/newsfirstlive-kannada/media/post_attachments/wp-content/uploads/2025/01/6-Sister-Marriage-2.jpg)
ಈಗಿನ ಕಾಲದಲ್ಲಿ ಮನೆಯಲ್ಲಿರೋ ಒಬ್ಬ ಹುಡುಗನಿಗೆ ಮದುವೆ ಆಗೋಕೆ ಒಂದು ಹುಡುಗಿ ಸಿಕ್ಕಿದ್ರೆ ಸಾಕು ಅಂತ ಹುಡುಕಾಡುತ್ತಾ ಇದ್ದಾರೆ. ವಯಸ್ಸಿಗೆ ಸರಿಯಾಗಿ ಹುಡುಗಿ ಸಿಗದೆ ಸನ್ಯಾಸಿಗಳಾಗೋ ಎಷ್ಟು ಯುವಕರು ನಮ್ಮ ದೇಶದಲ್ಲಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಒಂದು ವಿಚಿತ್ರ ಮದುವೆ ನಡೆದಿದೆ. ಈ ಮದುವೆ ಕಳೆದ 1 ವರ್ಷದಿಂದ ಚರ್ಚೆಯ ವಿಷಯವಾಗಿದೆ ಅಂದ್ರೆ ಅಚ್ಚರಿ ಪಡಲೇಬೇಕು.
ಕಳೆದ 1 ವರ್ಷದಿಂದ ಕಾಯುತ್ತಿದ್ದ ಈ 6 ಸಹೋದರಿಯರು 6 ಸಹೋದರರ ಜೊತೆ ಮದುವೆ ಆಗಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಹೈರಾನ್ ಕರ್‌ನಲ್ಲಿ ಈ ಘಟನೆ ನಡೆದಿದೆ.
ಒಂದೇ ಮಂಟಪದಲ್ಲಿ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದೇ ಒಂದು ವಿಶೇಷ. ಆದರೆ ಈ 6 ಸಹೋದರಿಯರು ಕಳೆದ ಒಂದು ವರ್ಷದಿಂದ ಕಾದಿದ್ದು ಯಾಕೆ ಅನ್ನೋದು ವಿಶೇಷವಾಗಿದೆ.
ಈ 6 ಸಹೋದರಿಯರು ಒಂದೇ ಕುಟುಂಬದ 6 ಸಹೋದರರನ್ನ ಮದುವೆಯಾಗಲು 1 ವರ್ಷ ಕಾದಿದ್ದಾರೆ. ವರನ ಕುಟುಂಬದಲ್ಲಿ ಕೊನೆಯ ಸಹೋದರ ಅಪ್ರಾಪ್ತನಾಗಿದ್ದ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನು ವಯಸ್ಕನಾದ ಮೇಲೆ ಒಂದೇ ಬಾರಿಗೆ 6 ಸಹೋದರಿಯರು ಒಂದೇ ಕುಟುಂಬಕ್ಕೆ ಸೊಸೆಯರಾಗಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.. ಒಂದೇ ಬಾರಿ ಅತಿಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಾತೆ ಯಾರು?
6 ಸಹೋದರಿಯರ ಮದುವೆಗೆ 3 ಕಾರಣಗಳು
1. ಪಾಕಿಸ್ತಾನ 6 ಸಹೋದರಿಯರು ಮನೆಯವರ ಆರ್ಥಿಕ ಹೊರೆಯನ್ನ ತಪ್ಪಿಸಿಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದೇ ಸಾರಿ ಸಾಮೂಹಿಕ ಮದುವೆಯಾಗಿ ಮನೆಯವರ ಆರ್ಥಿಕ ಭಾರವನ್ನು ಇಳಿಸಿದ್ದಾರೆ.
2. 6 ಸಹೋದರಿಯರು ಒಟ್ಟಿಗೆ ಬೆಳೆದು ಒಟ್ಟಿಗೆ ಮದುವೆಯಾಗಿದ್ದಾರೆ. ಇವರ ಮಧ್ಯೆ ಇರೋ ಪ್ರೀತಿ, ಬಾಂಧವ್ಯ ಮುಂದುವರಿದಿದ್ದು, 6 ಸಹೋದರರು ವರದಕ್ಷಿಣೆ ಪಡೆಯದೆ ಮದುವೆಯಾಗಿದ್ದಾರೆ.
3. 6 ನವವಧುವಿನ ಮದುವೆಗೆ ಖರ್ಚಾಗಿದ್ದು ಕೇವಲ ಒಂದು ಲಕ್ಷ ಮಾತ್ರ. ದುಂದು ವೆಚ್ಚ, ಆಡಂಭರದ ಬದಲು ಕೇವಲ ಆತ್ಮೀಯರಿಗೆ ಮಾತ್ರ ಆಹ್ವಾನ ಕೊಟ್ಟು ಸಿಂಪಲ್ ಮ್ಯಾರೇಜ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ