ. ಎಷ್ಟರ ಮಟ್ಟಿಗೆ ಬೆಳೆದ ಅಂದ್ರೆ ರಾಜನ್ ಇಂದು ಲಕ್ಷಾಂತರ ರೂಪಾಯಿ ಗಳಿಸುವ ಉದ್ಯಮಿ. ನೂರಾರು ಕುಟುಂಬಕ್ಕೆ ಅನ್ನ ನೀಡುವ ಅನ್ನದಾತ. ಇಂಥಾ ಹೊತ್ತಿನಲ್ಲೇ ಅದೊಂದು ದಿನ ಧರ್ಮಗ್ರಂಥವನ್ನು ಓದುತ್ತಾ ಕುಳಿತವನಿಗೆ ಅದೊಂದು ಸಾಲು ಈಟಿಯಂತೆ ಚುಚ್ಚಿತ್ತು. ಪರರ ವಸ್ತು ಪಾಶಾಣ. ಅದನ್ನು ಅವರಿಗೆ ವಾಪಸ್ ಕೊಟ್ಟುಬಿಡಿ ಅನ್ನೋ ಸಾಲಿತ್ತು. ಇದೇ ಆಗಸ್ಟ್ 20ರಂದು ತನ್ನ ಸ್ನೇಹಿತನೊಂದಿಗೆ ಶ್ರೀಲಂಕಾಗೆ ಹೊರಟ ರಂಜನ್ ಆ ದಂಪತಿಗಳನ್ನು ಹುಡುಕಿದ. ಆರು ಮಕ್ಕಳನ್ನು ಹೊಂದಿದ್ದ ದಂಪತಿ ಇವತ್ತು ವೃದ್ಧರಾಗಿದ್ರು. ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ, ಆರೋಗ್ಯ ವಿಚಾರಿಸಿ ಕದ್ದಿದ್ದ ₹37ರೂಪಾಯಿಗೆ ಬದಲಾಗಿದೆ ₹70,000 ಹಣವನ್ನು ಹಿಂತಿರುಗಿಸಿ ಬಂದಿದ್ದಾರೆ. ಇದಲ್ಲವೇ ಹೃದಯವಂತಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ