newsfirstkannada.com

ಮದುವೆ ಮೆರವಣಿಗೆ ಹೊರಟವರ ಮೇಲೆ ಹರಿಹಾಯ್ದ ಲಾರಿ; ಐವರು ಸಾವು, 11 ಮಂದಿಗೆ ಗಾಯ

Share :

Published March 12, 2024 at 8:16am

  ರಾಂಗ್​ ಸೈಡ್​ನಿಂದ ಓವರ್​ ಟೇಕ್​ ಮಾಡಿದ ಲಾರಿ ಚಾಲಕ

  ಲಾರಿ ಅಡಿಗೆ ಸಿಲುಕಿ ಐವರು ಸಾವು, 11 ಮಂದಿಯಲ್ಲಿ ಐವರ ಸ್ಥಿತಿ ಗಂಭೀರ

  ರಾತ್ರಿ 10 ಗಂಟೆಗೆ ನಡೆದ ಅಪಘಾತದಲ್ಲಿ ಅಸುನೀಗಿದ ಐವರು

ಮಧ್ಯಪ್ರದೇಶ: ಮದುವೆ ಮೆರವಣಿಗೆ ಹೊರಟವರ ಮೇಲೆ ಲಾರಿ ಹರಿಹಾಯ್ದು ಐವರು ಸಾವನ್ನಪ್ಪಿದ ಘಟನೆ ರೈಸೇನ್​ ಜಿಲ್ಲೆಯ ಸುಲ್ತಾನ್​​​ಪುರದಲ್ಲಿ ನಿನ್ನೆ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ಹೋಶಂಗಾಬಾದ್​ ಜಿಲ್ಲೆಯ ಖಮಾರಿಯಾ ಗ್ರಾಮದಲ್ಲಿ ಮದುವೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಲಾರಿ ರಾಂಗ್​ಸೈಡ್​​ನಿಂದ ಓವರ್​ ಟೇಕ್​ ಮಾಡುವ ಭರದಲ್ಲಿ ಮದುವೆ ಮೆರವಣೆಗೆ ಹೊರಟವರ ಮೇಲೆ ಹರಿಹಾಯ್ದಿದೆ. ಹೀಗಾಗಿ ಸಾವು-ನೋವು ಸಂಭವಿಸಿದೆ.

ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಲಾರಿ ಗುದ್ದಿದ ರಭಸಕ್ಕೆ ಐವರು ಸಾವನ್ನಪ್ಪಿದರೆ, 11 ಮಂದಿಯಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಸದ್ಯ ಪೊಲೀಸರು ಈ ಅಪಘಾತ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮೆರವಣಿಗೆ ಹೊರಟವರ ಮೇಲೆ ಹರಿಹಾಯ್ದ ಲಾರಿ; ಐವರು ಸಾವು, 11 ಮಂದಿಗೆ ಗಾಯ

https://newsfirstlive.com/wp-content/uploads/2024/03/Accident-11.jpg

Load More