/newsfirstlive-kannada/media/post_attachments/wp-content/uploads/2024/11/NON-WATER-DRINKING-ANIMALS.jpg)
ಸೃಷ್ಟಿ ಕುಲದಲ್ಲಿ ಎಲ್ಲ ಪ್ರಾಣಿಗಳಿಗೂ ನೀರಿನ ಅತ್ಯಗತ್ಯ ಅಷ್ಟಿಷ್ಟಲ್ಲ. ಭೂಮಿಯಲ್ಲಿ ನೀರು ಇಲ್ಲದೇ ಹೋಗಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲು ಕೂಡ ಅಸಾಧ್ಯ. ನೀರು ಭೂಮಿಯ ಪ್ರತಿ ಜೀವಿಗೂ ಕೂಡ ಅಮೂಲ್ಯ. ಅದನ್ನು ಮಿತವಾಗಿ ಬಳಸಿ ಉಳಿಸಿ ಎಂಬ ಹಲವು ಹೋರಾಟಗಳು ನಡೆದಿವೆ. ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ದೇಶ ದೇಶಗಳ ನಡುವೆ ದೊಡ್ಡ ಕದನಗಳೇ ನಡೆದು ಹೋಗಿವೆ. ನೀರಿನ ಪ್ರತಿ ಬಿಂದುವಿಗೂ ಕೂಡ ನಾವು ಮಹತ್ವ ಕೊಡುತ್ತೇವೆ. ಅದನ್ನು ಜೀವ ಜಲ ಎಂದು ಪೂಜ್ಯ ಭಾವದಿಂದ ಕರೆಯುತ್ತೇವೆ. ಆದ್ರೆ ಪ್ರಪಂಚದಲ್ಲಿ ಕೆಲವು ಪ್ರಾಣಿಗಳಿವೆ. ಅವುಗಳಿಗೂ ನೀರಿಗೂ ಸಂಬಂಧವೇ ಇಲ್ಲ. ಹನಿ ನೀರು ಕುಡಿಯದೇ ಹಲವಾರು ವರ್ಷಗಳ ಕಾಲ ಬದುಕಬಲ್ಲವು. ಅವುಗಳಲ್ಲಿ ಪ್ರಮುಖವಾದವುಗಳು ಇವು.
ಫೆನೆಕ್ ಫಾಕ್ಸ್(ಫೆನೆಕ್ ನರಿ)
ಫೆನೆಕ್ ನರಿಗಳು ಸಾಮಾನ್ಯವಾಗಿ ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಸಹರಾದ ದಟ್ಟ ಮರುಭೂಮಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಉಳಿದ ನರಿಗಳಿಗೆ ಹೋಲಿಸಿ ನೋಡಿದರೆ ಅತ್ಯಂತ ಪುಟ್ಟ ಗಾತ್ರದಲ್ಲಿರುತ್ತವೆ. ಇವು ಸುಮಾರು ಒಂದು ತಿಂಗಳುಗಳ ಕಾಲ ಹನಿ ನೀರು ಕುಡಿಯದೇ ಜೀವಂತವಾಗಿರಬಲ್ಲವು. ಅವು ತಾಪಮಾನದಿಂದ ತಪ್ಪಿಸಿಕೊಳ್ಳಲು ತಾವು ತಿನ್ನುವ ಆಹಾರದಿಂದಲೇ ದೇಹದ ತೇವವನ್ನು ಪಡೆಯುತ್ತವೆ.
ಇದನ್ನೂ ಓದಿ:ಬೆಳ್ ಬೆಳಗ್ಗೆ ಟೀ ಜೊತೆ ರಸ್ಕ್ ಸೇವನೆ ಡೇಂಜರ್! ಏನಾಗುತ್ತೆ ಗೊತ್ತಾ?
ಒಂಟೆಗಳು
ಒಂಟೆಗಳನ್ನು ನಾವು ಮರುಳುಗಾಡಿನ ಹಡಗುಗಳು ಎಂದೇ ಕರೆಯುತ್ತವೆ. ಒಂಟೆಗಳು ತಮ್ಮ ಬೆನ್ನಿನ ಉಬ್ಬಿನೊಳಗೆ ಫ್ಯಾಟ್ನ್ನು ಶೇಖರಿಸಿಕೊಂಡಿರುತ್ತವೆ. ಅದು ಚಯಾಪಚಯ ಕ್ರಿಯೆಗೆ ನೀರನ್ನು ಬಿಡುಗಡೆ ಮಾಡುತ್ತದೆ.ಹೀಗಾಗಿ ಒಂಟೆಗಳು ನೀರು ಮತ್ತು ಆಹಾರದ ಕೊರತೆಯಿದ್ದಾಗ ಒಂಟೆಗಳು ಇದರ ಸಹಾಯದಿಂದ ತಮ್ಮ ಹಸಿವು ಹಾಗೂ ನೀರಡಿಕೆಯನ್ನು ನೀಗಿಸಿಕೊಳ್ಳುತ್ತವೆ. ಅಷ್ಟು ಮಾತ್ರವಲ್ಲ ನೀರು ಇಲ್ಲದೆಯೇ ಹಲವಾರು ತಿಂಗಳುಗಳ ಕಾಲ ಬದುಕಬಲ್ಲವು.
ಗೀಲಾ ಮಾನ್ಸ್ಟಾರ್ ( ವಿಷಕಾರಿ ದೈತ್ಯ ಹಲ್ಲಿ)
ಇದೊಂದು ಹಲ್ಲಿ ಜಾತಿಗೆ ಸೇರಿದ ದೈತ್ಯ ಸರಿಸೃಪ. ಇದನ್ನು ಸಾಮಾನ್ಯವಾಗಿ ನಾವು ನೈರುತ್ಯ ಅಮೆರಿಕಾ ಭಾಗದಲ್ಲಿ ಹಾಗೂ ವಾಯುವ್ಯ ಮೆಕ್ಸಿಕನ್ ಭಾಗದಲ್ಲಿ ಸಾಮಾನ್ಯವಾಗಿ ಕಾಣಬಹುದು. ಈ ಒಂದು ಸರಿಸೃಪ ತನ್ನ ಬಾಲದಲ್ಲಿ ನೀರು ಹಾಗೂ ಫ್ಯಾಟ್ನ್ನು ಶೇಖರಿಸಿಕೊಂಡಿರುತ್ತದೆ ಹೀಗಾಗಿ ಈ ಸರಿಸೃಪ ಹನಿ ನೀರನ್ನು ಕೂಡ ಕುಡಿಯದೇ ಹಲವಾರು ತಿಂಗಳುಗಳ ಕಾಲ ಬದಕುತ್ತದೆ.
ಸ್ಯಾಂಡ್ ಗಜೆಲೆ:
ಇವು ನಾವು ಭಾರತದಲ್ಲಿ ನೋಡುವ ಸಾರಂಗಗಳನ್ನು ಹೋಲುವ ಪ್ರಾಣಿ. ಇವು ಹೆಚ್ಚಾಗಿ ಅರೆಬಿಯನ್ ಹಾಗೂ ಸಿರಿಯನ್ ಮರಳುಗಾಡು ಹಾಗೂ ಪಶ್ಚಿಮ ಏಷ್ಯಾದಲ್ಲಿ ಕಂಡು ಬರುತ್ತವೆ. ಈ ಪ್ರಾಣಿಗಳು ಕೂಡ ನೀರು ಕುಡಿಯದೇ ಹಲವಾರು ದಿನಗಳ ಕಾಲ ಬದುಕಬಲ್ಲವು. ಹುಲ್ಲುಗಳನ್ನು ಹೆಚ್ಚು ತಿನ್ನುವ ಈ ಪ್ರಾಣಿಗಳು ಆಹಾರದಿಂದ ಸಿಗುವ ತೇವಾಂಶದಿಂದಲೇ ಹಲವಾರು ತಿಂಗಳು ಬದುಕುತ್ತವೆ.
ಇದನ್ನೂ ಓದಿ:ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗಿವೆಯಾ? ಹಾಗಿದ್ರೆ ಈ ನಿಯಮಗಳನ್ನು ಪಾಲಿಸಿ
ಚೇಳುಗಳು
ಚೇಳುಗಳ ನೀರು ಕುಡಿಯದೇ ಕೇವಲ ತಿಂಗಳುಗಳ ಕಾಲವಲ್ಲ ವರ್ಷಗಳ ಕಾಲದವರೆಗೂ ಕೂಡ ಬದುಕಬಲ್ಲವು. ಈ ಬಗ್ಗೆ ಹಲವು ತಜ್ಞರು ಹೇಳಿದ್ದಾರೆ. ಅವುಗಳ ಜೀರ್ಣಕ್ರಿಯೆಯ ವ್ಯವಸ್ಥೆಯೇ ಹಾಗಿದೆ. ನೀರು ಕುಡಿಯದೇ ಅವು ವರ್ಷಗಳ ಕಾಲ ಅವು ಬದುಕಬಲ್ಲವು ಎಂದು ಹೇಳಲಾಗುತ್ತದೆ.
ಕಾಂಗರು ಇಲಿಗಳು
ಉತ್ತರ ಅಮೆರಿಕಾದಲ್ಲಿ ಕಂಡು ಬರುವ ಈ ವಿಶೇಷ ತಳಿಯ ಇಲಿಗಳು ಇಡೀ ತಮ್ಮ ಜೀವಮಾನವನ್ನೇ ನೀರು ಕುಡಿಯದೇ ಕಳೆಯಬಲ್ಲ ಶಕ್ತಿಯನ್ನು ಹೊಂದಿವೆ. ಇವುಗಳ ಮೂತ್ರವಿಸರ್ಜನೆ ಪ್ರಮಾಣ ಅತ್ಯಂತ ಅಂದ್ರೆ ಅತ್ಯಂತ ಕಡಿಮೆ. ಇವು ತಾವು ಸೇವಿಸುವ ಧಾನ್ಯಗಳಲ್ಲಿಯ ತೇವವನ್ನೇ ದೇಹದಲ್ಲಿ ನೀರನ ಅಂಶಕ್ಕಾಗಿ ಶೇಖರಿಸಿಕೊಳ್ಳುತ್ತವೆ. ಈ ಇಲಿಗಳು ತಮ್ಮ ಇಡೀ ಆಯುಷ್ಯವನ್ನೇ ನೀರು ಕುಡಿಯದೇ ಕಳೆಯಬಲ್ಲವು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ