ರಕ್ಕಸ ಮಳೆಗೆ ಧರೆಗುರುಳಿದ ಕರೆಮ್ಮ ದೇವಸ್ಥಾನದ ಗೋಪುರ
ಮಳೆಗೆ ಅಬ್ಬರಿಸುತ್ತಿರೋ ತುಂಗಭದ್ರೆ.. ಐತಿಹಾಸಿಕ ಹಂಪಿಗೆ ಜಲಸಂಕಷ್ಟ
ಭೋರ್ಗರೆಯುತ್ತಿರುವ ಸೀತಾ ನದಿ.. ಸ್ಥಳೀಯರ ನಿದ್ದೆಗೆಡಿಸಿದ ರಣಪ್ರವಾಹ
ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟ ಮುಂದುವರಿದಿದ್ದು ಅವಾಂತರಗಳೂ ಕೂಡ ಹೆಚ್ಚಾಗಿದೆ. ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿದ್ದು ಅಪಾರ ಪ್ರಮಾಣದ ನೀರು ಹರಿಸಲಾಗ್ತಿದೆ. ನದಿಪಾತ್ರದ ಮನೆಗಳು, ಮಠ-ಮಂದಿರಗಳು ಮುಳುಗಿವೆ. ನೂರಾರು ಎಕರೆಯಲ್ಲಿದ್ದ ಬೆಳೆ ನೀರುಪಾಲಾಗಿದೆ. ಅನ್ನದಾತರು ಕಣ್ಣೀರು ಸುರಿಸುವಂತಾಗಿದೆ.
ಕೇರಳ, ಮಹಾರಾಷ್ಟ್ರ, ಉತ್ತರಾಖಂಡ್, ಹಿಮಾಚಲದಲ್ಲಿ ಅಬ್ಬರಿ ಬೊಬ್ಬರಿದ ಮಳೆರಾಯ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಇತ್ತ ಕರ್ನಾಟಕದಲ್ಲೂ ಮಳೆರಾಯನ ಅವಾಂತರಗಳೇನು ಕಡಿಮೆ ಇಲ್ಲ. ಧಾರಾಕಾರ ಮಳೆಯಿಂದ ಕರುನಾಡಿನ ನದಿಗಳು ಉಕ್ಕಿ ಹರಿಯುತ್ತಿದ್ದು, ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿವೆ.
ಮಹಾ ಮಳೆ ಆರ್ಭಟ.. ಐತಿಹಾಸಿಕ ಟವರ್ ಕುಸಿತ
ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಕಿತ್ತೂರಿನ ಐತಿಹಾಸಿಕ ಗಡಾದ ಮರಡಿ ಮೇಲಿನ ವಾಚ್ ಟವರ್ ಕುಸಿದಿದೆ. 2 ವರ್ಷಗಳ ಹಿಂದೆ ಜೀರ್ಣೋದ್ಧಾರಕ್ಕೆ ಚಾಲನೆ ಸಿಕ್ಕಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಆದ್ರೀಗ ಈ ವಾಚ್ ಟವರ್ ಮಳೆಗೆ ಬಲಿಯಾಗಿದೆ.
ಧರೆಗುರುಳಿದ ಕರೆಮ್ಮ ದೇವಸ್ಥಾನದ ಗೋಪುರ
ಭಾರೀ ಮಳೆಗೆ ಕಿತ್ತೂರಿನಲ್ಲಿರುವ ಕರೆಮ್ಮದೇವಿಯ ದೇವಸ್ಥಾನದ ಗೋಪುರ ಧರೆಗುರುಳಿದೆ. 3 ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ಮಂದಿರದ ಗೋಪುರ ಸತತ ಮಳೆಯಿಂದ ಉರುಳಿದ್ದು ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ 6 ಮಂದಿ
ಇತ್ತ ಚಿಕ್ಕೋಡಿ ಗಡಿಯ ಕೃಷ್ಣಾ ನದಿ ಪ್ರವಾಹದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ಕೊಚ್ಚಿ ಹೋಗಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಕಿವಾಟ್, ಬಸ್ತವಾಡ ರಸ್ತೆಯಲ್ಲಿ ಘಟನೆ ನಡೆದಿದೆ. ಸದ್ಯ ನಾಲ್ವರನ್ನು ರಕ್ಷಿಸಲಾಗಿದ್ದು ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗ್ತಿದೆ.
ಬೆಳೆದು ನಿಂತಿದ್ದ ಬೆಳೆ ನುಂಗಿದ ವರದಾ ನದಿ!
ಮತ್ತೊಂದೆಡೆ ಹಾವೇರಿಯ ಕರ್ಜಗಿ ಹಾಗೂ ಕಲಕೋಟಿ ಭಾಗದಲ್ಲಿ ವರದಾ ನದಿ ಅಬ್ಬರಕ್ಕೆ ಟೊಮ್ಯಾಟೋ, ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳು ನೀರುಪಾಲಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಕಂಗಾಲಾಗಿದ್ದಾರೆ.
ಹುಲಿಗೆಮ್ಮ ದೇವಿಗೆ ಜಲದಿಗ್ಬಂಧನ.. ಭಕ್ತರಿಗಿಲ್ಲ ದರ್ಶನ!
ಇನ್ನು ಕೊಪ್ಪಳದ ಮುನಿರಾಬಾದ್ನಲ್ಲಿ ತುಂಗಭದ್ರೆಯ ರಣಾರ್ಭಟಕ್ಕೆ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಕೋಟ್ಯಂತರ ಭಕ್ತರ ಆರಾಧ್ಯಧೈವ ಹುಲಿಗೆಮ್ಮ ದೇವಿ ದೇಗುಲಕ್ಕೂ ಜಲ ಕಂಟಕ ಎದುರಾಗಿದೆ.
ತುಂಗಭದ್ರೆ ಅಬ್ಬರ.. ಐತಿಹಾಸಿಕ ಹಂಪಿಗೆ ಜಲಸಂಕಷ್ಟ!
ಇನ್ನು ಟಿಬಿ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ವಿಜಯನಗರ ಜಿಲ್ಲೆಯ ಹಂಪಿಗೆ ಜಲಸಂಕಷ್ಟ ಎದುರಾಗಿದೆ. ಹಂಪಿಯ ರಾಮ-ಲಕ್ಷ್ಮಣ, ಸೀತೆ ದೇಗುಲ ಜಲಾವೃತವಾಗಿದೆ.
ತುಳುನಾಡಿನಲ್ಲಿ ಸೀತಾ ನದಿ ಪ್ರವಾಹ.. ಪ್ರಕೋಪ!
ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕಾರ್ಕಳದಲ್ಲಿ 339 ಮಿ.ಮೀ ದಾಖಲೆ ಮಳೆಯಾಗಿದೆ. ಸೀತಾ ನದಿ ಭೋರ್ಗರೆಯುತ್ತಿದ್ದು ನದಿ ಪಾತ್ರಗಳು ಮುಳುಗಡೆಯಾಗಿವೆ. ಸೀತಾ ನದಿಯ ರಣಪ್ರವಾಹ ಸ್ಥಳೀಯರ ನಿದ್ದೆಗೆಡಿಸಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯ ಮುನ್ಸೂಚನೆ ಇದ್ದು, ಇವತ್ತು ಕೂಡ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ