newsfirstkannada.com

×

ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ.. ಸದ್ಯದ ಪರಿಸ್ಥಿತಿ ಹೇಗಿದೆ?

ಪ್ರಾತಿನಿಧಿಕ ಚಿತ್ರ

Share :

Published July 18, 2024 at 10:31am

    ಆಟವಾಡುತ್ತಾ ವಿಷದ ಕಾಯಿ ತಿಂದ ಮಕ್ಕಳು

    ಕಾಯಿ ತಿನ್ನುತ್ತಿದ್ದಂತೆ ಮಕ್ಕಳಲ್ಲಿ‌ ವಾಂತಿ, ಬೇಧಿ, ಹೊಟ್ಟೆನೋವು

    ಅಸ್ವಸ್ಥಗೊಂಡ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.. ಪರಿಸ್ಥಿತಿ?

ಚಿತ್ರದುರ್ಗ: ಬೇಲಿಯ ಮೇಲೆ‌ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥಗೊಂಡ ಘಟನೆಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಗ್ರಾಮದಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಆಟವಾಡುತ್ತಾ ಮಕ್ಕಳು ವಿಷದ ಕಾಯಿ ತಿಂದಿದ್ದಾರೆ. ಪರಿಣಾಮ 6 ಜನ ಮಕ್ಕಳು ಅಸ್ವಸ್ಥರಾಗಿದ್ದಾರೆ. ಪ್ರಕೃತಿ, ಮುಖೇಶ್, ಅನುಶ್ರೀ, ರಾಕೇಶ್, ಸಿಂಧು, ಮಹಾಲಕ್ಷ್ಮಿ ಅಸ್ವಸ್ಥ ಮಕ್ಕಳು.

ಇದನ್ನೂ ಓದಿ: ಸುರಿಯುತ್ತಿದೆ ಮಳೆ, ಹೆಚ್ಚುತ್ತಿದೆ ನೀರು.. KRS ಡ್ಯಾಂ ಭರ್ತಿಯಾಗಲು 11 ಅಡಿಯಷ್ಟೇ ಬಾಕಿ!

ಕಾಯಿ ತಿನ್ನುತ್ತಿದ್ದಂತೆ ಮಕ್ಕಳಲ್ಲಿ‌ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಅಸ್ವಸ್ಥಗೊಂಡ ಮಕ್ಕಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಪುಟಾಣಿ ಅವಂತಿಕಾಳ ಮೃತದೇಹ ಪತ್ತೆ..

ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆರೋಗ್ಯದಲ್ಲಿ ಸದ್ಯ ಚೇತರಿಕೆಯಾಗಿದೆ. ಆಸ್ಪತ್ರೆಗೆ ಸೇರಿಸಿದ ಕಾರಣ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಲಿ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು 6 ಮಕ್ಕಳು ಅಸ್ವಸ್ಥ.. ಸದ್ಯದ ಪರಿಸ್ಥಿತಿ ಹೇಗಿದೆ?

https://newsfirstlive.com/wp-content/uploads/2024/07/Friut.jpg

Load More