ಬೆಂಗಳೂರಲ್ಲಿ ಭಾರೀ ದುರಂತ; ಕ್ಷಣಾರ್ಧದಲ್ಲೇ ಕುಸಿದ 6 ಅಂತಸ್ತಿನ ಕಟ್ಟಡ.. ನಾಲ್ವರು ಸಾ*ವು

author-image
Bheemappa
Updated On
ಬೆಂಗಳೂರಲ್ಲಿ ಭಾರೀ ದುರಂತ; ಕ್ಷಣಾರ್ಧದಲ್ಲೇ ಕುಸಿದ 6 ಅಂತಸ್ತಿನ ಕಟ್ಟಡ.. ನಾಲ್ವರು ಸಾ*ವು
Advertisment
  • ಡಿಸಿಎಂ ಡಿ.ಕೆ ಶಿವಕುಮಾರ್​, ಸಂತೋಷ್ ಲಾಡ್ ಭೇಟಿ
  • ಕಟ್ಟಡ ಕುಸಿಯುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ
  • ಒಳಗೆ ಸಿಲುಕಿದವರಿಗಾಗಿ ಮುಂದುವರೆದ ರಕ್ಷಣಾ ಕಾರ್ಯ

ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿನ ಬೃಹತ್ ಕಟ್ಟಡ ನೆಲಕ್ಕುರುಳಿ ನಾಲ್ವರನ್ನ ಬಲಿ ಪಡೆದಿದೆ. ಕಟ್ಟಡ ಬೀಳೋ ಘನಘೋರ ದೃಶ್ಯವಂತೂ ಎದೆ ನಡುಗಿಸುವಂತಿದೆ. ಒಂದೊಂದು ಚಿತ್ರಣ ನೋಡುತ್ತಿದ್ದರೇ ಕಳಪೆ ಕಾಮಗಾರಿ ಅನ್ನೋದನ್ನ ಸಾರಿ ಸಾರಿ ಹೇಳುವಂತಿದೆ.

publive-image

ಇನ್ನೇನು ಫಿನಿಷಿಂಗ್​ ಹಂತದಲ್ಲಿದ್ದ ಬಿಲ್ಡಿಂಗ್

ಕಟ್ಟಡ ಕುಸಿಯುತ್ತಿರುವುದು ಹಿಂಬದಿಯ ಬಿಲ್ಡಿಂಗ್​ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ರೆಕಾರ್ಡ್​ ಆಗಿದೆ. ಎದುರುಗಡೆ ಇರುವ ಕ್ಯಾಮೆರಾದಲ್ಲಿ ಆಗಿರೋ ವಿಡಿಯೋ ರೆಕಾರ್ಡ್​ ಆಗಿದೆ. ಬದುಕೋದಕ್ಕೆ. ಜೀವನ ಸಾಗಿಸೋದಕ್ಕೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರ್ದು ಅಂತಾ ಕೆಲಸ ಹುಡುಕಿ ಬಂದಿದ್ದವರು ಇವತ್ತು ಹೆಣವಾಗಿ ಮಲಗಿದ್ದಾರೆ. ಮಣ್ಣು.. ಜೆಲ್ಲಿ.. ಸಿಮೆಂಟ್​ನಲ್ಲೇ ಕೆಲಸ ಮಾಡುತ್ತಿದ್ದವರು ಇದೀಗ ಅದೇ ಮಣ್ಣು.. ಜೆಲ್ಲಿ.. ಸಿಮೆಂಟ್​ನಡಿ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಕೆಲವರಿಗೆ ಗಂಭೀರವಾಗಿದ್ದರೂ ಬದುಕುಳಿದಿದ್ದಾರೆ.

ಬೆಂಗಳೂರಿನ ಹೆಣ್ಣೂರು ಸಮೀಪ‌ ಇರೋ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಕಟ್ಟಡ ಅವಶೇಷಗಳಡಿ ಸಿಲುಕಿದ್ದ ಮತ್ತೋರ್ವನನ್ನ ರಕ್ಷಣೆ ಮಾಡಲಾಗಿದೆ. ಆತನನ್ನ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಅಗ್ನಿಶಾಮಕ ದಳ, ಅರ್ಷದ್, ತುಳಸಿ, ಏಳುಮಲೈ ಕಿರುಪಾಲ್, ಪಾಸ್ವಾನ್, ಗಜೇಂದ್ರನಿಗಾಗಿ ತನ್ನ ರಕ್ಷಣಾ ಕಾರ್ಯ ಮುಂದುವರೆಸಿದೆ. ಇನ್ನು ಈ ಮಣ್ಣಿನ ಅವಶೇಷಗಳಡಿ ಸಿಲುಕಿ ಬದುಕಿ ಬಂದ ಓರ್ವ ಕಾರ್ಮಿಕ ಕಟ್ಟಡ ಬಿದ್ದ ಆ ಕ್ಷಣ ಏನಾಯ್ತು ಅನ್ನೋದನ್ನ ಹೇಳಿದ್ದಾನೆ.

publive-image

ಘಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಭೇಟಿ ನೀಡಿ ದುರಂತ ನಡೆದ ಸ್ಥಳ ಪರಿಶೀಲಿಸಿದರು. ಘಟನೆ ಬಗ್ಗೆ ಅಧಿಕಾರಿಗಳಿಂದ‌ ಮಾಹಿತಿ ಪಡೆದರು. ಕಟ್ಟಡ ಮಾಲೀಕ ಹಾಗೂ ಕಂಟ್ರಾಕ್ಟರ್ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದರು. ಕಳಪೆ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ನೆಲಕ್ಕುರುಳಿ, ಬದುಕು ಅರಸಿ ಬಂದ ಕಾರ್ಮಿಕರ ಜೀವ ಹರಣಕ್ಕೆ ಕಾರಣವಾಗಿದ್ದು ನಿಜಕ್ಕೂ ದುರಂತ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment