newsfirstkannada.com

BIGG BOSS Kannada: ಎರಡನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಔಟ್​ ಆಗೋದು ಇವರೇನಾ..?

Share :

Published October 21, 2023 at 4:02pm

    ಕಿರುತೆರೆ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ ಬಿಗ್​ಬಾಸ್​

    6 ಸ್ಪರ್ಧಿಗಳಲ್ಲಿ ಈ ವಾರ ಮನೆಯಿಂದ ಆಚೆ ಹೋಗೋರು ಯಾರು?

    ಗೌರೀಶ್, ಸಂಗೀತಾ, ಭಾಗ್ಯಶ್ರೀ, ತನಿಷಾ, ಕಾರ್ತಿಕ್ ಹಾಗೂ ಸಂತೋಷ್​!

ಬಿಗ್​ಬಾಸ್‌ ಕನ್ನಡ ಸೀಸನ್​ 10 ಈಗ ಎರಡು ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಮೊದಲ ವಾರ ಬಿಗ್​ಬಾಸ್ ಮನೆಯಿಂದ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೊರಬಿದ್ದರು. ಎರಡನೇ ವಾರ ಔಟ್ ಆಗೋದು ಯಾರು ಎಂಬ ಪ್ರಶ್ನೆ ಈಗ ವೀಕ್ಷಕರಿಗೆ ಕಾಡುತ್ತಿದೆ.

ಅತೀ ದೊಡ್ಡ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಈಗ ಒಟ್ಟು 16 ಜನ ಇದ್ದಾರೆ. ಈ 16 ಜನರಲ್ಲಿ ಒಬ್ಬರು ಬಿಗ್​ಬಾಸ್​ ಮನೆಯಿಂದ ಆಚೆ ಬರಲಿದ್ದಾರೆ. ಹೌದು, ಬಿಗ್​ಬಾಸ್​​ ಸೀಸನ್​​ 10ರ ಎರಡನೇ ವಾರದಲ್ಲಿ ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಮತ್ತು ಕಾರ್ತಿಕ್ ಮಹೇಶ್ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದಾರೆ. ಈ ಆರು ಮಂದಿ ಪೈಕಿ ಯಾರ ಪಯಣ ಅಂತ್ಯವಾಗಲಿದೆ ಎಂದು ತೆರೆ ಬೀಳಬೇಕಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹೆಸರುಗಳು ಬಿಗ್​ಬಾಸ್​ ಮನೆಯಲ್ಲಿ ಉಳಿಯುದಿಲ್ಲ ಎಂದು ವೈರಲ್​ ಆಗುತ್ತಿವೆ. ಆ ಹೆಸರುಗಳ ಪೈಕಿ ಕಿರುತೆರೆ ನಟಿ ಭಾಗ್ಯಶ್ರೀ ಕೂಡ ಒಬ್ಬರು. ನಟಿ ಭಾಗ್ಯಶ್ರೀ ಅವರಿಗೆ ಕೆಲ ಟಾಸ್ಕ್‌ಗಳಲ್ಲಿ ಭಾಗವಹಿಸಲು ಅವಕಾಶವೇ ಸಿಕ್ಕಿಲ್ಲ. ಮನೆಯಲ್ಲಿ ಒಂದು ರೀತಿ ಟಾರ್ಗೆಟ್‌ ಆಗಿದ್ದರು. ಬಳಿಕ ಟಾಸ್ಕ್‌ನಲ್ಲಿ ಸೋತಿದ್ದಕ್ಕಾಗಿ ಶಿಕ್ಷೆಯ ರೂಪದಲ್ಲಿ ಇಡೀ ರಾತ್ರಿ ಬಿಗ್​ಬಾಸ್ ಮನೆಯಿಂದ ಹೊರಗಿದ್ದು ಶಿಕ್ಷೆ ಕೂಡ ಅನುಭವಿಸಿದ್ದರು. ಹೀಗಾಗಿ ಈ ವಾರ ನಟಿ ಭಾಗ್ಯಶ್ರೀ ಅವರು ಬಿಗ್​ಬಾಸ್​​ ಮನೆಯಿಂದ ಆಚೆ ಹೋಗಬಹುದು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS Kannada: ಎರಡನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಔಟ್​ ಆಗೋದು ಇವರೇನಾ..?

https://newsfirstlive.com/wp-content/uploads/2023/10/bigg-boss-2023-10-21T154835.589.jpg

Load More