/newsfirstlive-kannada/media/post_attachments/wp-content/uploads/2025/02/ADDITIONAL-LAND.jpg)
ಮಹಾಕುಂಭಮೇಳಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅವರಿಗೆ ಕಲ್ಪಿಸಬೇಕಾದ ಮೂಲಸೌಕರ್ಯಗಳಲ್ಲಿ ಕೊರತೆಯಾಗದಿರುವಂತೆ ಅಲ್ಲಿನ ಸರ್ಕಾರ ನೋಡಿಕೊಳ್ಳುತ್ತಿದೆ. ಇದೇ ಕಾರಣದಿಂದಾಗಿ ಸಂಗಮಘಾಟ್ ಬಳಿ 16 ಸಾವಿರ ಕಾರ್ಮಿಕರು ಸೇರಿ ಕೇವಲ 80 ದಿನಗಳಲ್ಲಿ 26 ಹೆಕ್ಟರ್ ಹೆಚ್ಚುವರಿ ಭೂಮಿಯನ್ನು ಪುಣ್ಯಸ್ನಾನಕ್ಕಾಗಿ ಸಿದ್ಧಗೊಳಿಸಿದ್ದಾರೆ.
ಪ್ರತ್ಯೇಕವಾಗಿ ಮೂರು ನದಿಯಾಗಿ ಹರಿಯುವ ಗಂಗೆಯ ತಟದಲ್ಲಿ ಸಣ್ಣದೊಂದು ದ್ವೀಪ ಸೃಷ್ಟಿಯಾದಂತಾಗಿದ್ದು. ಇದು ಸೇರುವ ಕೋಟ್ಯಾಂತರ ಜನರಿಗೆ ಜಾಗ ಸಾಲದಂತಾಗಿತ್ತು. ಅದನ್ನು ಸರಳವಾಗಿ ಹರಿಯುವಂತೆ ಮಾಡಲು ಮತ್ತು ಭಕ್ತಾದಿಗಳಿಗೆ ಹೆಚ್ಚಿನ ಜಾಗ ಕಲ್ಪಿಸಿಕೊಡುವ ಉದ್ದೇಶದಿಂದ ದೊಡ್ಟ ಮಟ್ಟದಲ್ಲಿ ಹೂಳೆತ್ತುವ ಕಾರ್ಯವನ್ನು ನೀರಾವರಿ ಇಲಾಖೆ ಹಾಗೂ ಮುನ್ಸಿಪಲ್ ಕಾರ್ಪೋರೇಷನ್ ಜಂಟಿಯಾಗಿ ನಿರ್ವಹಿಸಿವೆ.
ಕ್ಲೀನ್ ಟೆಕ್ ಇನ್ಫಾ ಕಂಪನಿಯ ಕಾರ್ಮಿಕರು ಬೃಹತ್ ಮಷಿನ್ಗಳನ್ನು ಉಪಯೋಗಿಸಿ ನದಿಯ ತಟದಲ್ಲಿರುವ ಮರಳನ್ನು ತೆಗೆದು ನದಿಯ ತಟವನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಇದರಿಂದ ಭಕ್ತಾದಿಗಳಿಗೆ ಬಂದು ನಿಲ್ಲಲು ಹಾಗೂ ಪವಿತ್ರ ಸ್ನಾನ ಮಾಡಲು ಇನ್ನಷ್ಟು ಸಹಕಾರಿಯಾಗುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ.
ಇದನ್ನೂ ಓದಿ:ಜನರು ನನ್ನ ಕಣ್ಮುಂದೆಯೇ ಜೀವ ಬಿಟ್ಟರು.. ದೆಹಲಿ ಕಾಲ್ತುಳಿತಕ್ಕೆ ಕಾರಣವೇನು? ಭೀಕರತೆ ತೆರೆದಿಟ್ಟ ಮಹಿಳೆ!
ನದಿಯಿಂದ ಸುಮಾರು 7 ಲಕ್ಷ ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಆಚೆ ತೆಗೆದಯಲಾಗಿದೆ. ಇದು 187 ಒಲಿಂಪಿಕ್ಸ್ ಈಜುಗೊಳದಷ್ಟು ದೊಡ್ಡದು ಎಂದು ಹೇಳಲಾಗುತ್ತಿದೆ. ಈ ಎಲ್ಲರ ಶ್ರಮದಿಂದಾಗಿ ಸುಮಾರು 26 ಹೆಕ್ಟರ್ ಪ್ರದೇಶದಷ್ಟು ಹೆಚ್ಚಿನ ಭೂಮಿ ಭಕ್ತಾದಿಗಳಿಗೆ ಸಿಕ್ಕಂತಾಗಿದೆ. ಇದರಲ್ಲಿ 2 ಹೆಕ್ಟರ್ನಷ್ಟು ಭೂಮಿಯನ್ನು ಗಂಗಾ ಯಮುನಾ ಸಂಗಮದ ಬಳಿಯೂ ಕೂಡ ವಿಸ್ತರಿಸಲಾಗಿದೆ ಇದನ್ನು ಸಂಗಮ್ ನೋಸ್ ಎಂದು ಕರೆಯಲಾಗುತ್ತದೆ. ಗಂಗಾ ಯಮುನಾ ಸಂಗಮದ ಬಳಿ ಈಗ ವಿಸ್ತರಿಸಲಾಗಿರುವ ಜಾಗದಲ್ಲಿ 2019ಕ್ಕೆ ಹೋಲಿಸಿದರೆ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತಾದಿಗಳಿಗೆ ನೆಲೆ ನಿಲ್ಲಲು ಅವಕಾಶ ಕಲ್ಪಿಸಿಕೊಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ