/newsfirstlive-kannada/media/post_attachments/wp-content/uploads/2025/07/DARSHAN_SMILE.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್ ಅವರಿಗೆ ವಿದೇಶಕ್ಕೆ ತೆರಳಲು 57ನೇ ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಬಹು ನಿರೀಕ್ಷಿತ ಡೆವಿಲ್ ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಥೈಲ್ಯಾಂಡ್​​ಗೆ ತೆರಳಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 57ನೇ ಸೆಷನ್ಸ್ ನ್ಯಾಯಾಲಯ ನಟ ದರ್ಶನ್ ಅವರಿಗೆ ಥೈಲ್ಯಾಂಡ್​ಗೆ ತೆರಳಬಹುದು ಎಂದು ಹೇಳಿದೆ. ಅದು ಜುಲೈ11 ರಿಂದ 30 ರವರೆಗೆ ಮಾತ್ರ ವಿದೇಶಕ್ಕೆ ತೆರಳಲು ಕಾಲಾವಕಾಶ ನೀಡಲಾಗಿದೆ. ಈ ಸಮಯ ಮುಗಿದ ಮೇಲೆ ದರ್ಶನ್ ಅವರು ಮತ್ತೆ ವಾಪಸ್ ಆಗಿರಬೇಕು.
ಇದನ್ನೂ ಓದಿ: ಸ್ಮೃತಿ ಇರಾನಿಗೆ ಅಂದು ಸೀರಿಯಲ್​ನಲ್ಲಿ ನಟನೆಗೆ 1,800 ಸಂಭಾವನೆ.. ಆದ್ರೆ ಇಂದು 14 ಲಕ್ಷ ರೂಪಾಯಿ!
/newsfirstlive-kannada/media/post_attachments/wp-content/uploads/2024/09/DARSHAN_PAVITRA-4.jpg)
ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್​​ಗಾಗಿ ದರ್ಶನ್​ಗೆ 20 ದಿನಗಳವರೆಗೆ ಅವಕಾಶ ನೀಡಲಾಗಿದೆ. ಜುಲೈ 11 ರಂದೇ ದರ್ಶನ್ ಅವರು ಥೈಲ್ಯಾಂಡ್​ಗೆ ತೆರಳಬಹುದು. ಏಕೆಂದರೆ ಕೋರ್ಟ್​ ನೀಡಿದ ಸಮಯದೊಳಗೆ ಸಿನಿಮಾ ಶೂಟಿಂಗ್ ಮಾಡಿಕೊಂಡು ಹಿಂತಿರಗಬೇಕಿದೆ. ಇನ್ನು ಕೇವಲ 3 ದಿನಗಳು ಬಾಕಿ ಇರುವುದರಿಂದ ಡೆವಿಲ್ ಚಿತ್ರತಂಡ ಹಾಗೂ ದರ್ಶನ್ ಅವರು ಥೈಲ್ಯಾಂಡ್​ಗೆ ತೆರಳಲು ಪೂರ್ವ ಸಿದ್ಧತೆಯಲ್ಲಿರಬಹುದು.
ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾಗೌಡ ಎ1 ಆರೋಪಿ ಆಗಿದ್ರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನು ಕೆಲವರು ಇದ್ದು ಅವರು ರಾಜ್ಯದ ಬೇರೆ ಬೇರೆ ಜೈಲಿನಲ್ಲಿ ಇದ್ದಾರೆ. ಜಾಮೀನಿನ ಮೇಲೆ ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಈ ಹಿಂದೆಯೇ ಮಾಡಿತ್ತು. ಆದರೆ ದರ್ಶನ್​ಗೆ ವಿದೇಶಕ್ಕೆ ತೆರಳಲು ಅನುಮತಿ ಇರಲಿಲ್ಲ. ಹಾಗಾಗಿ ಕೋರ್ಟ್​​ನಿಂದ ಅನುಮತಿ ಪಡೆದಿದ್ದು ಡೆವಿಲ್ ಸಿನಿಮಾ ಶೂಟಿಂಗ್​​ಗೆ ಎಂದು ದರ್ಶನ್​ ಥೈಲ್ಯಾಂಡ್​ಗೆ ಸದ್ಯದಲ್ಲೇ ಪ್ರವಾಸ ಬೆಳೆಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


