/newsfirstlive-kannada/media/post_attachments/wp-content/uploads/2025/01/Yashodhamma.jpg)
ರಾಮನಗರ: ವಿಪರೀತ ಬಡ್ಡಿ, ಸಾಲ ಮರುಪಾವತಿಯ ಕಂತು ಹೆಚ್ಚಳ, ಕಟ್ಟದಿದ್ದರೆ ನಾನಾ ಕಿರುಕುಳ. ಮೈಕ್ರೋ ಫೈನಾನ್ಸ್ ಹಾವಳಿಗೆ ಊರು ಬಿಟ್ಟ ಜನ. ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರ ಆಗ್ತಿರೋ ಸುದ್ದಿ ಇದು. ಈ ನಡುವೆ ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೋ ಫೈನಾನ್ಸ್ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದಿದೆ.
ಊರಿನ ಬಹುತೇಕ ಮನೆಗಳಿಗೆ ಬೀಗ. ಬೀಗ ಹಾಕಿ ಮನೆ ಖಾಲಿ ಮಾಡಿರುವ ನಿವಾಸಿಗಳು. ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿರುವ ಫೈನಾನ್ಸ್ ಕಂಪನಿಗಳು. ಮೈಕ್ರೋ ಫೈನಾನ್ಸ್ನಿಂದ ಸಾಲ ಪಡೆದು ಬೀದಿಗೆ ಬಂದಿರುವ ಬದುಕು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಎಂಬ ಬಕಾಸುರನ ಆಟಾಟೋಪ ಇದು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಮತ್ತೊಂದು ಬಲಿ
ಮೈಸೂರು, ಚಾಮರಾಜನಗರ, ರಾಮನಗರ, ಹಾವೇರಿ, ತುಮಕೂರು ಹೀಗೆ ಹಲವೆಡೆ ಮೈಕ್ರೋ ಫೈನಾನ್ಸ್ಗಳ ಅಬ್ಬರ ಜೋರಾಗಿದೆ. ಹಣ ಇಲ್ದೇ ಇರೋ ಸಣ್ಣ, ಅತಿ ಸಣ್ಣ ರೈತರು, ಕೂಲಿ ಕಾರ್ಮಿಕರೇ ಇವರ ಟಾರ್ಗೆಟ್. ತೆರೆದಿದೆ ಬಾ ಅತಿಥಿ ಅಂತ ಸಾಲ ಕೊಡುವ ಖಾಸಗಿ ಫೈನಾನ್ಸ್ಗಳು ಸಾಲ ಕೊಟ್ಟ ಬಳಿಕ ಜೀವ ಹಿಂಡುವ ಕೆಲಸ ಮಾಡ್ತಿವೆ. ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಉಪದ್ರವಕ್ಕೆ ಮನೆ-ಮಠ ಖಾಲಿ ಮಾಡಿದ್ದನ್ನು ನೋಡಿದ್ರಿ. ಇದೀಗ ಅದೇ ರಾಮನಗರದ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ 60 ವರ್ಷದ ಯಶೋಧಮ್ಮನನ್ನು ಮೈಕ್ರೋ ಸಾಲದ ಸುಳಿ ಜೀವ ತೆಗೆದಿದೆ. 8ಕ್ಕೂ ಹೆಚ್ಚು ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ 5 ಲಕ್ಷದವರೆಗೆ ಸಾಲ ಪಡೆದಿದ್ದ ಯಶೋಧಮ್ಮ ಸಾಲದ ಉಪಟಳ ತಾಳಲಾರದೇ ಶೂಲ ಏರಿದ್ದಾರೆ.
ಇತ್ತೀಚೆಗೆ ಫೈನಾನ್ಸ್ನವರು ಮನೆ ಬಳಿ ಬಂದು ಗಲಾಟೆ ಮಾಡಿದ್ರಂತೆ. ಇದ್ರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆಲ್ಲಾ ಕಡಿವಾಣ ಹಾಕಬೇಕು ಅನ್ನೋದು ಕುಟುಂಬಸ್ಥರು, ಗ್ರಾಮಸ್ಥರ ಅಳಲಾಗಿದೆ.
ಇನ್ನು ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ ಸಾಲ ಕೊಟ್ಟು ಪೀಡಿಸುತ್ತಿದ್ದ ಬಿಡದಿಯ ಫೈನಾನ್ಸ್ ಕಂಪನಿ ಮ್ಯಾನೇಜರ್ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಸಭೆ ನಡೆಸಿ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಕೊಟ್ಟ ಗೃಹ ಸಚಿವ ಪರಮೇಶ್ವರ್
ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಪ್ರತಿಕ್ರಿಯಿಸಿರೋ ಗೃಹಸಚಿವ ಡಾ.ಜಿ ಪರಮೇಶ್ವರ್ ಮೈಕ್ರೋ ಫೈಫಾನ್ಸ್ಗೆ ಕಡಿವಾಣ ಹಾಕಲು ಬಿಲ್ ತರುವ ವಿಚಾರ ಪ್ರಗತಿಯಲ್ಲಿದ್ದು ಮೋಸ ಹೋದವರು ದೂರು ಕೊಟ್ರೆ ತನಿಖೆ ಮಾಡ್ತೀವಿ ಎಂದಿದ್ದಾರೆ.
ಒಟ್ಟಾರೆ, ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ಸಾಲ ಕೊಟ್ಟು ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ಗೆ ಮೂಗುದಾರ ಹಾಕಬೇಕಿದೆ. ಮತ್ತಷ್ಟು ಸಾವು-ನೋವು ತಪ್ಪಿಸಬೇಕಿದೆ.
ಇದನ್ನೂ ಓದಿ:ಭಾರತ, ಇಂಗ್ಲೆಂಡ್ ಮಧ್ಯೆ ಟಿ20 ಪಂದ್ಯ; ಆರ್ಸಿಬಿಯ ಮೂವರು ಸ್ಟಾರ್ ಆಟಗಾರರಿಗೆ ಜಾಕ್ಪಾಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ