/newsfirstlive-kannada/media/post_attachments/wp-content/uploads/2024/08/YOGA.jpg)
ಚಳಿಗಾಲ ಬಂತು ಎಂದರೆ ಒಂದು ಯಾವುದೋ ರೀತಿಯ ಆಲಸ್ಯತನ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇದು ನಮ್ಮ ಜೀವನ ಕ್ರಮವನ್ನೇ ಹಲವು ರೀತಿಯಲ್ಲಿ ಬದಲಿಸಿಬಿಡುತ್ತದೆ. ಇಡೀ ದಿನ ಆಲಸ್ಯತನದಿಂದಲೇ ದೂಡುವಂತೆ ಮಾಡಿಬಿಡುತ್ತದೆ. ಅದಕ್ಕೆ ಕಾರಣ ಚಳಿಗಾಲದ ಒಂದು ವಾತಾವರಣ. ಚಳಿಗಾಲದಲ್ಲಿ ನಮ್ಮನ್ನು ನಾವು ಹೆಚ್ಚು ಆ್ಯಕ್ಟಿವ್ ಆಗಿ ಇಟ್ಟುಕೊಳ್ಳಲು ತಪ್ಪದೇ ಕೆಲವು ಯೋಗಗಳನ್ನು ಮಾಡಬೇಕು. ಇದರಿಂದ ದೇಹವೂ ಕೂಡ ಚಳಿಗಾಲವನ್ನು ಎದುರಿಸಲು ಸಿದ್ಧಗೊಳ್ಳುವುದರೊಂದಿಗೆ. ದೇಹದಲ್ಲಿ ಹೊಸದಾದ ಉತ್ಸಾಹವೊಂದು ಬಂದುಬಿಡುತ್ತದೆ. ಅದರಲ್ಲೂ ಈ 6 ಬಗೆಯ ಯೋಗಾಸನಗಳಿಂದ ನಿಮ್ಮ ಜೀರ್ಣಕ್ರಿಯೆಯೂ ಸರಳಗೊಂಡು ನೀವು ಚೈತನ್ಯದ ಚಿಲುಮೆಯಂತೆ ಆಗುತ್ತೀರಿ.
/newsfirstlive-kannada/media/post_attachments/wp-content/uploads/2024/11/Marjaryasana.jpg)
1 ಮಾರ್ಜರ್ಯಾಸನ
ಇದು ಹಸು ಮತ್ತು ಬೆಕ್ಕಿನ ಭಂಗಿಯನ್ನು ಬೆರೆತ ಒಂದು ಯೋಗಾಸನ ನಮ್ಮ ದೇಹವನ್ನು ದುಂಡನೆ ಆಕಾರಕ್ಕೆ ತಂದು ಹೊಟ್ಟೆಯನ್ನು ಮುಂದಕ್ಕೆ ಚಾಚಿಕೊಳ್ಳಬೇಕು. ಇದನ್ನು ಹಲವು ಬಾರಿ ಮಾಡುವುದರಿಂದ ನಮ್ಮ ಹೊಟ್ಟೆಗೆ ಒಂದು ರೀತಿಯ ಮಸಾಜ್ ಸಿಕ್ಕಂತೆ ಆಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ. ಅದರಲ್ಲೂ ಇದು ಚಳಿಗಾಲದಲ್ಲಿ ಮಾಡಲು ಅತ್ಯಂತ ಉತ್ತಮವಾದ ಆಸನ ಎಂದು ಹೇಳುತ್ತಾರೆ ಯೋಗ ಪಟುಗಳು. ಇದು ನಮ್ಮ ಬೆನ್ನಹುರಿಗೆ ಹೆಚ್ಚು ಫ್ಲೆಕ್ಸಿಬ್ಲಿಟಿ ಬರುವಂತೆ ಮಾಡುತ್ತದೆ. ಅದು ಮಾತ್ರವಲ್ಲದೇ ಯಾವುದೇ ಗ್ಯಾಸ್ ಸಮಸ್ಯೆಯಿಲ್ಲದೇ ಸರಳವಾಗಿ ಜೀರ್ಣಕ್ರಿಯೆ ನಡೆಯಲು ಮತ್ತು ದೇಹದಲ್ಲಿ ಸರಿಯಾದ ರಕ್ತಪರಿಚಲನೆ ಆಗಲು ಸಹಾಯಕವಾಗುತ್ತದೆ.
/newsfirstlive-kannada/media/post_attachments/wp-content/uploads/2024/11/Pavanamuktasana.jpg)
2 ಪವನಮುಕ್ತಾಸನ
ಪವನ ಮುಕ್ತಾಸನ, ನಾವು ನೆಲದ ಮೇಲೆ ಮಲಗಿ ಎರಡು ಕಾಲನ್ನು ಒಟ್ಟಿಗೆ ತಂದು ನಮ್ಮ ಎದೆಗೆ ಮುಟ್ಟಿಸಿಕೊಳ್ಳಬೇಕು. ನಮ್ಮ ಎರಡು ಕೈಗಳು ನಮ್ಮ ಎರಡು ಕಾಲಿನ ಮೊಣಕಾಲು ಭಾಗವನ್ನು ಹಿಡಿದಿರಬೇಕು. ಚಳಿಗಾಲದಲ್ಲಿ ಹೆಚ್ಚು ರಿಚ್ ಫುಡ್ ಅಷ್ಟು ಬೇಗ ಜೀರ್ಣವಾಗುವುದಿಲ್ಲ ಈ ಒಂದು ಆಸನ ಜೀರ್ಣಕ್ರಿಯೆಗೆ ಹೆಚ್ಚು ಬೆಂಬಲವಾಗಿ ನಿಲ್ಲುತ್ತದೆ. ಸರಿಯಾಗಿ ಮೊಣಕಾಲುಗಳನ್ನು ಒತ್ತಿ ಹಿಡಿಯುವುದರಿಂದ ಎದೆಯ ಮೇಲೆ ಹಾಗೂ ಹೊಟ್ಟೆಯ ಮೇಲೆ ಭಾರ ಬೀಳುತ್ತದೆ. ಇದು ಕಿಬ್ಬೊಟ್ಟೆಯ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುತ್ತದೆ.
/newsfirstlive-kannada/media/post_attachments/wp-content/uploads/2024/11/Paschimottanasana.jpg)
3 ಪಶ್ಚಿಮೋತ್ತಾಸನ
ಪಶ್ಚಿಮೋತ್ತಾಸನ ಮಾಡುವಾಗ ನಾವು ನೆಲದ ಮೇಲೆ ಕುಳಿತುಕೊಂಡು ಎರಡು ಕಾಲುಗಳನ್ನು ಸಮಾನಂತರವಾಗಿ ಚಾಚಿಕೊಂಡು ನಮ್ಮ ಮೊಣಕಾಲಿಗೆ ನಮ್ಮ ತಲೆಯನ್ನು ಸ್ಪರ್ಶಿಸುವ ಹಾಗೆ ಬಾಗಬೇಕು. ನಮ್ಮ ಕೈಗಳು ಮುಂಗಾಲುಗಳನ್ನು ಹಿಡಿದಿರಬೇಕು. ಈ ಆಸನವೂ ಕೂಡ ಹೊಟ್ಟೆಯ ಭಾಗದ ಮೇಲೆ ಹೆಚ್ಚು ಒತ್ತಡವನ್ನು ನೀಡುವುದರಿಂದ ಜೀರ್ಣಕ್ರಿಯೆಗೆ ಬಹಳ ಸಹಾಯಕ. ಇದು ಚಳಿಗಾಲದಲ್ಲಿ ಆವರಿಸುವ ಆಲಸ್ಯತನವನ್ನು ದೂರ ಮಾಡಿ ನಮ್ಮನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/11/Navasana.jpg)
4 ನವಾಸನ
ಇದೊಂದು ರೀತಿಯ ಹಡಗಿನ ರೀತಿಯಲ್ಲಿ ದೇಹವನ್ನು ಬಾಗಿಸುವ ಕಾರ್ಯ, ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನು ಮೇಲೆತ್ತಬೇಕು. ಇತ್ತ ದೇಹವನ್ನು ಎತ್ತಿದ ಕಾಲಿನತ್ತಲೇ ಮೇಲೆತ್ತಬೇಕು ಎರಡು ಕೈಗಳನ್ನು ಮೇಲೆತ್ತಿ ನಮ್ಮ ಮೊಣಕಾಲಿನವರೆಗೆ ಬರುವಂತೆ ಹಿಡಿಯಬೇಕು. ಈ ಆಸನ ನಮ್ಮ ಕೂರವಿಕೆಯ ಅಂಗದ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುವುದರಿಂದ ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಅತಿದೊಡ್ಡ ಪಾತ್ರ ನಿರ್ವಹಿಸುತ್ತದೆ.
/newsfirstlive-kannada/media/post_attachments/wp-content/uploads/2024/11/Parivrtta-Utkatasana.jpg)
5 ಪರಿವರ್ತ ಉತ್ಕಟಾಸನ
ಈ ಒಂದು ಯೋಗಾಸನ ಕುರ್ಚಿಯ ಭಂಗಿಯಲ್ಲಿ ಇರುತ್ತದೆ. ಈ ಯೋಗಾಸನವು ಡಿಟಾಕ್ಸಿಫಿಕೇಷನ್​ನನ್ನು ಉತ್ತೇನಗೊಳಿಸುತ್ತದೆ. ಕುರ್ಚಿಯ ಭಂಗಿಯಲ್ಲಿರುವ ಈ ಯೋಗಾಸನ ಜೀರ್ಣಕ್ರಿಯೆಗೆ ಸಹಾಯಕವಾಗುವುದಲ್ಲದೇ ಚಳಿಗಾಲದಲ್ಲಿ ಈ ಯೋಗಾಸನ ಮಾಡುವುದರಿಂದ ದೇಹಕ್ಕೆ ಹೆಚ್ಚು ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಆಲಸ್ಯವನ್ನು ದೂರ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/11/Adho-Mukha-Svanasana.jpg)
6 ಅಧೋ ಮುಖಸ್ವನಾಸನ
ಈ ಒಂದು ಯೋಗಾಸನ ಮಾಡಲು ಸಿಂಪಲ್ ಹಾಗೂ ಜೀರ್ಣಕ್ರಿಯೆಗೂ ಕೂಡ ತುಂಬಾ ಸಹಾಯಕಾರಿ. ನಮ್ಮ ಇಡೀ ದೇಹವು ಶ್ವಾನದ ರೀತಿಯಲ್ಲಿ ಮುಂದೆ ಭಾಗುವುದರಿಂದ ಇಡೀ ದೇಹಕ್ಕೆ ಸರಿಯಾಗಿ ರಕ್ತಪರಿಚಲನೆ ಆಗುತ್ತದೆ. ಮನಸ್ಸು ತಣಿದಷ್ಟು ದೇಹವು ತಣಿದು ಎರಡಕ್ಕೂ ಎನರ್ಜಿ ಬೂಸ್ಟರ್ ಸಿಕ್ಕ ರೀತಿ ಆಗುತ್ತದೆ. ಒತ್ತಡವನ್ನು ನಿವಾರಣೆ ಮಾಡುವಲ್ಲಿ ಇದು ತುಂಬಾ ಸಹಾಯಕಾರಿ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us