newsfirstkannada.com

ಆಂಧ್ರದಿಂದ ಬೆಂಗಳೂರಿಗೆ ಮೊಬೈಲ್​ ಕದಿಯಲು ಬರ್ತಾರೆ, ಕದ್ದ ಐಟಂ ಇಡಲು ಬಾಡಿಗೆ ರೂಂ ಮಾಡ್ತಾರೆ!

Share :

Published April 13, 2024 at 8:04am

    ಸ್ಮಾರ್ಟ್​ಫೋನ್​ ಬಳಕೆದಾರರೇ ಹುಷಾರ್​.. ಈ ಕಳ್ಳರ ಕತೆ ಕೇಳಲೇಬೇಕು

    ಆಂಧ್ರದಿಂದ ಮೊಬೈಲ್​ ಎಗರಿಸಲೆಂದೇ ಬೆಂಗಳೂರಿಗೆ ಬರ್ತಾರೆ, ಹುಷಾರ್​

    ಬಿಎಂಟಿಸಿ ಏರುವ ಮತ್ತು ಇಳಿಯುವ ಮುನ್ನ ಮೊಬೈಲ್​ ಇದೆಯಾ ಚೆಕ್​ ಮಾಡಿ

ಬೆಂಗಳೂರು: ಮೊಬೈಲ್ ಕದಿಯಲಿಕ್ಕೆ ಅಂತಾನೇ ಆಂಧ್ರದಿಂದ ಬಂದು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಳ್ಳುತ್ತಿದ್ದ ಆಂಧ್ರ ಮೂಲದ ಆರು ಮಂದಿ ಮೊಬೈಲ್ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರು ಬೆಂಗಳೂರಲ್ಲಿ ಕಳ್ಳತನ ಮಾಡಿದ ಮೊಬೈಲ್ಸ್​ಗಳನ್ನು ಆಂಧ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕಳ್ಳರು ನಗರದ ಬಿಎಂಟಿಸಿ ಬಸ್​ನಲ್ಲೆಲ್ಲಾ ಓಡಾಡಿ ಮೊಬೈಲ್ ಎಗರಿಸ್ತಾರೆ. ಜನನಿಬಿಡ ಬಸ್ ನಿಲ್ದಾಣ, ಬಸ್ ಹತ್ತುವ ಹಾಗೂ ಇಳಿಯುವ ವೇಳೆ ಮೊಬೈಲ್ ಎಗರಿಸ್ತಾರೆ.

ಕಳ್ಳರು ಕದ್ದ ಮೊಬೈಲನ್ನ ಇಡಲಿಕ್ಕೆಂದೆ ಕಾಡುಗೋಡಿಯ ಚನ್ನಸಂದ್ರ ಹಾಗೂ ಆವಲಹಳ್ಳಿಯಲ್ಲಿ ಬಾಡಿಗೆ ರೂಂ ಮಾಡಿಕೊಂಡಿದ್ರು. ಕದ್ದ ಮೊಬೈಲನ್ನ ಒಂದೆಡೆ ಇಟ್ಟು ಏನು ಗೊತ್ತಿಲ್ಲದಂತೆ ಮತ್ತೊಂದು ರೂಂ ನಲ್ಲಿ ಇರುತ್ತಿದ್ದರು.

ಇದನ್ನೂ ಓದಿ: RAIN: ಮಳೆ ಬಂತು ಮಳೆ.. ರೈತರ ಮೊಗದಲ್ಲಿ ಸಂಭ್ರಮದ ಕಳೆ.. ಖುಷಿಯಲ್ಲಿ ಸಖತ್​ ಡ್ಯಾನ್ಸ್​ ಮಾಡಿದ ಜನರು

ಆದರೀಗ ಕೊನೆಗೂ ಆಂಧ್ರ ಮೂಲದ ಆರು ಮಂದಿ ಮೊಬೈಲ್ ಕಳ್ಳರನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರ ಮೂಲದ ರವಿತೇಜ, ವೆಂಕಟೇಶ್, ಬಾಲರಾಜ್, ಪೆದ್ದರಾಜ್, ರಮೇಶ್, ಸಾಯಿಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೂವತ್ತು ಲಕ್ಷ ಮೌಲ್ಯದ ವಿವಿಧ ಕಂಪನಿಯ 117 ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದಿಂದ ಬೆಂಗಳೂರಿಗೆ ಮೊಬೈಲ್​ ಕದಿಯಲು ಬರ್ತಾರೆ, ಕದ್ದ ಐಟಂ ಇಡಲು ಬಾಡಿಗೆ ರೂಂ ಮಾಡ್ತಾರೆ!

https://newsfirstlive.com/wp-content/uploads/2024/04/Thieves.jpg

Load More