ಕನ್ನಡ ಮಾತಾಡಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ.. ಕರ್ನಾಟಕ ಸೇನೆಯಿಂದ ಪಾಠ

author-image
Bheemappa
Updated On
ಕನ್ನಡ ಮಾತಾಡಿದ್ದಕ್ಕೆ KSRTC ಕಂಡಕ್ಟರ್ ಮೇಲೆ ಹಲ್ಲೆ.. ಕರ್ನಾಟಕ ಸೇನೆಯಿಂದ ಪಾಠ
Advertisment
  • ಫೋನ್​ ಮಾಡಿ ಪುಂಡರನ್ನ ಕರೆಸಿಕೊಂಡು ಕಂಡಕ್ಟರ್ ಮೇಲೆ ಹಲ್ಲೆ
  • ಮರ್ಯಾದೆ ತೆಗೆದುಕೊಳ್ಳಲು ಮತ್ತೆ ಮುಂದೆ ಬಂದ್ರಾ ಮರಾಠಿ ಜನ?
  • ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ

ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿಯ ಹೊರವಲಯದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎಂದು ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ಕನ್ನಡ ಪರ ಸಂಘಟನೆಗಳು ಮರಾಠಿ ರಾಜ್ಯದ ಬಸ್​ಗಳನ್ನ ತಡೆದು ಚಾಲಕ, ಡ್ರೈವರ್​ಗೆ ಮಸಿ ಬಳಿಯಲಾಗಿದೆ.

ಮರಾಠಿನ ಮಾರಾಟ ಮಾಡುವ ಮಂಗ್ಯಗಳು ಮತ್ತೆ ಮುದುರಿಕೊಂಡಿದ್ದ ಬಾಲ ಬಿಚ್ಚಿದ್ದಾರೆ. ಮೂರ್ ಮೂರ್ ದಿನಕ್ಕೂ ಮುಖಕ್ಕೆ ಮಸಿ ಬಳಿದ್ರೂ, ಮತ್ತೆ ಮತ್ತೆ ಮರ್ಯಾದೆ ತೆಗೆಸಿಕೊಳ್ಳೋದಕ್ಕೆ ಮುಹೂರ್ತ ಅವ್ರೇ ಫಿಕ್ಸ್​ ಮಾಡಿಕೊಂಡು ಬಂದಿದ್ದಾರೆ.

publive-image

ಕುಂದಾನಗರಿಯಲ್ಲಿ ಮರಾಠಿ ಭಾಷಿಕರಿಂದ ಮತ್ತೆ ಗೂಂಡಾಗಿರಿ

ಕನ್ನಡಿಗರನ್ನ ನೋಡಿದ್ರೆ ಮೈಮೇಲೆ ಚೇಳು ಓಡಾಡ್ದಂಗೆ ವಿಲವಿಲ ಅನ್ನೋ ಮರಾಠಿಗರು ಮತ್ತೆ ಪುಂಡಾಟ ಮುಂದುವರೆಸಿದ್ದಾರೆ. ಕೆಎಸ್​ಆರ್​ಟಿಸಿ ಬಸ್​ ಏರಿದವರ ಬಳಿ, ಸರ್​ ಟಿಕೆಟ್​ ತಗೊಳ್ಳಿ ಸರ್​ ಅಂದಿದ್ದ ಮಾತ್ರಕ್ಕೆ, ಲೇಯ್​ ಕನ್ನಡದಲ್ಲಿ ಮಾತಾಡಬೇಡ, ಮರಾಠಿನಲ್ಲಿ ಮಾತಾಡೋ ಅಂತಾ ಕಿರಿಕ್​ ಮಾಡಿದ್ದಾರೆ. ಸಾಲದು ಅಂತ ಫೋನ್​ ಮಾಡಿ ಪುಂಡರನ್ನ ಕರೆಸಿಕೊಂಡು ಹಲ್ಲೆ ಮಾಡಿದ್ದ ಪುಡಿ ಗೂಂಡಾಗಳನ್ನ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಕೂರಿಸಲಾಗಿದೆ.

ಹಲ್ಲೆ ಮಾಡಿದ್ದ ಕಿರಾತರಕರನ್ನ ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ. ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನ ಅರೆಸ್ಟ್​​ ಮಾಡಲಾಗಿದ್ದು, ಮಾರುತಿ, ರಾಹುಲ್ ರಾಜು, ಬಾಳು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಬಾಳೇಕುಂದ್ರಿ ಗ್ರಾಮದವರು.

ಇದನ್ನೂ ಓದಿ:KEA- ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ಪರೀಕ್ಷೆ ದಿನಾಂಕ ಘೋಷಣೆ

publive-image

ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್​​​ ತಡೆದು ಆಕ್ರೋಶ

ಬೆಳಗಾವಿಯಲ್ಲಿ MES ಪುಂಡರ ಪುಂಡಾಟಕ್ಕೆ ವಿರೋಧ ಕರ್ನಾಟಕದಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರದುರ್ಗದಲ್ಲಿ ರೊಚ್ಚಿಗೆದ್ದ ಕರ್ನಾಟಕ ನವ ನಿರ್ಮಾಣ ಸೇನೆ ಐಮಂಗಲ ಟೋಲ್ ಸಮಿಪ ಮಹಾರಾಷ್ಟ್ರ ಬಸ್​​​ ತಡೆದು ಆಕ್ರೋಶ ಹೊರ ಹಾಕಿದ್ದಾರೆ. ಬಸ್ ಹಾಗೂ ಚಾಲಕನಿಗೆ ಮಸಿ ಬಳಿದು ಪ್ರತಿಭಟಿಸಿದ್ದಾರೆ.

ಏಟಿಗೆ ಎದಿರೇಟು ಅದಂಗೆ ಮರಾಠಿ ಗೂಂಡಾಗಳು ಮಾಡಿದ ಚಿಲ್ಲರೆ ಕೆಲಸಕ್ಕೆ, ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಆಕ್ರೋಶ ಹೊರ ಹಾಕಿದೆ. ಇನ್ನೂ ಆರೋಪಿಗಳ ವಿಚಾರಣೆ ಬಳಿಕವಷ್ಟೇ ಸತ್ಯಾ ಸತ್ಯತೆ ಹೊರ ಬೀಳಲಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment