newsfirstkannada.com

ಬಿಜೆಪಿಯ ಈ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ, 1000 ರೂಪಾಯಿ ದಂಡ ವಿಧಿಸಿದ ಕೋರ್ಟ್..!

Share :

Published February 3, 2024 at 9:38am

Update February 3, 2024 at 9:39am

  ಫೆಬ್ರವರಿ 17, 2012ರಂದು ನಡೆದಿದ್ದ ಪ್ರಕರಣ

  ಶಿಕ್ಷೆ ಬೆನ್ನಲ್ಲೇ ಸಂಸದರನ್ನು ವಶಕ್ಕೆ ಪಡೆಯಲಾಗಿತ್ತು

  ಉತ್ತರ ಪ್ರದೇಶದ ಈ ಸಂಸದರು ಮಾಡಿದ್ದ ತಪ್ಪು ಏನು?

ಪ್ರಯಾಗರಾಜ್​ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿಗೆ 6 ತಿಂಗಳ ಜೈಲು ಶಿಕ್ಷೆಯಾಗಿದೆ. ಜೊತೆಗೆ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. 2012ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೋರ್ಟ್​ ಜೈಲು ಶಿಕ್ಷೆ ನೀಡಿದೆ.

2012ರ ವಿಧಾನಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಕೋರ್ಟ್​ನ ನ್ಯಾಯಾಧೀಶ ಅಂಬರೀಶ್ ಕುಮಾರ್ ಶ್ರೀವಾಸ್ತವ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಶಿಕ್ಷೆ ಪ್ರಕಟವಾದ ಕೆಲವೇ ಹೊತ್ತಲ್ಲಿ ಅವರಿಗೆ ಜಾಮೀನು ಸಿಕ್ಕಿದೆ.

ಈ ಹಿಂದೆ ಜೋಶಿ ಕಾಂಗ್ರೆಸ್‌ನಲ್ಲಿದ್ದರು. ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿದ್ದರು. ಫೆಬ್ರವರಿ 17, 2012ರ ಸಂಜೆ ಬಹಿರಂಗ ಚುನಾವಣಾ ಪ್ರಚಾರ ಮುಗಿದ ನಂತರವೂ ರೀಟಾ ಬಹುಗುಣ ಜೋಶಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ದೂರು ನೀಡಿದ್ದು, ನಂತರ ಪ್ರಕರಣ ದಾಖಲಾಗಿತ್ತು.

ಫೆಬ್ರವರಿ 20, 2021 ರಂದು ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 126 ರ ಅಡಿಯಲ್ಲಿ ಅವರನ್ನು ಕೋರ್ಟ್​ ತಪ್ಪಿತಸ್ಥರೆಂದು ಘೋಷಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ಮತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಶಿಕ್ಷೆ ಪ್ರಕಟ ಆಗುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆಯಲಾಗಿತ್ತು, ನಂತರ ಜಾಮೀನು ಸಿಕ್ಕಿದೆ. 20,000 ಶ್ಯೂರಿಟಿ ಬಾಂಡ್​ನೊಂದಿಗೆ ಬಿಡುಗಡೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯ ಈ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ, 1000 ರೂಪಾಯಿ ದಂಡ ವಿಧಿಸಿದ ಕೋರ್ಟ್..!

https://newsfirstlive.com/wp-content/uploads/2024/02/BJP-MP.jpg

Load More