/newsfirstlive-kannada/media/post_attachments/wp-content/uploads/2024/05/MUMBAI_FIRE.jpg)
ಮುಂಬೈ: ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು 6 ಜನ ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಎನ್ನುವ ಪ್ರದೇಶದಲ್ಲಿ ನಡೆದಿದೆ.
ದೊಂಬಿವಿಲಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡಾಗ ದಟ್ಟವಾದ ಹೊಗೆ ಆವರಿಸಿಕೊಂಡು ಏನು ಕಾಣದಂತೆ ಆಗಿತ್ತು. ಈ ಬಾಯ್ಲರ್ ಸ್ಫೋಟದ ಶಬ್ಧ ಸುಮಾರು 3 ಕಿಲೋ ಮೀಟರ್ವರೆಗೆ ಕೇಳಿಸಿದೆ ಎನ್ನಲಾಗಿದೆ. ತಕ್ಷಣ ಜಾಗೃತರಾದ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಆಸ್ಪತ್ರೆಗೆ ಮಾಹಿತಿ ತಿಳಿಸಿದ್ದಾರೆ. ಇನ್ನು ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಬಂದಿರುವ ಸಿಬ್ಬಂದಿ ಟಕ್ಕಪಕ್ಕದ ಕಟ್ಟಡದಲ್ಲಿರುವ ಸುಮಾರು 30 ಕಾರ್ಮಿಕರನ್ನು ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪೋರ್ಶ್ ಕಾರು ಆಕ್ಸಿಡೆಂಟ್; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?
ಅಂಬರ ಕೆಮಿಕಲ್ ಕಂಪನಿಯ 4 ಬಾಯರ್ಗಳು ಸ್ಫೋಟಗೊಂಡ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಯಿಂದ ಕೆಮಿಕಲ್ ಇರುವ ದೊಡ್ಡ ದೊಡ್ಡ ಡ್ರಮ್ಸ್ಗಳು ಸಿಡಿಯಲಾರಂಭಿಸಿದ್ದವು. ಇದರಿಂದಾಗಿ ಕಂಪನಿಯ ಅಕ್ಕಪಕ್ಕದ ಮನೆಗಳ ಕಿಟಕಿಯ ಗಾಜುಗಳು ಒಡೆದು ಹೋಗಿ ಅನೇಕ ಮನೆಗಳು ಹಾನಿಯಾಗಿವೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: BBMPಯಲ್ಲಿ ಕೆಲಸ ಮಾಡ್ತಿದ್ದ ಖತರ್ನಾಕ್.. 19 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಬಂಧಿಸಿದ್ದೇ ರೋಚಕ
Huge blast in #Dombivli. Probably blast in a factory in MIDC. pic.twitter.com/jXG1dEuqp9
— Aakash (@aakashkb)
Huge blast in #Dombivli. Probably blast in a factory in MIDC. pic.twitter.com/jXG1dEuqp9
— Aakash (@aakashkb) May 23, 2024
">May 23, 2024
ಸದ್ಯದ ಮಾಹಿತಿ ಪ್ರಕಾರ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು 6 ಜನ ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಒಳಗೆ ಯಾರದರೂ ಸಿಲುಕಿಕೊಂಡಿದ್ದಾರಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ