/newsfirstlive-kannada/media/post_attachments/wp-content/uploads/2024/12/MAHAKUMBHAMELA.jpg)
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಕೊನೆಯ ಘಟದತ್ತ ತಲುಪಿದೆ. ಫೆಬ್ರವರಿ 26ರಂದು ಈ ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 60 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.. ಈ ಮಧ್ಯೆ ಗಂಗಾ ಜಲ ಕಲುಷಿತಗೊಂಡಿದೆ ಅಂತ ಯುಪಿ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್ ಕೊಟ್ಟಿದೆ.
ಮಹಾಕುಂಭಮೇಳ, 144 ವರ್ಷಗಳ ಶತಮಾನದ ಸಂಭ್ರಮ. ಕೋಟ್ಯಂತರ ಭಕ್ತರಿಂದ ಪುಣ್ಯಸ್ನಾನ. ಗಂಗಾ-ಯುಮುನಾ-ಸರಸ್ವತಿ ನದಿಗಳ ಪುಣ್ಯ ಸಂಗಮದಲ್ಲಿ ಮಹಾ ಉತ್ಸವ. ಹೀಗೆ ಧಾರ್ಮಿಕ ಲೋಕವೇ ಅನಾವರಣಗೊಂಡಿರೋ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳಲು ಕೆಲ ದಿನಗಳಷ್ಟೇ ಬಾಕಿ ಇದೆ.
ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ 60 ಕೋಟಿಗೂ ಅಧಿಕ ಭಕ್ತರು
ಎಲೆಲ್ಲೂ ಜನ.. ಜನಸ್ತೋಮ.. ಕೇಸರಿ ಲೋಕದ ಮಧ್ಯೆ ಕೋಟಿ ಕೋಟಿ ಭಕ್ತ ಗಣ.. ಕಳೆದ ಜನವರಿ13ರಿಂದ ಆರಂಭವಾಗಿರೋ ಪ್ರಯಾಗ್‌ರಾಜ್ ಮಹಾಕುಂಭಮೇಳ ಕೊನೆ ಘಟ್ಟಕ್ಕೆ ಬಂದು ತಲುಪಿದೆ.. ಇವತ್ತು 42 ದಿನಕ್ಕೆ ಕಾಲಿಟ್ಟ ಮಹಾಜಾತ್ರೆ ಫೆಬ್ರವರಿ 26ರಂದು ಮುಕ್ತಾಯಗೊಳ್ಳಲಿದೆ.. ಈಗಾಗ್ಲೇ ತ್ರಿವೇಣಿ ಸಂಗಮದಲ್ಲಿ 60 ಕೋಟಿಗೂ ಅಧಿಕ ಭಕ್ತರು ಮಿಂದೇಳಿದ್ದಾರೆ.. ಪುಣ್ಯಸ್ನಾನದಿಂದ ಜನ್ಮಜನ್ಮಾಂತರಗಳ ಪಾಪ-ಕರ್ಮಗಳು ಕಳೆಯುತ್ತವೆ ಅನ್ನೋದು ಭಕ್ತರ ಅಚಲ ನಂಬಿಕೆಯಾಗಿದೆ.
ಇದನ್ನೂ ಓದಿ: 1,100 ರೂ. ಮಾತ್ರ.. ಮಹಾಕುಂಭಮೇಳದಲ್ಲಿ ‘ಡಿಜಿಟಲ್ ತೀರ್ಥ ಸ್ನಾನ’; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಮಹಾಶಿವರಾತ್ರಿಯಂದು 144 ವರ್ಷದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳುತ್ತಿದೆ.. ಶಾಹಿ ಸ್ನಾನ ಕುಂಭಮೇಳದ ಪ್ರಮುಖ ಆಕರ್ಷಣೆ.. ಮನುಷ್ಯ ತನ್ನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳಿಗೆ ಮುಕ್ತಿ ಪಡೆಯುವ ಒಂದು ಧಾರ್ಮಿಕ ವಿಧಾನ.. ಹೀಗಾಗಿ ಫೆಬ್ರವರಿ 26ಕ್ಕೆ ಶಿವರಾತ್ರಿಯ ಶಾಹಿಸ್ನಾನ ನೆರವೇರಲಿದ್ದು, ಆ ದಿನಗಳಲ್ಲಿ ಮತ್ತಷ್ಟು ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುವ ಸಾಧ್ಯತೆ ಇದೆ.. ಈಗಾಗಲೇ 60 ಕೋಟಿ ಭಕ್ತರಿಂದ ಪುಣ್ಯಸ್ನಾನ ನೆರವೇರಿದೆ.. ಇನ್ನೂ ನಾಲ್ಕು ದಿನಗಳಲ್ಲಿ ಮತ್ತಷ್ಟು ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡೋ ಸಾಧ್ಯತೆ ಇದ್ದು, ಯುಪಿ ಸರ್ಕಾರ ಯಾವುದೇ ಅವಘಡ ನಡೆಯದಂತೆ ಕಟ್ಟೆಚ್ಚರ ವಹಿಸಲಿದೆ.
ತಮನ್ನಾ ಜೊತೆ ಕಾಣಿಸಿಕೊಂಡ ವಸಿಷ್ಟ ಸಿಂಹ!
ಕೋಟಿ, ಕೋಟಿ ಭಕ್ತರನ್ನ ತನ್ನತ್ತ ಸೆಳೆಯುತ್ತಿರೋ ಪ್ರಯಾಗ್‌ರಾಜ್ ಮಹಾಕುಂಭಮೇಳಕ್ಕೆ ಈಗಾಗ್ಲೇ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಈಗ ಈ ಲಿಸ್ಟ್‌ಗೆ ಬಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ. ಮಹಾ ಕುಂಭಮೇಳಕ್ಕೆ ಆಗಮಿಸಿದ ತಮನ್ನಾ ಹಾಗೂ ಕನ್ನಡದ ನಟ ವಸಿಷ್ಟ ಸಿಂಹ ಒಟ್ಟಾಗಿ ಪುಣ್ಯ ಸ್ನಾನ ಮಾಡಿದ್ದಾರೆ.
ಯುಪಿ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್
ಮಹಾಕುಂಭಮೇಳ ಕೊನೆಯ ಘಟಕ್ಕೆ ತಲುಪುತ್ತಿದ್ದಂತೆ ಯುಪಿ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್ ಕೊಟ್ಟಿದೆ.. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಸೌಲಭ್ಯಗಳು ಅಸಮರ್ಪಕವಾಗಿದೆ. ಲಕ್ಷಾಂತರ ಜನ ಗಂಗಾ ನದಿಯ ದಡದಲ್ಲಿ ಬಯಲು ಮಲವಿಸರ್ಜನೆ ಮಾಡಲು ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.. ಈ ಹಿನ್ನೆಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎನ್‌ಜಿಟಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಿಶ್ವ ವಿಖ್ಯಾತ ಈ ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನೇನು ಕೇವಲ 4ನೇ ದಿನಗಳು ಬಾಕಿ ಇದೆ.. ಮಹಾಶಿವರಾತ್ರಿಯಂದು 144 ವರ್ಷದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ