/newsfirstlive-kannada/media/post_attachments/wp-content/uploads/2024/08/GINGER-AND-CLOVES-1.jpg)
ಭಾರತೀಯ ಸಂಪ್ರಾದಾಯಿಕ ಔಷಧಿಯಲ್ಲಿ ಲವಂಗವನ್ನು ಒಂದು ಮೌತ್ ಫ್ರೆಶನರ್ ರೀತಿ ನೋಡಲಾಗುತ್ತದೆ. ಲವಂಗ ಕೇವಲ ಆಹಾರ ತಯಾರು ಮಾಡುವಾಗ ಬಳಸುವ ವಸ್ತು ಮಾತ್ರವಲ್ಲ ಅದು ಒಂದು ಔಷಧಿಯಾಗಿಯೂ ಕೂಡ ನಮ್ಮ ಮನೆಯ ಅಡುಮನೆಯಲ್ಲಿರಬೇಕು. ಅದರಲ್ಲೂ ಪ್ರಮುಖವಾಗಿ ಊಟವಾದ ಒಂದು ಲವಂಗವನ್ನು ಜಗಿಯುವುದರಿಂದ ಆಗುವ ಲಾಭಗಳು ಹಲವಾರು ಇವೆ. ನಿತ್ಯ ಊಟದ ನಂತರ ಒಂದೇ ಒಂದು ಲವಂಗವನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳೇನು ಎಂಬುದನ್ನು ನೋಡುವುದಾದ್ರೆ.
1. ಹೇರಳವಾಗಿರುವ ಆ್ಯಂಟಿಆಕ್ಸಿಡೆಂಟ್ಸ್
ಲವಂಗದಲ್ಲಿ ನಮಗೆ ಆ್ಯಂಟಿಆ್ಯಕ್ಸಿಂಟ್ಸ್ಗಳ ಅಂಶಗಳು ಹೇರಳವಾಗಿ ದೊರಕುತ್ತವೆ. ಇದು ದೇಹದ ಆಯಾಸದ ವಿರುದ್ಧ ಹೋರಾಡಲು ಬಹಳ ಸಹಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಊಟವಾದ ಮೇಲೆ ಲವಂಗ ತಿನ್ನುವುದರಿಂದ ನೀವು ಸೇವಿಸಿದ ಆಹಾರ ನಿಮ್ಮ ದೇಹದ ಯಾವುದೇ ಭಾಗದ ಸೆಲ್ಗಳಿಗೆ ಹಾನಿಯನ್ನುಂಟು ಮಾಡದಂತೆ ತಡೆಯುವ ಶಕ್ತಿ ಲವಂಗದಲ್ಲಿದೆ. ಕೇವಲ ಇಷ್ಟು ಮಾತ್ರವಲ್ಲ. ವಯಸ್ಸಾಗುವ ಪ್ರಕ್ರಿಯೆ ವೇಗಕ್ಕೆ ಇದು ಕೊಂಚ ತಡೆ ನೀಡುತ್ತದೆ. ಆಂದ್ರೆ ಆ್ಯಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ. ಇನ್ನು ಇದು ಶ್ವಾಸಕೋಶದ ಆರೋಗ್ಯಕ್ಕೆ ಮತ್ತು ಚರ್ಮದ ಆರೈಕೆಗೂ ಕೂಡ ತುಂಬಾ ಸಹಾಯಕಾರಿ.
2. ಎದೆ ಉರಿಯುವಿಕೆಯಂತಹ ಸಮಸ್ಯೆಗಳ ನಿವಾರಣೆ
ಊಟವಾದ ಮೇಲೆ ಲವಂಗವನ್ನು ತಿನ್ನುವುದರಿಂದ ಇದು ನಮ್ಮ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ. ಇದು ಹೊಟ್ಟೆಯೊಳಿಗಿರುವ ಆ್ಯಸಿಡ್ ಅಂಶವನ್ನ ಸಮತೋಲನದಲ್ಲಿಡಲು ಸಹಾಯಕವಾಗುತ್ತದೆ. ಇದರಿಂದಾಗಿ ನಮಗೆ ಆಗಾಗ ಹೃದಯ ಭಾಗದಲ್ಲಿ ಅಥವಾ ಎದೆಭಾಗದಲ್ಲಿ ಕಾಣುವ ಉರಿಯುವ ಲಕ್ಷಣಗಳನ್ನು ಇಲ್ಲದಂತಾಗಿಸುತ್ತದೆ ಲವಂಗ
ಇದನ್ನೂ ಓದಿ:ಜೇನುತುಪ್ಪ ಸೇವನೆ ಎಷ್ಟು ಆರೋಗ್ಯಕರವೋ ಅಷ್ಟೇ ಡೇಂಜರ್! ನೀವು ಓದಲೇಬೇಕಾದ ಸ್ಟೋರಿ
3. ಅತಿಯಾಗಿ ತಿನ್ನುವುದು ಕೂಡ ಅಪಾಯಕಾರಿ
ಲವಂಗ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾ ಅದನ್ನು ಅತಿಯಾಗಿ ಸೇವಿಸುವುದು ಕೂಡ ಅತ್ಯಂತ ಅಪಾಯಕಾರಿ ಎನ್ನುವುದನ್ನು ಕೂಡ ಅರಿತುಕೊಳ್ಳಬೇಕು. ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತವೂ ಇರಬೇಕಾದ ಗಾತ್ರದಲ್ಲಿ ಇರದ ತೆಳ್ಳಗಾಗುವ ಸಾಧ್ಯತೆ ಹೆಚ್ಚು. ವಾಂತಿ, ವಾಕರಿಕೆಯಂತಹ ಸಮಸ್ಯೆಗಳು ಕೂಡ ಅತಿಯಾದ ಲವಂಗ ಸೇವನೆಯಿಂದ ಉಂಟಾಗುತ್ತದೆ.
4.ಬಾಯಿ ವಾಸನೆಯನ್ನು ನಿವಾರಿಸುತ್ತದೆ
ಊಟವಾದ ಮೇಲೆ ಲವಂಗ ತಿನ್ನುವುದರಿಂದ ಬಾಯಿಂದ ಬರುವ ದುರ್ಗಂದ ಸಂಪೂರ್ಣವಾಗಿ ನಿಂತು ಹೋಗುತ್ತದೆ.ಲವಂಗ ಬಾಯಿಯಲ್ಲಿರುವ ಅನಾರೋಗ್ಯಕಾರಿ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುವುದರಿಂದ ಬಾಯಿಯಿಂದ ಬರುವ ದುರ್ವಾಸನೆ ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಮೌತ್ ಫ್ರೆಶನರ್ ರೀತಿ ಕಾರ್ಯ ನಿರ್ವಹಿಸುತ್ತದೆ.
5. ಸಂಪೂರ್ಣ ಬಾಯಿಯ ಆರೋಗ್ಯ ಕಾಪಾಡುತ್ತದೆ.
ಕೇವಲ ಬಾಯಿಯ ದುರ್ವಾಸನೆಯನ್ನು ಮಾತ್ರವಲ್ಲಾ ಒಟ್ಟಾರೆಯಾಗಿ ಇದು ಇಡೀ ಒರಲ್ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ. ಹಲ್ಲು ಹುಳುಕಾಗುವುದು. ವಸಡಿನಿಂದ ರಕ್ತಸ್ರಾವದಂತಹ ಸಮಸ್ಯೆ ಇವೆಲ್ಲ ಸಮಸ್ಯೆಗಳಿಗೂ ಲವಂಗ ಆ್ಯಂಟಿ ಬಯೋಟಿಕ್ ಮಾತ್ರೆಯಂತೆ ಕೆಲಸ ಮಾಡುತ್ತದೆ.
6.ರಕ್ತ ಪರಿಚಲನೆಗೆ ಸಹಾಯಕ
ಒಂದು ಮಟ್ಟದಲ್ಲಿ ನಿತ್ಯ ಊಟವಾದ ನಂತರ ಲವಂಗವನ್ನು ಸೇವಿಸಿದರೆ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಲವಂಗದಲ್ಲಿ ಯುಜೆನಾಲ್ ಎನ್ನುವ ಅಂಶವಿದ್ದು ಇದು ಊರಿಯೂತ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ರಕ್ತ ಪರಿಚಲನೆಯಾಗಲು ಇದು ರಕ್ತದಲ್ಲಿ ಹೆಚ್ಚು ಆಮ್ಲಜನಕ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತದೆ. ಅದು ಮಾತ್ರವಲ್ಲ ಊಟವಾದ ಮೇಲೆ ಲವಂಗವನ್ನು ಸೇವಿಸುವುದರಿಂದ ದೇಹದ ಶಕ್ತಿಯಲ್ಲಿಯೂ ಕೂಡ ಸುಧಾರಣೆ ಕಂಡು ಬರುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ