ಕನ್ನಡಿಗರ ಕಣ್ಮಣಿ ಯು ಡಿಜಿಟಲ್​ಗೆ 5ರ ಸಂಭ್ರಮ..ಯು ಡಿಜಿಟಲ್ ಸಾಧನೆ ಹಾಡಿ ಹೊಗಳಿದ ಗಣ್ಯರು

author-image
Gopal Kulkarni
Updated On
ಕನ್ನಡಿಗರ ಕಣ್ಮಣಿ ಯು ಡಿಜಿಟಲ್​ಗೆ 5ರ ಸಂಭ್ರಮ..ಯು ಡಿಜಿಟಲ್ ಸಾಧನೆ ಹಾಡಿ ಹೊಗಳಿದ ಗಣ್ಯರು
Advertisment
  • ಮೈಸೂರಿನಲ್ಲಿ ಯು ಡಿಜಿಟಲ್​ನ 5ನೇ ವರ್ಷದ ಸಂಭ್ರಮದ ಹರ್ಷ
  • ನ್ಯೂಸ್​ಫಸ್ಟ್​ ಮುಖ್ಯಸ್ಥರಾದ ರವಿಕುಮಾರ್ ಸೇರಿ ಗಣ್ಯರು ಭಾಗಿ
  • ನಗರದ ಖಾಸಗಿ ರೆಸಾರ್ಟ್​​ನಲ್ಲಿ ಅದ್ಧೂರಿ ವಾರ್ಷಿಕೋತ್ಸವದ ಸಂಭ್ರಮ

ಯು ಡಿಜಿಟಲ್ ನ 5 ವರ್ಷದ ವಾರ್ಷಿಕೋತ್ಸವ , ನಗರದ ವಿಂಡ್ ಪ್ಲವರ್ ಹೋಟೆಲ್ ನಲ್ಲಿ ಮಿಂಚಿನ ಕಲರವ, ಕಾರ್ಯಕ್ರಮದಲ್ಲಿ ನ್ಯೂಸ್ ಫಸ್ಟ್ ಮುಖ್ಯಸ್ಥರಾದ ರವಿಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಶಾಸಕರಾದ ಗಣಿಗ ರವಿ, ಹರೀಶ್ ಗೌಡ, ಯು ಡಿಜಿಟಲ್ ಮುಖ್ಯಸ್ಥರಾದ ಮಂಜುನಾಥ್ ಸೇರಿ ಅನೇಕ ಗಣ್ಯರು ಭಾಗಿ

ಕನ್ನಡಿಗರ ಕಣ್ಮಣಿ ಯು ಡಿಜಿಟಲ್​​ಗೆ 5 ನೇ ವರ್ಷದ ವಾರ್ಷಿಕೋತ್ಸ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯ್ತು. ನಗರದ ಖಾಸಗಿ ರೆಸಾರ್ಟ್​ನಲ್ಲಿ ಅದ್ಧೂರಿಯಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

publive-image

ಮೊದಲಿಗೆ ದೀಪ ಬೆಳಗುವ ಮೂಲಕ ಯು ಡಿಜಿಟಲ್​​ 5 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಾಯ್ತು. ಈ ಕಾರ್ಯಕ್ರಮದಲ್ಲಿ ನ್ಯೂಸ್​ಫಸ್ಟ್​ ಸುದ್ದಿ ವಾಹಿನಿಯ ಸಿಇಓ ಕಮ್​ ಎಂ.ಡಿ ಎಸ್​.ರವಿಕುಮಾರ್,​ ಮಾಧ್ಯಮ ಕ್ಷೇತ್ರದ ಹಿರಿಯರು, ರಾಜಕೀಯ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದ್ರು. ಇದೇ ವೇಳೆ ಹಿರಿಯ ಪತ್ರಕರ್ತರಾದ ಹೆಚ್​.ಆರ್​.ರಂಗನಾಥ್​ ಮಾತನಾಡಿ ಯು ಡಿಜಿಟಲ್ ಸಾಧನೆಯನ್ನು ಕೊಂಡಾಡಿದ್ರು. ಹಾಗೂ ಹೊರರಾಜ್ಯ, ಹೊರ ದೇಶದ ನೆಟ್ ವರ್ಕ್ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕಿವಿ ಮಾತು ಹೇಳಿದ್ರು.

ಇದನ್ನೂ ಓದಿ:ರಾಷ್ಟ್ರಮಟ್ಟದ ಅನ್ವೇಷಣ 2025; ವಿಜೇತ ತಂಡಗಳಿಗೆ BMSIT ಕಾಲೇಜಿನಿಂದ ಬಹುಮಾನ

publive-image

ಇನ್ನು ನ್ಯೂಸ್​ಫಸ್ಟ್ ಸುದ್ದಿವಾಹಿನಿಯ ಸಿಇಓ ಮತ್ತು ಎಂ.ಡಿಯಾದ ಎಸ್​ ರವಿಕುಮಾರ್​ ಅವರು ಮಾತನಾಡಿ, ಕೇಬಲ್​ ನೆಟ್​ವರ್ಕ್​ಗಳ ಆಗು ಹೋಗುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು ಹಾಗೂ ಮಾಧ್ಯಮವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

publive-image

ಇನ್ನು ಮಂಡ್ಯ ಶಾಸಕ ಗಣಿರ ರವಿಕುಮಾರ್​ ಅವರು ಕೇಬಲ್ ಬ್ಯುಸಿನೆಸ್​ ಅಲ್ಲಿ ಹೇಗೆ ಕಾಂಪಿಟೇಶನ್ ಇರುತ್ತೆ ಅನ್ನೋದನ್ನ ವಿವರಿಸಿದ್ರು. ಹಾಗೂ ತಮ್ಮ ಕೇಬಲ್​ ಬ್ಯುಸಿನೆಸ್​ ಅನುಭವವನ್ನು ಹಂಚಿಕೊಂಡರು.

ಇದನ್ನೂ ಓದಿ:ಕೇಂದ್ರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​​; ಮಹತ್ವದ ತೀರ್ಮಾನ

ಒಟ್ಟಾರೆ ಯು ಡಿಜಿಟಲ್ 5 ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಒಂದು ಕಡೆ ಗಣ್ಯರ ಮಾತು ಮತ್ತೊಂದೆಡೆ ಮನರಂಜನೆ ಕಾರ್ಯಕಗಳು ಎಲ್ಲರ ಕಣ್ಮನ ಸೆಳೆಯಿತು. ಯು ಟಿಜಿಟಲ್​ ಇದೇ ರೀತಿ ಕನ್ನಡಿಗರ ಮನೆ ಮನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ.

Advertisment