/newsfirstlive-kannada/media/post_attachments/wp-content/uploads/2025/06/Cloud-Bust11.jpg)
ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಯ ಆರ್ಭಟ ಹೆಚ್ಚಾಗಿದೆ. ಹಿಮಾಚಲ ಪ್ರದೇಶದ 4 ಕಡೆಗಳಲ್ಲಿ ಮೇಘಸ್ಫೋಟವಾಗಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ರಣಪ್ರವಾಹ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಕಾಂಗ್ರಾ ಹಾಗೂ ಕುಲುವಿನ ಸೈನ್ಜ್ ಕಣಿವೆಯಲ್ಲಿ ಪಾರ್ವತಿ ನದಿ ಉಕ್ಕಿ ಹರಿಯುತ್ತಿದೆ.
ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO
ಮಣಿಕರಣ್-ಸೈಂಜ್-ಬಂಜರ್ ಕಣಿವೆಗಳು ದ್ವೀಪಗಳಾಗಿವೆ. ಪ್ರವಾಸಿತಾಣ ಧರ್ಮಶಾಲಾ ಬಳಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ 15-20 ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ವರದಿಯಾಗಿದೆ. ಇಲ್ಲಿಯವರೆಗೆ, ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಇತ್ತ ಕುಲ್ಲು ಮತ್ತು ಲಾಹೌಲ್ ಜಿಲ್ಲೆಯಲ್ಲಿ ಪ್ರವಾಹದ ರಭಸಕ್ಕೆ ಜೀಪ್ವೊಂದು ಕೊಚ್ಚಿ ಹೋಗುವ ದೃಶ್ಯ ಕಂಡು ಬಂದಿದೆ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮೇಘಸ್ಫೋಟಕ್ಕೆ ಟನ್ಗಟ್ಟಲೆ ಮರಗಳು ನದಿಗೆ ಕೊಚ್ಚಿ ಹೋಗಿದೆ. ಅಂಗಡಿ ಮುಂದೆ ಮಾರಾಟಕ್ಕೆ ಇಟ್ಟಿದ್ದ ಟನ್ಗಟ್ಟಲೇ ಮರಗಳು ಕೊಚ್ಚಿ ಹೋಗಿವೆ. ಬಿಯಾಸ್ ನದಿ ಮತ್ತು ಹತ್ತಿರದ ಜಲಮೂಗಳಿಂದ ದೂರುವಿರುವಂತೆ ಜಿಲ್ಲಾಡಳಿತವು ಜನರಿಕೆ ಸೂಚಿಸಿದ್ದಾರೆ.
ಹಿಮಾಚಲ ಪ್ರದೇಶದ ಕುಲ್ಲುವಿನ ಸೈನ್ಜ್ ಕಣಿವೆಯ ಸಿಯುಂಡ್‌ನಲ್ಲಿ ಮೇಘಸ್ಫೋಟಕ್ಕೆ ಜನರ ಜೀವನ ತತ್ತರಿಸಿ ಹೋಗಿದೆ. ಪ್ರವಾಹದಿಂದ ಖಾಸಗಿ ವಿದ್ಯುತ್ ಯೋಜನೆಗೆ ಸೇರಿದ ತಾತ್ಕಾಲಿಕ ಶೆಡ್‌ಗಳಿಗೆ ಕೊಚ್ಚಿಕೊಂಡು ಹೋಗಿದ್ರೆ. ಮತ್ತೊಂದೆಡೆ ಅಗ್ನಿ ಶಾಮಕ ದಳದ ವಾಹನ ಜಖಂಗೊಂಡಿದೆ ಹಲವಾರು ಸಾರ್ವಜನಿಕರ ಆಸ್ತಿ ಹಾನಿಯಾಗಿದೆ.
ಇತ್ತ, ಉತ್ತರಾಖಂಡ್ನ ಶಮಾ ಗ್ರಾಮದಲ್ಲಿ ತಡರಾತ್ರಿಯಿಂದ ಭಾರೀ ಮಳೆಯಾಗಿದೆ. ಮಳೆಗೆ ಪ್ರವಾಹ ಸೃಷ್ಟಿಯಾಗಿದ್ದು ಹಲವು ಆವಂತರಗಳು ಸಂಭವಿಸಿದೆ. ಇನ್ನು, ಕಳೆದ ಮೂರು ದಿನಗಳಲ್ಲಿ ಶಮಾ ಗ್ರಾಮದಲ್ಲಿ 276 ಮಿಲಿ ಮೀಟರ್ರಷ್ಟು ಮಳೆ ದಾಖಲಾಗಿದೆ.
ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಎಲೆಕ್ಷನ್ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?
ಈ ಬೆನ್ನಲ್ಲೇ ಕಾಲುವೆಗೆ ಕಾರು ಬಿದ್ದು, ನಾಲ್ವರು ಜೀವಬಿಟ್ಟಿದ್ದಾರೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಈ ದುರಂತ ನಡೆದಿದೆ. ರಾಕೇಶ್ ರಾಥೋಡ್ ಎಂಬುವರ ಪತ್ನಿ ರಮಾದೇವಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಕಾರಿನಲ್ಲಿ ಹೋಗುವಾಗ ದುರಂತ ನಡೆದಿದೆ.
ರಕ್ಷಣಾ ಕಾರ್ಯ ನಡೆಸುವಷ್ಟರಲ್ಲಿ ಕಾರಿನಲ್ಲಿದ್ದ ಏಳು ಮಂದಿಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ ಮಗುವಿನ ತಾಯಿ, ಚಿಕ್ಕಪ್ಪ ಹಾಗೂ ಕಾರು ಚಾಲಕ ಸೇರಿದಂತೆ 3 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಸುಶೀಲಾ ತಿವಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಅಲಕಾನಂದ ನದಿಗೆ ಟೂರಿಸ್ಟ್ ಬಸ್ ಉರುಳಿ ಬಿದ್ದ ಘಟನೆ ಉತ್ತರಾಖಾಂಡ್ನ ರುದ್ರಪ್ರಯಾಗ್ನಲ್ಲಿ ನಡೆದಿದೆ. ಬಸ್ನಲ್ಲಿ ಬದ್ರಿನಾಥ್ಗೆ ತೆರಳುತ್ತಿದ್ದ ಪ್ರಯಾಣಿಕರು ಇದ್ರು. ಮಳೆಗೆ ಧುಮ್ಮಿಕ್ಕಿ ಹರಿಯುತ್ತಿರುವ ಅಲಕಾನಂದ ನದಿಗೆ ಬಸ್ ಉರುಳಿ ಬಿದ್ದಿದೆ. ಇಬ್ಬರು ಟೂರಿಸ್ಟ್ಗಳು ಪ್ರಾಣಬಿಟ್ಟಿದ್ದು, 11 ಜನರು ನಾಪತ್ತೆಯಾಗಿದ್ದಾರೆ. ಎಸ್ಡಿಆರ್ಎಫ್ನಿಂದ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಇತ್ತ ಹಲ್ದ್ವಾನಿಯಲ್ಲಿ ಕಾಲುವೆಗೆ ಕಾರು ಬಿದ್ದು ನಾಲ್ವರು ಬಲಿಯಾಗಿದ್ದಾರೆ.
ಕೆಲವು ದಿನಗಳಿಂದ ಗುಜರಾತ್ನಲ್ಲೂ ಸಹ ಧಾರಾಕಾರ ಮಳೆಯಾಗುತ್ತಿದೆ. ಸೂರತ್ನಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಜಲಾವೃತವಾದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ನಲ್ಲಿ ಸಂಚಾರ ಮಾಡಿದ್ದಾನೆ. ಇನ್ನು, ಅದೇ ನೀರಿನಲ್ಲಿ ಮಕ್ಕಳು ಸ್ವಿಮ್ಮಿಂಗ್ ಪ್ರಾಕ್ಟೀಸ್ ಮಾಡ್ತಿರುವ ದೃಶ್ಯ ಕಂಡು ಬಂದಿದೆ.
ಗುಜರಾತ್ನಲ್ಲೂ ಭಾರೀ ಮಳೆಯಾಗ್ತಿದ್ದು, ನವಸಾರಿಯಾ ಎಂಬ ಜಿಲ್ಲೆಯ ಚಿಖ್ಲಿ ಪಟ್ಟಣದ ಮೂಲಕ ಹರಿಯುವ ಕಾವೇರಿ ನದಿ ಅಪಾಯ ಮಟ್ಟ ತಲುಪಿದೆ. ಕಾವೇರಿ ನದಿಯ ದಡದಲ್ಲಿರುವ ತಡಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ. ಹೀಗೆ ಮಳೆ ಮುಂದುವರೆದರೆ ತಡಕೇಶ್ವರ ಮಹಾದೇವ ದೇಗುಲ ಮುಳುಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ