/newsfirstlive-kannada/media/post_attachments/wp-content/uploads/2024/07/Building-Collapse.jpg)
ಗುಜರಾತ್​: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೂರತ್​ನಲ್ಲಿ ಅವಘಡವೊಂದು ಸಂಭವಿಸಿದೆ. ಆರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ. ಪರಿಣಾಮ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಗೂ ಈ ದೃಶ್ಯ ಕಂಡಾಗ ಕರಗದೆ ಇರದು!
ಸೂರತ್​ನ ಸಚಿನ್​ ಪಾಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 8 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡ ನೆಲಸಮವಾಗಿದೆ. ಸದ್ಯ ನೆಲಸಮವಾದ ರಭಸಕ್ಕೆ ಕಾಂಕ್ರೀಟ್​, ಕಲ್ಲು ಚಪ್ಪಡಿಗಳು ತುಂಡಾಗಿ ಬಿದ್ದಿರುವ ದೃಶ್ಯಗಳು ಕಣ್ಣುಕಟ್ಟುವಂತಿವೆ.
ಇಂದು ಮಧ್ಯಾಹ್ನ ಈ ಕಟ್ಟಡ ನೆಲಸಮವಾಗಿದೆ. ಕಟ್ಟಡದ ಕೆಳಗೆ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ದಳ ದೌಡಾಯಿಸಿದೆ. ಕಟ್ಟಡದ ಕೆಳಗೆ ಸಿಲುಕಿದವರಿಗಾಗಿ ಶೋಧ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us