6 ನಕ್ಸಲರ ಶರಣಾಗತಿ.. ಕರ್ನಾಟಕದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ; ಹೇಗಿದೆ ಅಂತಿಮ ತಯಾರಿ?

author-image
admin
Updated On
6 ನಕ್ಸಲರ ಶರಣಾಗತಿ.. ಕರ್ನಾಟಕದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ; ಹೇಗಿದೆ ಅಂತಿಮ ತಯಾರಿ?
Advertisment
  • ಇಂದು 6 ನಕ್ಸಲರ ಶರಣಾಗತಿ.. ಕರ್ನಾಟಕ ನಕ್ಸಲ್ ಮುಕ್ತ, ಮುಕ್ತ!
  • ಬಂದೂಕಿನ ಮೂಲಕ ನ್ಯಾಯ ಪಡೆಯಲು ಹೋಗಿದ್ದವರ ಶರಣು
  • ಇಂದು ಮಲೆನಾಡಿನಲ್ಲಿ ಅಡಗಿದ್ದ 6 ಮಂದಿ ನಕ್ಸಲರ ಶರಣಾಗತಿ

ಚಿಕ್ಕಮಗಳೂರು: ಸಮಾಜದ ಮುಖ್ಯವಾಹಿನಿಯಿಂದ ಮರೆಯಾಗಿ ವನವಾಸದಲ್ಲಿರುವ ನಕ್ಸಲರ ಬದುಕಿಗೂ ಶ್ರಾವಣ ಬಂದಿದೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ.

ವನವಾಸ ಸಾಕಾಯ್ತು.. ಶರಣಗಾತಿಗೆ ಮನಸ್ಸಾಯ್ತು!
ಇಂದು 6 ನಕ್ಸಲರ ಶರಣಾಗತಿ.. ಕರ್ನಾಟಕ ನಕ್ಸಲ್ ಮುಕ್ತ!?
ನಕ್ಸಲ್ ಚಟುವಟಿಕೆಗಳನ್ನು ನಾವು ಸಹಿಸಲ್ಲ.. ನಿಮಗೆ ಇನ್ನೂ ಒಂದು ಚಾನ್ಸ್ ಕೊಡ್ತೀವಿ ಕೂಡಲೇ ಬಂದು ಸರ್ಕಾರಕ್ಕೆ ಶರಣಾಗಿ. ಹೀಗಂತ ವಾರದ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಘರ್ಜಿಸಿದ್ದರು. ವಿಪರ್ಯಾಸ ಎಂಬಂತೆ ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಅಡಗಿದ್ದ 6 ಮಂದಿ ನಕ್ಸಲರು ಶರಣಾಗತಿಗೆ ಬಯಸಿ ನಾಗರಿಕ ಸಮಿತಿಗೆ ಪತ್ರ ಬರೆದಿದ್ದಾರೆ. ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಶರಣಾಗತಿಗೆ ಸಮಯ ನಿಗದಿಯಾಗಿದೆ. ಬಂದೂಕು ಸಂಸ್ಕೃತಿ ಮೂಲಕ ನ್ಯಾಯ ಪಡೆಯಲು ಹೊರಟಿದ್ದ ನಕ್ಸಲರು ಹ್ಯಾಂಡ್​​ಸಪ್ ಮಾಡಿದ್ದು ಸಮಾಜದ ಮುಖ್ಯವಾಹಿನಿ ಬರಲು ಬಯಸಿದ್ದಾರೆ.

publive-image

ಶರಣಾಗುತ್ತಿರುವ ನಕ್ಸಲರು ಯಾರು?
ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ
ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ
ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿ

ಇದನ್ನೂ ಓದಿ: ಅಯ್ಯೋ.. ವಿಶಾಲ್‌ಗೆ ಏನಾಯ್ತು? ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ! ತಮಿಳು ಚಿತ್ರರಂಗ ಹೇಳಿದ್ದೇನು? 

ಇಂದು ಬೆಳಗ್ಗೆ 6 ನಕ್ಸಲರು ಶರಣಾಗತಿಗೆ ತಯಾರಿ ನಡೆದಿದ್ದು ಶಾಂತಿಗಾಗಿ ನಾಗರಿಕ ಸಮಿತಿ ಸಂಪರ್ಕದಲ್ಲಿದ್ದಾರೆ. ಆದರೆ ನಕ್ಸಲರಾದ ಜಯಣ್ಣ, ರಾಜಣ್ಣ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.
6 ನಕ್ಸಲರ ಶರಣಾಗತಿ ಹಿನ್ನೆಲೆಯಲ್ಲಿ ಮಾಜಿ ನಕ್ಸಲರು, ಇಂಟಲಿಜೆನ್ಸ್ ಪೊಲೀಸರು, ಶರಣಾಗತಿ ಸಮಿತಿ ಸದಸ್ಯರು ಮಹತ್ವದ ಸಭೆ ನಡೆಸಿದ್ದಾರೆ. ಕಳಸ ತಾಲೂಕಿನ ಕುದುರೆಮುಖದಲ್ಲಿ ಬಂಜೆಗೆರೆ ಜಯಪ್ರಕಾಶ್, ನೂರ್ ಶ್ರೀಧರ್, ಶ್ರೀಪಾಲ್, ಪಾರ್ವತೀಶ ಬಿಳಿದಾಳೆ, ಇಂಟಲಿಜೆನ್ಸ್ ಎಸ್‌ಪಿ ಹರಿರಾಮ್ ಶಂಕರ್ ಅವರು ಮೀಟಿಂಗ್ ಮಾಡಿರೋ ಫೋಟೋ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ. ಎಸ್ಪಿ, ನಕ್ಸಲ್ ಶರಾಣಗತಿ ಸಮಿತಿ, ಪುನರ್ ವಸತಿ ಸಮಿತಿ, ಶಾಂತಿಗಾಗಿ ನಾಗರೀಕ ವೇದಿಕೆ ನಡೆಸಿದ ಕೊನೆ ಮೀಟಿಂಗ್‌ನಲ್ಲಿ ನಕ್ಸಲರ ಶರಣಾಗತಿಗೆ ಜಿಲ್ಲಾಡಳಿತ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ.

publive-image

ಬಂದೂಕಿನ ಮೂಲಕ ಮಾತನಾಡುತ್ತಿದ್ದ ಆದರ್ಶವಾದಿಗಳಿಗೆ ಕೊನೆಗೂ ಪಾಪಪ್ರಜ್ಞೆ ಕಾಡಿದ್ದು ಆಯುಧ ಕೆಳಗಿಳಿಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿವೆ.

ಒತ್ತುವರಿ ತೆರವು, ಕಸ್ತೂರಿರಂಗನ್ ವರದಿಗೆ ವಿರೋಧ, ವಿಕ್ರಂಗೌಡ ಎನ್​​ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆಗೆ ನಕ್ಸಲರು ಬೇಡಿಕೆ ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬಂದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂಬೆಲ್ಲಾ ಬೇಡಿಕೆ ಇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment