ಕ್ಯಾಂಪಸ್

ಕೊಟ್ಟಿರೋ ಟಾರ್ಗೆಟ್​​ ಕೇವಲ 200 ಆದ್ರೂ ಆಸಿಸ್​ ಪಡೆಯಲ್ಲಿ ನಿನ್ನೆ ಗೆಲ್ಲೋ ಕನಸು ಚಿಗುರೊಡೆದಿತ್ತು. ಟೀಮ್​ ಇಂಡಿಯಾ ಟಾಪ್​ ಆರ್ಡರ್​ ಆಟ ನೋಡಿದ ಫ್ಯಾನ್ಸ್​ ಕೂಡ ಆಸ್ಟ್ರೇಲಿಯಾನೇ ಗೆಲ್ಲುತ್ತೆ ಅಂದುಕೊಂಡು ಬಿಟ್ಟಿದ್ರು. ಆದ್ರೆ, ಆ ತಪ್ಪು. ಆ ಒಂದೇ ಒಂದು ತಪ್ಪು ಕಾಂಗರೂಗಳನ್ನ ಸೋಲಿನ ಸುಳಿಗೆ ಸಿಲುಕಿಸಿತು. 12 ವರ್ಷಗಳ ಬಳಿಕ ಟೀಮ್​ ಇಂಡಿಯಾದಲ್ಲಿ ಏಕದಿನ ವಿಶ್ವಕಪ್​ ಗೆಲ್ಲೋ ಕನಸು ಬಲವಾಗಿ ಚಿಗುರೊಡೆದಿದೆ. ಇಷ್ಟು ದಿನ ಆರಂಭದಲ್ಲಿ ಎಡವಿದ್ರು ಮುಗಿಯಿತು. ಟೀಮ್​ ಇಂಡಿಯಾ ಕಥೆ ಅಷ್ಟೇ ಅನ್ನೋ ಮಾತಿತ್ತು. ನಿನ್ನೆ ಆ ಮಾತು ಸುಳ್ಳಾಗಿದೆ.

ವಿರಾಟ್ ಕೊಹ್ಲಿಯ ಕ್ಯಾಚ್ ಮಿಸ್ ಮಾಡಿದ ಮಿಚೆಲ್ ಮಾರ್ಷ್ ಚೆಪಾಕ್​ ಮೈದಾನದಲ್ಲಿ ಟೀಮ್​ ಇಂಡಿಯಾ ಕೊಟ್ಟ ಶಾಕ್​ಗೆ ತತ್ತರಿಸಿದ ಆಸ್ಟ್ರೇಲಿಯಾ, ನೆಲ ಕಚ್ಚಿತು. ಬಿಗ್​ ಸ್ಕೋರ್​​ ಕಲೆ ಹಾಕೋ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಆಸಿಸ್​ ಪಡೆ ಕೇವಲ 199 ರನ್​ಗಳಿಗೆ ಆಲೌಟ್​​ ಆಯ್ತು. ರೋಹಿತ್​ ಶರ್ಮಾ, ಇಶಾನ್​ ಕಿಶನ್, ಶ್ರೇಯಸ್​​ ಅಯ್ಯರ್​​ ಡಕೌಟ್​ನಿಂದ ಆಸಿಸ್ ಗೆಲುವಿನ ಆಸೆ ಕಾಣುತ್ತಿತ್ತು. ಇಷ್ಟು ಕಡಿಮೆ ಸ್ಕೋರ್​​ಗಳಿಸಿದ್ರೂ.. ಸ್ವರ್ಗ ರಪ್​ ಅಂತ ಪಾಸ್​ ಆಯ್ತು ಅನ್ನೋ ಮಾತಿನಂತೆ, ಒಂದು ಸಮಯದಲ್ಲಿ ಕಾಂಗರೂಗಳಲ್ಲೂ ಗೆಲುವಿನ ಆಸೆ ಚಿಗುರೊಡೆದಿತ್ತು.

ಕೇವಲ 200 ರನ್​ಗಳ ಸಾಧಾರಣ ಟಾರ್ಗೆಟ್​ ಬೆನ್ನತ್ತಿದ್ದ ಟೀಮ್​ ಇಂಡಿಯಾದ ಅತಿರಥ ಮಹಾರಥರ ಪರ್ಫಾಮೆನ್ಸ್​ ಇದು. ಇಶಾನ್​ ಕಿಶನ್​, ರೋಹಿತ್​ ಶರ್ಮಾ, ಶ್ರೇಯಸ್​​ ಅಯ್ಯರ್​ ಕಣಕ್ಕಿಳಿದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. 2 ರನ್​ಗಳಿಸುವಷ್ಟರಲ್ಲಿ 3 ವಿಕೆಟ್​ ಕಳೆದುಕೊಂಡು ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಒಂದೇ ಒಂದು ತಪ್ಪು, ಸೋಲಿನ ಸುಳಿಗೆ ಸಿಲುಕಿದ ಆಸಿಸ್​.!

ಆರಂಭದಲ್ಲೇ 3 ವಿಕೆಟ್​ ಕಬಳಿಸಿದ ಆಸಿಸ್​ ಪಡೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡಲು ಆರಂಭಿಸ್ತು. ಇದೇ ಆತ್ಮ ವಿಶ್ವಾಸದಲ್ಲಿ ಕೊಹ್ಲಿಯ ಒಂದು ಕ್ಯಾಚ್​ ಅನ್ನು ಮಿಚೆಲ್ ಮಾರ್ಷ್ ಡ್ರಾಪ್​ ಮಾಡಿದನು. ಇದರಿಂದ ತಂಡ ಸೋಲಿನ ಸುಳಿಗೆ ಸಿಲುಕಿತು.

ಆಹಾ ಎಂತಾ ಆಟ.. ಕಿಂಗ್​ ಕೊಹ್ಲಿಗೆ ಸಲಾಂ.! ಕೆಲ ದಿನದ ಹಿಂದೆ ಪಾಕಿಸ್ತಾನದ ಮೊಹಮ್ಮದ್​ ಅಮೀರ್​​ ಒಂದು ಮಾತು ಹೇಳಿದ್ರು. ಪ್ರೆಶರ್​ ಅನ್ನೋ ಪದ ಕೊಹ್ಲಿ ಡಿಕ್ಷನರಿಯಲ್ಲೇ ಇಲ್ಲ ಅಂತಾ. ನಿನ್ನೆಯ ಇನ್ನಿಂಗ್ಸ್​ ಆ ಮಾತು 100% ಸತ್ಯ ಅನ್ನೋದನ್ನ ನಿರೂಪಿಸ್ತು. 200 ರನ್​​ಗಳ ಬಿಗ್​​ ಟಾರ್ಗೆಟ್​ ಮುಂದಿದೆ. 3 ಪ್ರಮುಖ ವಿಕೆಟ್​ಗಳನ್ನ ಕಳೆದುಕೊಂಡಿದ್ದಾಗಿದೆ. ಆದ್ರೂ, ಕೊಹ್ಲಿ ಕಿಂಚಿತ್ತೂ ವಿಚಲಿತರಾಗಲಿಲ್ಲ. ಕಿಂಗ್​ ಕೊಹ್ಲಿ ಅನ್ನೋದು ಸುಮ್ನೆನಾ?.

ತಾಳ್ಮೆಯ ಆಟದ ಮೊರೆ ಹೋದ ಕೊಹ್ಲಿ, ಸಾಲಿಡ್​ ಆಗಿ ಇನ್ನಿಂಗ್ಸ್​ ಕಟ್ಟಿದ್ರು. ಒಳ್ಳೆ ಎಸೆತಗಳನ್ನ ರೆಸ್ಪೆಕ್ಟ್​ ಮಾಡಿದ ಕೊಹ್ಲಿ, ಕೆಟ್ಟ ಎಸೆತಗಳನ್ನ ಬೌಂಡರಿ ಗೆರೆ ದಾಟಿಸಿದ್ರು. ಕಿಂಗ್​ ಕೊಹ್ಲಿಯ ಕ್ಯಾಲ್ಕ್ಯುಲೇಟೆಡ್​ ಆಟಕ್ಕೆ ಕಾಂಗರೂಸ್​​ ಸುಸ್ತು ಹೊಡೆದ್ರು. ಒತ್ತಡದ ನಡುವೆ ಕೊಹ್ಲಿ 85 ರನ್​ ಸಿಡಿಸಿ ಮಿಂಚಿದ್ರು.

ಕ್ಲಾಸಿಕ್​ ಇನ್ನಿಂಗ್ಸ್​​ ಕಟ್ಟಿದ ಕನ್ನಡಿಗ ರಾಹುಲ್​.!

ಒಂದೆಡೆ ಕಿಂಗ್​ ಕೊಹ್ಲಿ ಆಟವಾದ್ರೆ, ಇನ್ನೊಂದು ತುದಿಯಲ್ಲಿ ಕನ್ನಡಿಗ ರಾಹುಲ್​ ಕ್ಲಾಸಿಕ್​ ಇನ್ನಿಂಗ್ಸ್​ ಕಟ್ಟಿದ್ರು. ಆಸಿಸ್​​ ಗೇಮ್ ​ಪ್ಲಾನ್​ಗಳನ್ನ ತಲೆ ಕೆಳಗಾಗಿಸಿ ರನ್​ ಕೊಳ್ಳೆ ಹೊಡೆದ್ರು. ಕನ್ನಡಿಗ ಕ್ಲಾಸಿಕ್​ ಆಟದ ಮುಂದೆ ಆಸಿಸ್​ ಪಡೆಯ ಆತ್ಮವಿಶ್ವಾಸ ಅಡಗಿ ಹೋಯ್ತು. ಅಜೇಯ 97 ರನ್​ ಸಿಡಿಸಿದ ರಾಹುಲ್​ ಗೆಲುವಿನ ರೂವಾರಿಯಾದರು.