ರಸ್ತೆ ರಿಪೇರಿ ಮಾಡ್ತಿದ್ದಾಗ ಸಿಕ್ಕಿತು ಪುರಾತನ ಕಾಲದ ಮಣ್ಣಿನ ಮಡಿಕೆ.. ಅದರಲ್ಲಿ ಏನೇನು ಇದ್ದವು ಗೊತ್ತಾ..?

author-image
Ganesh
Updated On
ರಸ್ತೆ ರಿಪೇರಿ ಮಾಡ್ತಿದ್ದಾಗ ಸಿಕ್ಕಿತು ಪುರಾತನ ಕಾಲದ ಮಣ್ಣಿನ ಮಡಿಕೆ.. ಅದರಲ್ಲಿ ಏನೇನು ಇದ್ದವು ಗೊತ್ತಾ..?
Advertisment
  • ಘೋರ್ ಪ್ರಾಂತ್ಯದಲ್ಲಿ ರಸ್ತೆ ಅಗೆಯುತ್ತಿದ್ದಾಗ ಪತ್ತೆ..!
  • ಘುರಿದ್ ಸಾಮ್ರಾಜ್ಯದ 60 ನಾಣ್ಯಗಳು ಪತ್ತೆ ಆಗಿವೆ
  • ನಾಣ್ಯಗಳ ನೋಡಿದ ಅಲ್ಲಿನ ಅಧಿಕಾರಿಗಳು ಏನಂದ್ರು..?

ಅಫ್ಘಾನಿಸ್ತಾನದಲ್ಲಿ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಘೋರ್ ಪ್ರಾಂತ್ಯದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಅಗೆಯುತ್ತಿದ್ದಾಗ ಪುರಾತನ ಕಾಲದ ಮಣ್ಣಿನ ಕಳಶವೊಂದು ಪತ್ತೆಯಾಗಿದೆ.

ಅದನ್ನು ತೆರೆದು ನೋಡಿದಾಗ ಘುರಿದ್ (Ghurid King) ರಾಜವಂಶದ 60 ಚಿನ್ನದ ನಾಣ್ಯಗಳು ಇದ್ದವು. ಈ ನಾಣ್ಯಗಳನ್ನ ಜೇಡಿಮಣ್ಣಿನಿಂದ ಮಾಡಿದ ಕಳಶದಲ್ಲಿ ಮುಚ್ಚಿಡಲಾಗಿತ್ತು. ನಾಣ್ಯಗಳಲ್ಲಿ ಕೆಲವು ಹಾನಿಯಾಗಿವೆ ಎಂದು ಘೋರ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ರಂಗಧಾಮ ಕೆರೆಯಲ್ಲಿ ದಾರುಣ ಘಟನೆ.. ಇಬ್ಬರು ಮುದ್ದಾದ ಮಕ್ಕಳನ್ನು ಕೆರೆಗೆ ತಳ್ಳಿ ತಾಯಿ ಆತ್ಮಹತ್ಯೆ

publive-image

ಈ ನಾಣ್ಯಗಳ ಐತಿಹಾಸಿಕ ಅಥವಾ ಆರ್ಥಿಕ ಮೌಲ್ಯವನ್ನು ಇನ್ನೂ ನಿರ್ಧಾರ ಮಾಡಿಲ್ಲ. ಘುರಿದ್ ಸಾಮ್ರಾಜ್ಯವು ಆಧುನಿಕ ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕ್ರಿ.ಶ. 786 ರಿಂದ 1215 ರವರೆಗೆ ಆಳಿತು. ಫಿರೋಜ್ಕೋಹ್ ಅವರ ರಾಜಧಾನಿ ಆಗಿತ್ತು.

ಈ ರಾಜವಂಶವು ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪ, ವ್ಯಾಪಾರ ಮತ್ತು ಪರ್ಷಿಯನ್ ಸಂಸ್ಕೃತಿಯನ್ನು ಹರಡಿತು. ಪತ್ತೆಯಾದ ಚಿನ್ನದ ನಾಣ್ಯಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ. ಆದರೆ ಅವುಗಳ ನಿಖರ ಮೌಲ್ಯ ನಿರ್ಧರಿಸಬೇಕಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕಾಲ್ತುಳಿತ ಕೇಸ್​​ನಲ್ಲಿ ಮತ್ತೊಂದು ತಲೆದಂಡ.. CM ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್​ಗೆ ಗೇಟ್​ಪಾಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment