/newsfirstlive-kannada/media/post_attachments/wp-content/uploads/2025/04/karnataka-1st-standard-madhu-bangarappa.jpg)
ಒಂದನೇ ತರಗತಿ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ಕಡ್ಡಾಯವಾಗಿರಬೇಕು. ರಾಜ್ಯದಲ್ಲಿ ಲಕ್ಷಾಂತರ ಪೋಷಕರು ತಮ್ಮ ಮಕ್ಕಳನ್ನು 1ನೇ ತರಗತಿಗೆ ಸೇರಿಸೋ ತವಕದಲ್ಲಿದ್ರೂ ಈ ವಯೋಮಿತಿ ಗೊಂದಲದಿಂದ ಪರದಾಡುತ್ತಿದ್ದರು. ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪೋಷಕರ ಗೊಂದಲ ಹಾಗೂ ಮಕ್ಕಳ ಆತಂಕಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.
ಒಂದನೇ ತರಗತಿ ಮಕ್ಕಳಿಗೆ ವಯೋಮಿತಿ ಗೊಂದಲದ ಹಿನ್ನೆಲೆಯಲ್ಲಿ SEP (ಸ್ಟೇಟ್ ಎಜುಕೇಶನ್ ಪಾಲಿಸಿ) ಶಿಕ್ಷಣ ಇಲಾಖೆಗೆ ವರದಿ ಸಲ್ಲಿಕೆ ಮಾಡಿದೆ. ಈ SEP ತಂಡದ ವರದಿಯನ್ನು ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ಮೂಲಕ ಬಹಿರಂಗಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಡಾ.ರಾಜ್ ಕುಮಾರ್ ಅಪರೂಪದ ಫೋಟೋ ಹಂಚಿಕೊಂಡ ಮೊಮ್ಮಗ; ಏನಿದರ ವಿಶೇಷ?
ನ್ಯೂಸ್ ಫಸ್ಟ್‌ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದರ ಪ್ರಕಾರ 1ನೇ ತರಗತಿ ಶಾಲಾ ಮಕ್ಕಳ ವಯೋಮಿತಿ ಗೊಂದಲದ ಹಿನ್ನೆಲೆಯಲ್ಲಿ ಇಂದು ಸಚಿವ ಮಧು ಬಂಗಾರಪ್ಪನವರು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. SEP (ಸ್ಟೇಟ್ ಎಜುಕೇಶನ್ ಪಾಲಿಸಿ) ಸರ್ಕಾರ ವರದಿ ಸಲ್ಲಿಸಿರುವ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪನವರು ಸುದ್ದಿಗೋಷ್ಠಿ ಕರೆದಿರೋದು ಕುತೂಹಲ ಕೆರಳಿಸಿದೆ.
ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷದ ಆದೇಶದ ಬಗ್ಗೆ SEP ಸಮಿತಿ ವರದಿ ನೀಡಿದೆ. ಮೂಲಗಳ ಪ್ರಕಾರ ಇನ್ಮುಂದೆ ರಾಜ್ಯದಲ್ಲಿ 1ನೇ ತರಗತಿ ಮಕ್ಕಳ ದಾಖಲಾತಿಗೆ 5 ವರ್ಷ 10 ತಿಂಗಳ ವಿನಾಯತಿ ನೀಡುವ ಸಾಧ್ಯತೆ ಇದೆ. ಶಿಕ್ಷಣ ಸಚಿವರ ಸುದ್ದಿಗೋಷ್ಠಿಯಲ್ಲಿ ಮಕ್ಕಳ ವಯೋಮಿತಿ ಗೊಂದಲದ ವಿಚಾರಕ್ಕೆ ತಾರ್ಕಿಕ ಅಂತ್ಯ ಹೇಳುವ ಸಾಧ್ಯತೆ ಇದೆ.
ಒಂದನೇ ತರಗತಿ ಅಡ್ಮಿಷನ್ ಮಾಡಿಸಿಕೊಳ್ಳಲು 6 ವರ್ಷ ಕಡ್ಡಾಯ ಎಂಬ ರೂಲ್ಸ್ 2022ರಲ್ಲಿ ಫ್ರೇಮ್ ಮಾಡಲಾಗಿತ್ತು. ಈ ಸಂಬಂಧ 5-6 ಲಕ್ಷ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲನೆ ಮಾಡಿರುವ ಸಮಿತಿಯ ವರದಿಯ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಅಧಿಕೃತ ಮಾಹಿತಿ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ