/newsfirstlive-kannada/media/post_attachments/wp-content/uploads/2025/02/Gold-Toilet-UK-Stollen-1.jpg)
ಇಂಗ್ಲೆಂಡ್ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಹುಟ್ಟಿದ ಊರು ಬ್ಲೆನ್ಹೆಮ್ ಅರಮನೆಯಲ್ಲಿದ್ದ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಕಳವು ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು.
2019ರಲ್ಲಿ ಸೆಪ್ಟೆಂಬರ್ 14ರಂದು ಕೇವಲ 5 ನಿಮಿಷಗಳಲ್ಲಿ ಅರಮನೆಗೆ ನುಗ್ಗಿದ್ದ ಐವರು ಬಂಗಾರದ ಟಾಯ್ಲೆಟ್ ಕದ್ದು ಹೋಗಿದ್ರು. ಹೀಗೆ ಕದ್ದ ಚಿನ್ನಕ್ಕೆ ಕಳ್ಳರು ಕಾರ್ ಅನ್ನೋ ಕೋಡ್ ವರ್ಡ್ ಇಟ್ಟುಕೊಂಡು ವ್ಯವಹಾರ ನಡೆಸಿದ್ರು.
ಇದನ್ನೂ ಓದಿ: ಕಂಡು ಕೇಳರಿಯದ ಘಟನೆಗಳು.. ಮತ್ತೊಮ್ಮೆ ಪ್ರಳಯದ ಡೇಟ್ ಫಿಕ್ಸ್ ಆಯ್ತಾ? 2025ಕ್ಕೆ 5 ವಿನಾಶದ ಭವಿಷ್ಯ?
₹400 ಸುತ್ತಿಗೆ ಬಳಸಿ ₹42 ಕೋಟಿ ಮೌಲ್ಯದ ಚಿನ್ನ ಕದ್ದಿದ್ರು!
ಬ್ರಿಟನ್ ನ್ಯಾಯಾಲಯದಲ್ಲಿ ಇದೇ ಪ್ರಕರಣದ ವಿಚಾರಣೆ ನಡೀತಿದೆ. ಕಳ್ಳರ ಖತರ್ನಾಕ್ ಪ್ಲಾನ್ ಏನು? ಪ್ರಾಸಿಕ್ಯೂಟರ್ ಜೂಲಿಯನ್ ಕ್ರಿಸ್ಟೋಫರ್ ನೀಡಿದ ಮಾಹಿತಿ ಎಲ್ಲರನ್ನೂ ದಂಗುಬಿಡಿಸಿದೆ. 400 ರೂಪಾಯಿ ಬೆಲೆ ಬಾಳುವ ಸುತ್ತಿಗೆ ಬಳಸಿದ್ದ ಖದೀಮರು ಬ್ಲೆನ್ಹೆಮ್ ಅರಮನೆಗೆ ಕನ್ನ ಹಾಕಿದ್ರು. 98 ಕೆಜಿ ತೂಕದ ಸರಿ ಸುಮಾರು ₹42 ಕೋಟಿ ಮೌಲ್ಯದ ಚಿನ್ನದ ಟಾಯ್ಲೆಟ್ ದೋಚಿದ್ರು. ಆದರೆ, ಕಳ್ಳತನಕ್ಕೆ ಬಳಸಿದ್ದ ಸುತ್ತಿಗೆಯನ್ನು ಕ್ರೈಮ್ ಸೀನ್ ನಡೆದ ಸ್ಥಳದಲ್ಲೇ ಬಿಟ್ಟು ಹೋಗಿದ್ರು. ಈ ಎರಡೂ ಸಾಕ್ಷಿಗಳು ಐವರು ಖದೀಮರನ್ನ ಬಂಧಿಸೋದಕ್ಕೆ ನೆರವಾಗಿತ್ತು.
Police have released footage of the moment thieves stole £4.75m gold toilet from Blenheim Palace.
The suspects appeared in court. pic.twitter.com/imjgdr0JGP
— Mukhtar (@I_amMukhtar)
Police have released footage of the moment thieves stole £4.75m gold toilet from Blenheim Palace.
The suspects appeared in court. pic.twitter.com/imjgdr0JGP— Mukhtar (@I_amMukhtar) February 25, 2025
">February 25, 2025
17 ಗಂಟೆಗಳ ಸಿಸಿಟಿವಿ ದೃಶ್ಯಾವಳಿ ನೋಡಿದ್ರು ಪೊಲೀಸರು!
ಪ್ರಕರಣ ನಡೆದ ಕೂಡಲೇ ಸ್ಥಳಕ್ಕೆ ಬಂದಿದ್ದ 17 ಗಂಟೆಗಳ ಸಿಸಿಟಿವಿ ದೃಶ್ಯಾವಳಿ ಅವಲೋಕಿಸಿದ್ರು. ಇದೇ ವೇಳೆಯೇ ಹಿಂದಿನ ದಿನ ಇಬ್ಬರು ಫೋಟೋ ತೆಗೆದ ದೃಶ್ಯ ಕಂಡಿತ್ತು. ಈ ಎರಡೂ ಅನುಮಾನಗಳ ಜಾಡು ಹಿಡಿದು ಹೊರಟಿದ್ದ ಪೊಲೀಸರು ಮೈಕೆಲ್ ಜೋನ್ಸ್ ಅನ್ನೋ ಶಂಕಿತನನ್ನ ಬಂಧಿಸಿದ್ರು.
ಆ ಬಳಿಕ ಐವರು ಕಳ್ಳರ ಜಾಡು ಸಿಕ್ಕಿತ್ತು. ಬರ್ಕ್‌ಷೈರ್‌ನ ಫ್ರೆಡೆರಿಕ್ ಸೈನ್ಸ್ ಮತ್ತು ಪಶ್ಚಿಮ ಲಂಡನ್‌ನ ಬೋರಾ ಗುಕ್ಕುಕ್ ಕದ್ದ ಮಾಲು ವರ್ಗಾಯಿಸಲು ಪಿತೂರಿ ಮಾಡಿದ ಆರೋಪ ಎದುರಿಸಿದ್ರು. ಎರಡೇ ವಾರದಲ್ಲಿ ಕದ್ದಿದ್ದ ಚಿನ್ನವನ್ನು ಬಿಡಿ ಭಾಗಗಳಾಗಿ ವಿಭಜಿಸಿ ಹ್ಯಾಟನ್ ಗಾರ್ಡನ್‌ನ ಆಭರಣ ವ್ಯಾಪಾರಿಗೆ ಮಾರಾಟ ಮಾಡಿದ್ರು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ