/newsfirstlive-kannada/media/post_attachments/wp-content/uploads/2025/03/TRAIN-PLOTFORM.jpg)
ರೈಲು ನಿಲ್ದಾಣದ ಪ್ಲಾಟ್​ ಫಾರ್ಮ್​ ವಿಚಾರಕ್ಕೆ ಸಂಬಂಧಿಸಿದ ರೈಲ್ವೇ ಇಲಾಖೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಟಿಕೆಟ್ ಕನ್ಫರ್ಮ್ ಆದವರಿಗೆ ಮಾತ್ರ ಪ್ಲಾಟ್​ಫಾರ್ಮ್​ ಪ್ರವೇಶಕ್ಕೆ ಅವಕಾಶ ಇದೆ. ಬೆಂಗಳೂರು ರೈಲ್ವೆ ನಿಲ್ದಾಣಕ್ಕೂ ನಿಯಮ ಜಾರಿ ಆಗಲಿದೆ.
ಹೊಸ ನಿಯಮ ಜಾರಿ ಬಗ್ಗೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದಾರೆ. ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಜನದಟ್ಟಣೆ ನಿಯಂತ್ರಣ, ನೂಕುನುಗ್ಗಲು ನಿಯಂತ್ರಣಕ್ಕೆ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ 60 ರೈಲ್ವೆ ನಿಲ್ದಾಣದಲ್ಲಿ ಈ ನಿಯಮ ಜಾರಿಗೆ ಬರಲಿದೆ. ಯಾರಿಗೆ ಟಿಕೆಟ್ ಕನ್ಫರ್ಮ್ ಆಗಿದೆಯೋ ಅವರಿಗೆ ಮಾತ್ರ ಫ್ಲಾಟ್​ಫಾರ್ಮ್​ ಪ್ರವೇಶಕ್ಕೆ ಅವಕಾಶ ಇರುತ್ತದೆ. ಯಾರೆಲ್ಲ ವೇಟಿಂಗ್ ಲಿಸ್ಟ್​ನಲ್ಲಿ ಇರುತ್ತಾರೋ ಅವರಿಗೆ ಫ್ಲಾಟ್​ಫಾರ್ಮ್ ಪ್ರವೇಶ ಇರಲ್ಲ. ಜೊತೆಗೆ ಫ್ಲಾಟ್​ಫಾರ್ಮ್​ ಟಿಕೆಟ್ ಪಡೆದು, ಎಂಟ್ರಿ ನೀಡುತ್ತಿದ್ದವರಿಗೂ ಅವಕಾಶ ಇರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ದಯವಿಟ್ಟು ಗಮನಿಸಿ..’ ನಮ್ಮ ಮೆಟ್ರೋ ಸೇವೆಯಲ್ಲಿ ಅಡಚಣೆ.. BMRCL ಮಹತ್ವದ ಪ್ರಕಟಣೆ..!
/newsfirstlive-kannada/media/post_attachments/wp-content/uploads/2025/03/TRAIN-PLOTFORM-1.jpg)
ವೇಟಿಂಗ್ ಲಿಸ್ಟ್​ ಕತೆ..?
ವೇಟಿಂಗ್​ ಲಿಸ್ಟ್​ನಲ್ಲಿರೋರು ಹಾಗೂ ಪ್ರಯಾಣಿಕರ ಸಹಾಯಕ್ಕೆ ಬರೋರು ಕೂಡ ವೇಟಿಂಗ್ ಏರಿಯಾದಲ್ಲಿ ಇರಬೇಕು. ಪ್ರಮುಖ 60 ನಿಲ್ದಾಣಗಳಲ್ಲೂ ವೇಟಿಂಗ್ ಏರಿಯಾ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇತ್ತೀಚೆಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿತ್ತು. ಅಂತ ಕಹಿ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಪ್ರಯಾಗರಾಜ್ ಸೇರಿದಂತೆ ಕೆಲವೆಡೆ ಈ ನಿಯಮ ಜಾರಿಗೆ ಬಂದಿದೆ. ಪ್ರಾಯೋಗಿಕ ಯಶಸ್ಸು ಕಂಡ ಬಳಿಕ ದೇಶದ ಜನದಟ್ಟಣೆಯ 60 ರೈಲು ನಿಲ್ದಾಣದಲ್ಲಿ ಈ ನಿಯಮ ಜಾರಿಗೆ ಬರಲಿದೆ.
ಇದನ್ನೂ ಓದಿ: ಈ ರೈಲು ನಿಲ್ದಾಣವನ್ನು ವರ್ಷವಿಡೀ ಆಪರೇಟ್ ಮಾಡೋದು ಬರೀ ಮಹಿಳೆಯರು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us