newsfirstkannada.com

ಬೆಂಗಳೂರು ಬ್ಲಾಸ್ಟ್​ ಬೆನ್ನಲ್ಲೇ ನಿರ್ಮಾಣ ಹಂತದ ಕಟ್ಟಡದಲ್ಲಿ 6 ಬಾಂಬ್​ಗಳು ಪತ್ತೆ..!

Share :

Published March 2, 2024 at 8:20am

Update March 2, 2024 at 8:23am

    ರಾತ್ರೋರಾತ್ರಿ ನಡೀತು ಭಯಾನಕ ಸ್ಫೋಟ, ಜನ ಗಾಬರಿ

    ವಿಷಯ ತಿಳಿದು ಸ್ಥಳಕ್ಕೆ ಓಡೋಡಿ ಬಂದ ಪೊಲೀಸರು

    ಪರಿಶೀಲನೆ ವೇಳೆ 2 ಬಾಂಬ್ ಸ್ಫೋಟ, ಇನ್ನೂ 6 ಬಾಂಬ್​ಗಳು ಪತ್ತೆ

ಕಾಮಗಾರಿ ನಡೆಯುತ್ತಿದ್ದ ಮನೆಯೊಂದರಲ್ಲಿ ಆರು ಬಾಂಬ್​ಗಳು ಪತ್ತೆಯಾಗಿರುವ ಘಟನೆ ಬಿಹಾರದ ದರ್ಭಾಂಗದಲ್ಲಿ ನಡೆದಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ಪ್ರಕರಣದ ಬೆನ್ನಲ್ಲೇ ಬಿಹಾರದಲ್ಲಿ ಸಜೀವ ಬಾಂಬ್​ಗಳು ಪತ್ತೆಯಾಗಿವೆ.

ರಾತ್ರೋರಾತ್ರಿ ಸ್ಫೋಟದ ಶಬ್ದ ಕೇಳಿ ಬಂದ ಪರಿಣಾಮ ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳಕ್ಕೆ ಬಂದ ದರ್ಭಾಂಗದ ಬಹದ್ದೂರ್​ಪುರ ಪೊಲೀಸರಿಗೆ ಎರಡು ಬಾಂಬ್​ಗಳು ಹೊಡೆದು ಚೂರಾಗಿ ಬಿದ್ದಿರುವುದು ಕಂಡು ಬಂದಿದೆ.

ಈ ಸಂಬಂಧ ತನಿಖೆ ನಡೆಸಿದಾಗ ಅಲ್ಲಿ ಇನ್ನೂ ಆರು ಬಾಂಬ್​ಗಳು ಪತ್ತೆಯಾಗಿವೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದ್ದು, ಪೊಲೀಸರು ಆರು ಬಾಂಬ್​ಗಳನ್ನು ವಶಪಡಿಸಿಕೊಂಡು ಯಾವುದೇ ಅಪಾಯವಾಗದಂತೆ ನಿಷ್ಕ್ರಿಯಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಬ್ಲಾಸ್ಟ್​ ಬೆನ್ನಲ್ಲೇ ನಿರ್ಮಾಣ ಹಂತದ ಕಟ್ಟಡದಲ್ಲಿ 6 ಬಾಂಬ್​ಗಳು ಪತ್ತೆ..!

https://newsfirstlive.com/wp-content/uploads/2024/03/BLAST.jpg

Load More