/newsfirstlive-kannada/media/post_attachments/wp-content/uploads/2025/01/Prayagraj-Anushree-Raj-B-Shetty-1.jpg)
ಶತ ಶತಮಾನದ ಅದ್ಭುತ.. ಜಗತ್ತಿನ ಅತ್ಯದ್ಭುತ.. ಹತ್ತಲ್ಲ ಇಪ್ಪತ್ತಲ್ಲ.. 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 50 ಕೋಟಿಗೂ ಹೆಚ್ಚು ಭಕ್ತರು ಜಗತ್ತಿನ ಮೂಲೆ ಮೂಲೆಯಿಂದ ಬಂದು ಗಂಗೆಯಲ್ಲಿ ಮಿಂದೆದಿದ್ದಾರೆ. ಈ ಹೊತ್ತಲ್ಲೇ ಮಹಾಕುಂಭದ ಬಗ್ಗೆ ನಾಲಿಗೆ ಹರಿ ಬಿಟ್ಟಿದ್ದವರ ವಿರುದ್ಧ ಮೋದಿ ಗುಡುಗಿದ್ದಾರೆ.
ಮಹಾಕುಂಭಮೇಳ ಮುಗಿಯಲು ಇನ್ನು ‘3’ ದಿನವಷ್ಟೇ ಬಾಕಿ!
ಮಹಾಕುಂಭಮೇಳ ಸಂಪನ್ನಗೊಳ್ಳೋಕೆ ಉಳಿದಿರೋದು ಇನ್ನು ಕೇವಲ ಮೂರು ದಿನವಷ್ಟೇ. ಆದ್ರೆ, ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಳೆದ 41 ದಿನಗಳಿಂದ ನಡೆಯುತ್ತಿರುವ ಈ ಪುಣ್ಯಸ್ನಾನದಲ್ಲಿ ದಾಖಲೆ ಪ್ರಮಾಣದಲ್ಲಿ ಭಕ್ತರು ಸೇರಿದ್ದಾರೆ. ಅಂದ್ರೆ ಬರೋಬ್ಬರಿ 61 ಕೋಟಿಗೂ ಹೆಚ್ಚು ಮಂದಿ ಈ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾರೆ ಅನ್ನೋ ಮಾಹಿತಿ ಇದೆ. ಇದೇ ಹೊತ್ತಲ್ಲಿ ಈ ವರ್ಷದ ಮಹಾಕುಂಭಮೇಳ ಹಲವು ದಾಖಲೆಗಳಿಗೂ ಕಾರಣವಾಗಿದೆ.
ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಅಬ್ಬರ; ಪಾಕ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಕೊಹ್ಲಿ
‘ಮಹಾ’ಕುಂಭಮೇಳದ ‘ದಾಖಲೆ’!
- 41 ದಿನಗಳ ಪುಣ್ಯಸ್ನಾದಲ್ಲಿ ಕೋಟಿ ಕೋಟಿ ಜನರು ಭಾಗಿ
- 23 ದಿನಗಳು, ಒಂದು ಕೋಟಿಗೂ ಹೆಚ್ಚು ಭಕ್ತಾದಿಗಳು ಭಾಗಿ
- 7 ದಿನಗಳು, ಎರಡು ಕೋಟಿಗೂ ಹೆಚ್ಚು ಭಕ್ತರ ಪುಣ್ಯಸ್ನಾನ
- 110 ಕೋಟಿ ಸನಾತನಿಗಳ ಪೈಕಿ ಶೇ.50ರಷ್ಟು ಪವಿತ್ರಸ್ನಾನ
- ನೇಪಾಳದಿಂದ 50 ಲಕ್ಷ, 73 ವಿದೇಶಿ ರಾಷ್ಟ್ರಗಳಿಂದ ಜನ್ರ ಭೇಟಿ
ಪ್ರಪಂಚದಲ್ಲೇ ಇದೇ ಮೊದಲು ಬಾರಿಗೆ ಇಷ್ಟು ಜನ ಸೇರಿ ಹೊಸ ದಾಖಲೆ ನಿರ್ಮಾಣವಾಗಿದೆ.. ಜತೆಗೆ ಶತಮಾನದಲ್ಲೇ ಅತ್ಯಂತ ಅಪರೂಪದ ಘಟನೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ತಿಳಿಸಿದ್ರೆ, ಅತ್ತ, ಪ್ರಧಾನಿ ನರೇಂದ್ರ ಮೋದಿ, ಮಹಾಕುಂಭ ಮೇಳ ಬಗ್ಗೆ ಅವಹೇಳನ ಮಾಡಿದವ್ರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಧರ್ಮವನ್ನು ಅಪಹಾಸ್ಯ ಮಾಡುವ, ಅದನ್ನು ಅಪಹಾಸ್ಯ ಮಾಡುವ ಮತ್ತು ಜನರನ್ನು ವಿಭಜಿಸಲು ಕೆಲಸ ಮಾಡುವವರನ್ನು ಹೆಚ್ಚಾಗಿ ವಿದೇಶಿ ಶಕ್ತಿಗಳು ನಮ್ಮ ರಾಷ್ಟ್ರ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಶತಮಾನಗಳಿಂದ, ಹಿಂದೂ ನಂಬಿಕೆಗಳ ಬಗ್ಗೆ ದ್ವೇಷ ಹೊಂದಿರುವವರು ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗುಲಾಮಿ ಮನಸ್ಥಿತಿಯಲ್ಲಿ ಸಿಲುಕಿರುವ ಈ ಜನರು ನಮ್ಮ ನಂಬಿಕೆಗಳು, ದೇವಾಲಯಗಳು, ಸಂತರು, ಸಂಸ್ಕೃತಿ ಮತ್ತು ತತ್ವಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾರೆ-ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಮುಂದಿನ ಮಹಾಕುಂಭಮೇಳ ಬರೋ ಅಷ್ಟ್ರಲ್ಲೀ ನಮ್ಮ ಪೀಳಿಗೆ ಇರೋದಿಲ್ಲ ಅನ್ನೋದು ಒಂದ್ಕಡೆಯಾದ್ರೆ, ಈ ಬಾರಿಯ ಮಹಾಕುಂಭಮೇಳವನ್ನ ಕಣ್ತುಂಬಿಕೊಂಡ ಕೋಟಿ ಕೋಟಿ ಭಕ್ತರು ಪಾವನರಾಗಿದ್ದಾರೆ.
ಇದನ್ನೂ ಓದಿ: ಕನ್ನಡ ನಟಿಗೆ ಟಾಲಿವುಡ್ನಲ್ಲಿ ಭಾರೀ ಡಿಮ್ಯಾಂಡ್; ಕ್ಯೂಟ್ ಪೋರಿ ಈಗ ಸ್ಟಾರ್ ಹೀರೋಯಿನ್; ಯಾರು ಈಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ