/newsfirstlive-kannada/media/post_attachments/wp-content/uploads/2025/06/EDDIE-JACK.jpg)
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಕೆಂಟ್ನಲ್ಲಿ ಭರ್ಜರಿ ಸಿದ್ಧತೆ ನಡೆಸ್ತಿದೆ. ಇನ್ನೊಂದೆಡೆ ಎದುರಾಳಿ ಇಂಗ್ಲೆಂಡ್ ಇಂಡಿಯನ್ ಟೈಗರ್ಸ್ನ ಖೆಡ್ಡಾಗೆ ಕೆಡವಲು ಸೈಲೆಂಟಾಗಿ ಪ್ಲಾನ್ ರೂಪಿಸ್ತಿದೆ. ಇದಕ್ಕಾಗಿ 6.4 ಅಡಿ ಎತ್ತರದ ಯುವ ವೇಗಿಯನ್ನ ತಂಡಕ್ಕೆ ಕರೆಸಿಕೊಂಡಿದೆ.
ಟೆಸ್ಟ್ ಕ್ರಿಕೆಟ್‌ನ ಪ್ರತಿಷ್ಟೆಯ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ. ಕ್ರಿಕೆಟ್ ಲೋಕ ಕಂಡ ಶ್ರೇಷ್ಠ ದಿಗ್ಗಜರಾದ ತೆಂಡುಲ್ಕರ್-ಆ್ಯಂಡರ್ಸನ್ ಟ್ರೋಫಿ ಗೆಲ್ಲೋಕೆ ಭಾರತ, ಇಂಗ್ಲೆಂಡ್ ತಂಡಗಳು ಭರ್ಜರಿ ಸಿದ್ಧತೆ ನಡೆಸ್ತಿವೆ. ಆಟಗಾರರು ಇಂಗ್ಲೆಂಡ್ ಕಂಡಿಷನ್ಸ್ಗೆ ಒಗ್ಗಿಕೊಳ್ಳಲು ಕೆಂಟ್ನಲ್ಲಿ ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಸ್ಪೆಷಲ್ ಕ್ಯಾಂಪ್ ಆಯೋಜಿಸಿದೆ. ಕೆಲ ತಿಂಗಳಿನಿಂದ ವೈಟ್ಬಾಲ್ ಫಾರ್ಮೆಟ್ನಲ್ಲಿ ಆಡಿದ್ದ ಆಟಗಾರರು ಗಂಟೆಗಟ್ಟಲೇ ಪ್ರಾಕ್ಟಿಸ್ ಮಾಡ್ತಾ ರೆಡ್ ಬಾಲ್ನ ರಿಧಮ್ ಕಂಡುಕೊಳ್ತಿದ್ದಾರೆ.
ಇದನ್ನೂ ಓದಿ: ಮಾರ್ಕ್ರಾಮ್ ಭರ್ಜರಿ ಶತಕ.. ವಿಶ್ವ ಟೆಸ್ಟ್ ಚಾಂಪಿಯನ್ ಆಗಲು ತುದಿಗಾಲಲ್ಲಿ ನಿಂತ ದಕ್ಷಿಣ ಆಫ್ರಿಕಾ
ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡದ ಸೈಲೆಂಟ್ ಸಿದ್ಧತೆ
ಆತಿಥೇಯ ಇಂಗ್ಲೆಂಡ್ ತಂಡ ಕೂಡ ಟೆಸ್ಟ್ ಕದನಕ್ಕೆ ಸೈಲೆಂಟಾಗಿ ಸಿದ್ಧತೆ ಆರಂಭಿಸಿದೆ. ಟೆಸ್ಟ್ ಸರಣಿಗೆ ಸಿದ್ಧತೆಯ ಭಾಗವಾಗಿಯೇ ಇಂಗ್ಲೆಂಡ್ ತಂಡ ಕೆಲ ದಿನಗಳ ಹಿಂದಷ್ಟೇ ಜಿಂಬಾಬ್ವೆ ವಿರುದ್ಧ 4 ದಿನಗಳ ಟೆಸ್ಟ್ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಭರ್ಜರಿ ಜಯ ಸಾಧಿಸಿರೋ ಇಂಗ್ಲೆಂಡ್ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿದೆ. ಇದೀಗ ಅದೇ ಆತ್ಮವಿಶ್ವಾಸದೊಂದಿಗೆ ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಸಿದ್ಧತೆ ಆರಂಭಿಸಿದ್ದು, ಅಭ್ಯಾಸದ ಅಖಾಡಕ್ಕೆ ಧುಮುಕಿದೆ.
ಪ್ರಾಕ್ಟಿಸ್ ಕ್ಯಾಂಪ್ಗೆ 6.4 ಅಡಿ ಎತ್ತರದ ಯುವ ವೇಗಿ ಎಂಟ್ರಿ
ಅಭ್ಯಾಸದ ಕಣದಲ್ಲಿ ಬೆವರಿಳಿಸ್ತಿರೋ ಇಂಗ್ಲೆಂಡ್ ಪಡೆ ಸರಣಿ ಗೆಲ್ಲೋಕೆ ಗೇಮ್ಪ್ಲಾನ್, ಸ್ಟ್ರಾಟರ್ಜಿಗಳನ್ನೂ ರೂಪಿಸ್ತಿದೆ. ಇದರ ಭಾಗವಾಗಿಯೇ ಇಂಗ್ಲೆಂಡ್ ಅಭ್ಯಾಸದ ಕ್ಯಾಂಪ್ಗೆ 6.4 ಅಡಿ ಎತ್ತರದ ವೇಗಿ ಎಂಟ್ರಿ ಕೊಟ್ಟಿದ್ದಾನೆ. ಕೌಂಟಿ ಕ್ಲಬ್ ಹ್ಯಾಂಪ್ಶೈರ್ನ 19 ವರ್ಷದ ಈ ಯುವ ವೇಗಿ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದು, ನೆಟ್ಸ್ನಲ್ಲಿ ಗಂಟೆಗಟ್ಟಲೇ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡಿದ್ದಾನೆ.
ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಏಕೆ..? ಮತ್ತೆ ಮಧ್ಯಪ್ರಾಚ್ಯದಲ್ಲಿ ಆಗ್ತಿರೋದು ಏನು..?
ಇಂಡಿಯನ್ ಬೌಲರ್ಸ್ ಟ್ಯಾಕಲ್ ಮಾಡಲು ಸ್ಪೆಷಲ್ ಪ್ಲಾನ್
ಎಡಿ ಜಾಕ್ ಹ್ಯಾಂಪ್ಶೈರ್ ಕ್ಲಬ್ನ ಬೌಲರ್.. ಬರೋಬ್ಬರಿ 6.4 ಅಡಿ ಎತ್ತರದ ರೈಟ್ ಆರ್ಮ್ ಪೇಸರ್ ಆಗಿರೋ ಎಡಿ ಜಾಕ್ ವೇರಿಯೇಷನ್ ಬೌಲಿಂಗ್ನಿಂದಲೇ ಹೆಸರು ಮಾಡಿದ್ದಾನೆ. ಜಸ್ಟ್ 19 ವರ್ಷ ವಯಸ್ಸಿನ ವೇಗಿ ಇಂಗ್ಲೆಂಡ್ನ ಪೇಸ್ ಅಂಡ್ ಬೌನ್ಸಿ ಕಂಡಿಷನ್ಸ್ನಲ್ಲಿ ತನ್ನ ಹೈಟ್ನ ಅಡ್ವಾಂಟೇಜ್ನಿಂದಲೇ ಬ್ಯಾಟ್ಸ್ಮನ್ಗಳಿಗೆ ಕಾಟ ಕೊಟ್ಟಿದ್ದಾರೆ. ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಈ ಯಂಗ್ಸ್ಟರ್, ಪರ್ಫೆಕ್ಟ್ ಯಾರ್ಕರ್ಗಳನ್ನೂ ಹಾಕೋ ಕಲೆಗಾರ. ಈ ಯುವ ಆಟಗಾರ ಇಂಗ್ಲೆಂಡ್ ಕ್ಯಾಂಪ್ಗೆ ಎಂಟ್ರಿಯಾಗಿರೋದ್ರ ಹಿಂದಿನ ರೀಸನ್ ಏನು ಗೊತ್ತಾ.? ಇಂಡಿಯನ್ ಬೌಲರ್ಗಳನ್ನ ಟ್ಯಾಕಲ್ ಮಾಡೋದು.
ಆರ್ಷ್ದೀಪ್ ಸಿಂಗ್
ಕನ್ನಡಿಗ ಪ್ರಸಿದ್ಧ್ ಕೃಷ್ಣ, ಆರ್ಷ್ದೀಪ್ ಸಿಂಗ್ ಇಂಗ್ಲೆಂಡ್ ಟೂರ್ನ ತಂಡದಲ್ಲಿದ್ದಾರೆ. ಪ್ರಸಿದ್ಧ್ ಕೃಷ್ಣ 5 ಟೆಸ್ಟ್ಗಳನ್ನ ಆಡೋದು ಬಹುತೇಕ ಕನ್ಫರ್ಮ್. ಬೂಮ್ರಾ 3 ಟೆಸ್ಟ್ಗಳಲ್ಲಿ ಮಾತ್ರ ಆಡೋದ್ರಿಂದ ಆರ್ಷ್ದೀಪ್ಗೂ ಅವಕಾಶ ಸಿಗಲಿದೆ. ಇಂಗ್ಲೆಂಡ್ ಬ್ಯಾಟರ್ಸ್ಗೆ ಇವರಿಬ್ಬರನ್ನ ರೆಡ್ ಬಾಲ್ ಕ್ರಿಕೆಟ್ನಲ್ಲಿ ಎದುರಿಸಿದ ಅನುಭವವಿಲ್ಲ. ಆರ್ಷ್ದೀಪ್ 6.3 ಅಡಿ ಎತ್ತರವಿದ್ರೆ ಪ್ರಸಿದ್ಧ್ ಕೃಷ್ಣ 6.2 ಅಡಿ ಎತ್ತರವಿದ್ದಾರೆ. ಇಂಗ್ಲೆಂಡ್ನ ಪೇಸ್ ಅಂಡ್ ಬೌನ್ಸಿ ಟ್ರ್ಯಾಕ್ಗಳಲ್ಲಿ ಹೈಟ್ ಇರೋ ಇವ್ರಿಗೆ ಅಡ್ವಾಂಟೇಜ್ ಜಾಸ್ತಿ ಇದೆ. ಇವರಿಬ್ಬರೂ ಇಂಗ್ಲೆಂಡ್ ಬಿಗ್ಥ್ರೆಟ್ ಆಗಬಲ್ಲರು. ಈ ಜೋಡಿಯನ್ನ ಎದುರಿಸೋಕೆ ಇಂಗ್ಲೆಂಡ್ ಬ್ಯಾಟರ್ಸ್ ಸಿದ್ಧತೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂಗಾರು ಬಿರುಸು.. ಭರ್ಜರಿ ಮಳೆಗೆ ಆಗುತ್ತಿರುವ ಅನಾಹುತ ಅಷ್ಟಿಷ್ಟಲ್ಲ..!
ಬೂಮ್ರಾ, ಸಿರಾಜ್ ಯಾರ್ಕರ್ಗೂ ಸಿದ್ಧತೆ
ಟೀಮ್ ಇಂಡಿಯಾದ ವೇಗದ ವಿಭಾಗದ ಬಲವಾದ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್ರ ಯಾರ್ಕರ್ ಅಸ್ತ್ರಕ್ಕೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ಸಿದ್ಧತೆ ನಡೀತಿದೆ. ಯಂಗ್ಸ್ಟರ್ ಎಡಿ ಜಾಕ್ ವೆರಿಯಷನ್ ಬೌಲಿಂಗ್ ಮಾಡೋದ್ರಲ್ಲಿ ಪಂಟರ್. ಪರ್ಫೆಕ್ಟ್ ಯಾರ್ಕರ್ ಎಸೆತಗಳನ್ನ ಹಾಕೋದ್ರಲ್ಲಿ ಕಲೆಗಾರ ಎನಿಸಿಕೊಂಡಿದ್ದಾರೆ. ಹೀಗಾಗಿಯೇ ಈತನ ಬೌಲಿಂಗ್ಗೆ ಇಂಗ್ಲೆಂಡ್ ಬ್ಯಾಟರ್ಸ್ ಸುದೀರ್ಘ ಕಾಲ ಅಭ್ಯಾಸ ನಡೆಸ್ತಿದ್ದಾರೆ. ಈ ಅಭ್ಯಾಸ ಮ್ಯಾಚ್ಗಳಲ್ಲಿ ಇಂಡಿಯನ್ ವೇಗಿಗಳನ್ನ ಎದುರಿಸೋಕೆ ನೆರವಾಗಲಿದೆ ಅನ್ನೋದು ಇಂಗ್ಲೆಂಡ್ ಪ್ಲಾನ್.
ಜಾಕ್ಗೆ ಜಾಕ್ಪಾಟ್
ಇಂಗ್ಲೆಂಡ್ ತಂಡದ ಕ್ಯಾಂಪ್ಗೆ ಎಡಿ ಜಾಕ್ ಎಂಟ್ರಿ ಕೊಟ್ಟಿರೋದು ಬ್ಯಾಕ್ ಅಪ್ ಪ್ಲೇಯರ್ ಆಗಿ. ತಂಡದಲ್ಲಿರೋ ಜೋಷ್ ಟಂಗ್ ಇಂಜುರಿಗೆ ತುತ್ತಾಗಿದ್ದು, ಟೆಸ್ಟ್ ಸರಣಿ ಆರಂಭದೊಳಗೆ ಫುಲ್ ಫಿಟ್ ಆಗಲಿಲ್ಲ ಅಂದ್ರೆ ಎಡಿ ಜಾಕ್ಗೆ ಜಾಕ್ಪಾಟ್ ಹೊಡೆಯಲಿದೆ. ನೆಟ್ಸ್ನಲ್ಲಿ ಅದ್ಭುತ ಬೌಲಿಂಗ್ನಿಂದ ಇಂಪ್ರೆಸ್ ಮಾಡಿರೋದ್ರಿಂದ ಪ್ಲೇಯಿಂಗ್ ಇಲೆವೆನ್ನಲ್ಲೂ ಸ್ಥಾನ ಸಿಗಲಿದೆ. ಆಗ ರಿಯಲ್ ಚಾಲೆಂಜ್ ಎದುರಾಗೋದು ಇಂಡಿಯನ್ ಬ್ಯಾಟರ್ಸ್ಗೆ. ಹೀಗಾಗಿ ಈ ಯುವ ವೇಗಿ ಸವಾಲನ್ನೂ ಎದುರಿಸೋ ನಿಟ್ಟಿನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಪ್ರಿಪರೇಶನ್ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ವಿಡಿಯೋ ನೋಡಿ 5 ಪ್ರಶ್ನೆ ಎತ್ತಿದ ತಜ್ಞರು.. ಏರ್ ಇಂಡಿಯಾ ವಿಮಾನ ಪತನ ಆಗಿದ್ದು ಏಕೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ