/newsfirstlive-kannada/media/post_attachments/wp-content/uploads/2024/10/Burkina-Faso-Massacred-1.jpg)
ಅಲ್ಖೈದಾ ಉಗ್ರಸಂಘಟನೆಯಿಂದಿಗೆ ಸಹಯೋಗಗೊಂಡಿದ್ದ ಗುಂಪೊಂದು ಪಶ್ಚಿಮ ಆಫ್ರಿಕಾ ದೇಶವಾದ ಬರ್ಕಿನ್ ಫಾಸೋದ ಬರ್ಸಾಲೋಘೊನಲ್ಲಿ ಭೀಕರ ಹತ್ಯಾಕಾಂಡ ನಡೆಸಿದೆ. ಈ ಘಟನೆ ಆಗಸ್ಟ್ 24 ರಂದೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ಕೆಲವೇ ಗಂಟೆಗಳಲ್ಲಿ ಸುಮಾರು 600 ಜನರನ್ನು ಅಲ್ಖೈದಾ ಸಂಯೋಜಿತ ಗುಂಪೊಂದು ಹ*ತ್ಯೆ ಮಾಡಿದ ಬಗ್ಗೆ ವರದಿಗಳಾಗಿವೆ. ಆಗಸ್ಟ್ 24 ರಂದು ಕಂದಕಗಳಲ್ಲಿ ಅಡಗಿಕೊಂಡ ಗುಂಪೊಂದು ಭೀಕರವಾಗಿ ಗುಂಡಿನ ದಾಳಿ ನಡೆಸಿ ಸುಮಾರು 600 ಜನರ ಜೀವ ತೆಗೆದ ಬಗ್ಗೆ ವರದಿಯಾಗಿದೆ.
ಮೃತಪಟ್ಟವರಲ್ಲಿ ಹೆಚ್ಚು ಮಕ್ಕಳು ಹಾಗೂ ಮಹಿಳೆಯರೇ ಎಂದು ತಿಳಿದು ಬಂದಿದೆ. ಇದು ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಇತಿಹಾಸದಲ್ಲಿ ಎಂದೂ ಕಾಣದ ಭೀಕರ ಹತ್ಯಾಕಾಂಡವೆಂದೇ ಹೇಳಲಾಗುತ್ತಿದೆ. ಬರ್ಕಿನಾ ಫಾಸೋದಲ್ಲಿ ಬಂಡಾಯವೆದ್ದಿರುವ ಜಿಹಾದಿ ಮನಸ್ಥಿತಿಯ ಗುಂಪು ಅಲ್ಖೈದಾ ಉಗ್ರ ಸಂಘಟನೆಯ ಜೊತೆ ಸೇರಿ ಈ ಕೃತ್ಯ ನಡೆಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ನಾನು ಯಾಕೆ ಪಾಕಿಸ್ತಾನಕ್ಕೆ ಹೋಗ್ತಿದ್ದೀನಿ ಎಂದರೆ..’ ಸಚಿವ ಜೈಶಂಕರ್ ಹೇಳಿದ್ದೇನು..?
ಜಮಾತ್ ನುಸ್ರತ್ ಅಲ್ ಇಸ್ಲಾವಾಲಾ ಮುಸ್ಲಿಮಿನ್ (JNMI) ಎಂಬ ಗುಂಪು ಅಲಖೈದಾ ಜೊತೆ ಸೇರಿಕೊಂಡು ಬರ್ಕಿನಾ ಫಾಸೋದಲ್ಲಿ ಆ್ಯಕ್ಟಿವ್ ಆಗಿದೆ. ಇದೇ ಗುಂಪು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿ ಬರ್ಸಾಲೋಘ್ನ ಆಚೆ ಬೈಕ್ನಲ್ಲಿ ಪರಾರಿಯಾದರು ಎಂದು ವರದಿಗಳಾಗಿವೆ.
ಇದನ್ನೂ ಓದಿ: 9 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹೊರಟ ಭಾರತದ ಸಚಿವರು; ಎಸ್ ಜೈ ಶಂಕರ್ ಪಾಕ್ ಭೇಟಿಯ ಹಿಂದಿನ ರಹಸ್ಯವೇನು?
ಯುಎಸ್ನ ಹೇಳುವ ಅಂಕಿ ಅಂಶಗಳ ಪ್ರಕಾರ ಈ ಭೀಕರ ಹತ್ಯಾಕಾಂಡದಲ್ಲಿ ಬಲಿಯಾದವರ ಸಂಖ್ಯೆ 200, ಜೆಎನ್ಎಂಐ ಹೇಳಿಕೊಂಡಿದ್ದು ನಾವು 300 ಜನರನ್ನು ಬಲಿ ಪಡೆದಿದ್ದೇವೆ ಎಂದು ಆದ್ರೆ ಸಿಎನ್ಎನ್ ರಿಪೋರ್ಟ್ ಮಾಡಿದ ಪ್ರಕಾರ ಒಟ್ಟು 600 ಜನರಲ್ಲಿ ಈ ಬಂಡಾಯದ ಗುಂಪು ಬಲಿ ಪಡೆದಿದೆಯಂತೆ.
ಗುಂಡಿನ ದಾಳಿಯಿಂದ ಬಚಾವಾದ ಯುವಕನೊಬ್ಬ ಯಾವಾಗ ಪಟ್ಟಣದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಬೆಳಗ್ಗೆ 11 ಗಂಟೆಗೆ ಮೊದಲ ಗುಂಡಿನ ಶಬ್ದ ಕೇಳಿ ಬಂತೋ, ಗುಂಡಿನ ದಾಳಿಯಲ್ಲಿ ಬದುಕುಳಿದ ಒಬ್ಬ ವ್ಯಕ್ತಿ ಹೇಳಿರುವ ಪ್ರಕಾರ ಅನೇಕ ಜನರು ದಾಳಿಯಿಂದ ತಪ್ಪಿಸಿಕೊಳ್ಳಲು ಕಂದಕಗಳಲ್ಲಿ ಅಡಗಿಕೊಂಡಿದ್ದರು. ನಾನು ಕೂಡ ಅಲ್ಲಿ ಅಡಗಿಕೊಳ್ಳಲು ಓಡಿ ಹೋದೆ. ಆದ್ರೆ ದಾಳಿಕೋರರು ಪ್ರತಿಯೊಂದು ಕಂದಕಗಳನ್ನು ಹುಡುಕುತ್ತಿದ್ದರು, ನಾನು ಆಚೆ ಬಂದು ನೋಡಿದಾಗ ಎಲ್ಲೆಲ್ಲಿಯೂ ಶವಗಳು ಬಿದ್ದಿದ್ದವು. ಕಣ್ಣು ಹಾಯಿಸಿದಲ್ಲೆಲ್ಲಾ ರಕ್ತ ಹರಿದಾಡುತ್ತಿತ್ತು. ಕೊನೆಗೆ ನಾನು ಒಂದು ಪೊದೆಯಲ್ಲಿ ಹೋಗಿ ಸೇರಿಕೊಂಡೆ ಸಾಯಂಕಾಲದವರೆಗೂ ನಾನು ಆಚೆ ಬರಲಿಲ್ಲ ಎಂದು ಹೇಳಿದ್ದಾನೆ .
ಈ ಒಂದು ಸರ್ಕಾರ ಮತ್ತು ಜೆಎನ್ಎಂಐ ಬಂಡಾಯಗಾರರ ನಡುವಿನ ಸಂಘರ್ಷ 2015ರಿಂದಲೂ ಜಾರಿಯಲ್ಲಿದೆ. ಇದರಿಂದಾಗಿ ಇಲ್ಲಿಯವರೆಗೂ 20 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇಷ್ಟು ವರ್ಷಗಳಲ್ಲಿ ಇಂತಹ ಭೀಕರ ಹತ್ಯಾಕಾಂಡವನ್ನು ಈ ನೆಲ ಕಂಡಿರಲಿಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ