/newsfirstlive-kannada/media/post_attachments/wp-content/uploads/2024/06/Haj-Yatra.jpg)
ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಮುಸ್ಲಿಂ ಬಾಂಧವರ ಆಸೆಯಾಗಿರುತ್ತೆ. ಪ್ರತಿ ವರ್ಷ ಮುಸ್ಲಿಂ ಬಾಂಧವರು ಮೆಕ್ಕಾ ಮದೀನಾಕ್ಕೆ ತೆರಳಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಹಜ್ ಯಾತ್ರೆ ಮಾತ್ರ ನಿಲ್ಲೋದಿಲ್ಲ.
ಇದನ್ನೂ ಓದಿ: BREAKING: ಮೆಗಾ ಸ್ಟಾರ್ ಚಿರಂಜೀವಿ ಮಾಜಿ ಅಳಿಯ ಹಠಾತ್ ನಿಧನ; ಕಾರಣವೇನು?
ಈ ಬಾರಿ ಮೆಕ್ಕಾದಲ್ಲಿ ದುರಂತವೇ ಸಂಭವಿಸಿದೆ. ಹಜ್ ಯಾತ್ರೆಗೆ ಹೋಗಿದ್ದ ವಿವಿಧ ದೇಶಗಳ 550 ಯಾತ್ರಾರ್ಥಿಗಳು ಸಾವನ್ನಪ್ಪಿರುವ ವರದಿಯಾಗಿದೆ. ಮೆಕ್ಕಾದ ರಸ್ತೆ ಬೀದಿಯಲ್ಲಿ ಯಾತ್ರಾರ್ಥಿಗಳು ಅಸ್ವಸ್ಥರಾಗಿ ಮಲಗಿದ್ದಾರೆ. ಯಾತ್ರೆಯಲ್ಲಿ ಉಸಿರು ಬಿಟ್ಟ ಯಾತ್ರಾರ್ಥಿಗಳ ಶವಗಳನ್ನು ವಿಲೇವಾರಿ ಮಾಡಿಲ್ಲ ಅನ್ನೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Dead bodies everywhere on the streets of Mecca... Dozens of Haj pilgrims have died so far due to the heat of the sun. Bodies of recently deceased people were kept on the roadside in Mecca. The Saudi government is being criticized for keeping dead bodies on the roadside. pic.twitter.com/n6TuLctGHh
— Baba Banaras™ (@RealBababanaras) June 19, 2024
ಮೆಕ್ಕಾದಲ್ಲಿ ಕಳೆದ ವರ್ಷ 240 ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಈಜಿಪ್ಟ್ ದೇಶದ 323 ಮಂದಿ, ಜೋರ್ಡಾನ್ ದೇಶದ 60 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!
550 ಸಾವಿಗೆ ಕಾರಣವೇನು?
ಮೆಕ್ಕಾದಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದೆ. ಈ ಬಾರಿ ಉಷ್ಣಾಂಶ 51.8 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಈ ಉಷ್ಣಾಂಶ ಏರಿಕೆಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಮೆಕ್ಕಾದ ಉಷ್ಣ ಗಾಳಿ ಹಾಗೂ ಹೀಟ್ ಸ್ಟ್ರೋಕ್‌ನಿಂದ 240 ಮಂದಿ ಸಾವನ್ನಪ್ಪಿದ್ದರು. ಈ ವರ್ಷ ಯಾತ್ರಾರ್ಥಿಗಳ ಸಾವಿನ ಸಂಖ್ಯೆ 550ಕ್ಕೆ ಏರಿಕೆಯಾಗಿದೆ. ಹೀಟ್ ಸ್ಟ್ರೋಕ್‌ನಿಂದ ಅಸ್ವಸ್ಥಗೊಂಡಿರುವ 2 ಸಾವಿರ ಮಂದಿಗೆ ಸೌದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ