newsfirstkannada.com

62 ಜನರ ಬಲಿ ಪಡೆದ ವಿಮಾನ.. ನೋಡ ನೋಡ್ತಿದ್ದಂತೆ ಜಸ್ಟ್ 5 ಸೆಕೆಂಡ್​ನಲ್ಲಿ ನೆಲಕ್ಕೆ ಬಿದ್ದ ಫ್ಲೈಟ್- ವಿಡಿಯೋ

Share :

Published August 10, 2024 at 10:25am

    62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ

    ಸಾಮಾಜಿಕ ಜಾಲತಾಣದಲ್ಲಿ ​ವೈರಲ್ ಆಗ್ತಿದೆ ವಿಡಿಯೋ

    ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ನಡೆದ ಭೀಕರ ದುರಂತ

62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಾದೇಶಿಕ ಟರ್ಬೊಪ್ರೊಪ್ ವಿಮಾನ ಏಕಾಏಕಿ ಪತನಗೊಂಡಿರೋ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ. ಪರಿಣಾಮ 62 ಮಂದಿ ಸ್ಥಳದಲ್ಲಿ ಸಜೀವ ದಹನ ಆಗಿದ್ದಾರೆ. ಜನವಸತಿ ಪ್ರದೇಶದ ಪಕ್ಕವೇ ವಿಮಾನ ಪತನಗೊಂಡಿದೆ.

ಇದನ್ನೂ ಓದಿ: ನೇಪಾಳದ ಬಳಿಕ ಮತ್ತೊಂದು ಅವಘಡ, ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ.. 70 ಜನ ದಹನ

ಈ ವಿಮಾನ ಪತನದ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ವೈರಲ್​ ಆದ ವಿಡಿಯೋದಲ್ಲಿ ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ವಿಮಾನ ಗಾಳಿಯಲ್ಲಿ ಹೊರಳಾಡುತ್ತ ದಿಢೀರನೇ ಪತನಗೊಂಡಿದೆ.

ವಿಮಾನ ಭೂಮಿಗೆ ಅಪ್ಪಳಿಸುತ್ತಿರೋ ದೃಶ್ಯ ಭಯಾನಕವಾಗಿದ್ದು, ವಿಮಾನ ಕೆಳಗೆ ಬಿಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪತನಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ದಟ್ಟ ಹೊಗೆ ಎದ್ದು, ಬೆಂಕಿಯ ಕೆನ್ನಾಲಿಗೆಯಲ್ಲಿ ಕರಗಿ ಹೋಗಿದೆ. ವಿಮಾನದಲ್ಲಿದ್ದ ಎಲ್ಲಾ 62 ಜನ ಮೃತಪಟ್ಟಿದ್ದಾರೆ ಅಂತ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

62 ಜನರ ಬಲಿ ಪಡೆದ ವಿಮಾನ.. ನೋಡ ನೋಡ್ತಿದ್ದಂತೆ ಜಸ್ಟ್ 5 ಸೆಕೆಂಡ್​ನಲ್ಲಿ ನೆಲಕ್ಕೆ ಬಿದ್ದ ಫ್ಲೈಟ್- ವಿಡಿಯೋ

https://newsfirstlive.com/wp-content/uploads/2024/08/brazil.jpg

Load More