/newsfirstlive-kannada/media/post_attachments/wp-content/uploads/2025/07/HP-RAIN-3.jpg)
ಮಾನ್ಸೂನ್ನಲ್ಲಿ ಉತ್ತರ ಭಾರತದ ನದಿಗಳು ತುಂಬಿ ಹರಿಯುವುದು ಸಾಮಾನ್ಯ. ಈ ಬಾರಿಯೂ ಹಿಮಾಲಯದ ತಪ್ಪಲಿನ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಜನ ಜೀವನ ಸಂಕಷ್ಟಕ್ಕೀಡಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ 63 ಮಂದಿ ಸಾವನ್ನಪ್ಪಿದ್ದಾರೆ.
ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಭಾರಿ ಹಾನಿಯಾಗಿದೆ. ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂದಾಜಿನ ಪ್ರಕಾರ, 400 ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಭಾರತೀಯ ಹವಾಮಾನ ಇಲಾಖೆಯು ಜುಲೈ 7 ರವರೆಗೂ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಕೇರಳದಿಂದ ಇಂಗ್ಲೆಂಡ್ ಏರ್ಲಿಫ್ಟ್ – ಅಸಲಿಗೆ ಆಗಿದ್ದೇನು ಗೊತ್ತಾ?
40 ಮಂದಿ ನಾಪತ್ತೆ
ಹಿಮಾಚಲ ಪ್ರದೇಶದಲ್ಲಿ ಮಂಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಮಂಡಿ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದ್ದು, ರಸ್ತೆಗಳು ಹೆಚ್ಚು ಹಾಳಾಗಿವೆ. ವಾಹನಗಳು ಸಂಚಾರ ಮಾಡಲಾಗದ ಸ್ಥಿತಿಗೆ ರಸ್ತೆಗಳು ತಲುಪಿವೆ. ಜೊತೆಗೆ ವಿದ್ಯುತ್ , ಕುಡಿಯುವ ನೀರಿನ ಸಂಪರ್ಕದಲ್ಲೂ ವ್ಯತ್ಯಯವಾಗಿದೆ.
ವಿಪತ್ತು ನಿರ್ವಹಣಾ ಪ್ರಾಧಿಕಾರದ ಸ್ಪೆಷಲ್ ಸೆಕ್ರೆಟರಿ ಡಿ.ಸಿ.ರಾಣಾ ಹೇಳುವ ಪ್ರಕಾರ, ನಾವು 400 ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ನಷ್ಟವಾಗಿರುವುದನ್ನು ದಾಖಲಿಸಿದ್ದೇವೆ. ಆದರೆ ವಾಸ್ತವವಾಗಿ ನಷ್ಟ ಇನ್ನೂ ಹೆಚ್ಚಾಗಿದೆ. ನಮ್ಮ ಪ್ರಾಥಮಿಕ ಆದ್ಯತೆ ಈಗ ಶೋಧ, ರಕ್ಷಣೆ ಮತ್ತು ಸಂಪರ್ಕದ ಮರುಸ್ಥಾಪನೆಯತ್ತ ಇದೆ.
ಇದನ್ನೂ ಓದಿ: ನಡ್ಡಾ ಉತ್ತರಾಧಿಕಾರಿಗೆ ಮೂವರು ನಾಯಕಿಯರು ಫೈಟ್.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?
ಮಂಡಿ ಜಿಲ್ಲೆಯೊಂದರಲ್ಲೇ 40 ಮಂದಿ ನಾಪತ್ತೆಯಾಗಿದ್ದಾರೆ. ರೀಲೀಫ್ ಕ್ಯಾಂಪ್ಗಳನ್ನು ತೆರೆಯಲಾಗಿದ್ದು, ಇಂಡಿಯನ್ ಏರ್ ಪೋರ್ಸ್ ವಿಮಾನಗಳ ಮೂಲಕ ಫುಡ್ ಪ್ಯಾಕೆಟ್ ಗಳನ್ನು ಏರ್ ಡ್ರಾಪ್ ಮಾಡಲಾಗುತ್ತಿದೆ. ಮಂಡಿ ಜಿಲ್ಲೆಯಲ್ಲಿ ಹಳ್ಳಿಯೊಂದು ಸಂಪೂರ್ಣ ನಾಶವಾಗಿ ಹೋಗಿದೆ. ಹಿರಿಯ ಅಧಿಕಾರಿಗಳು, ಹಳ್ಳಿ ಹಾಳಾದ ಪ್ರದೇಶದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪಿಡಬ್ಲ್ಯುಡಿ, ಇಂಧನ ಇಲಾಖೆ, ಜಲಶಕ್ತಿ ಇಲಾಖೆಯ ಅಧಿಕಾರಿಗಳು ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಂಪರ್ಕದ ಮರುಸ್ಥಾಪನೆಗೆ ಯತ್ನಿಸುತ್ತಿದ್ದಾರೆ.
ಕುಡಿಯವ ನೀರಿನ ಅಭಾವ
ಹಿಮಾಚಲ ಪ್ರದೇಶದಲ್ಲಿ ಮಳೆ ಹಾಗೂ ಮಳೆ ಸಂಬಂಧಿತ ಘಟನೆಗಳಿಂದ 37 ಮಂದಿ ಸಾವನ್ನಪ್ಪಿದ್ದಾರೆ. 26 ಮಂದಿ ರಸ್ತೆ ಅಪಘಾತಗಳಲ್ಲಿ ಈ ಮಾನ್ಸೂನ್ನಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯದಾದ್ಯಂತ 250 ರಸ್ತೆಗಳು ಬ್ಲಾಕ್ ಆಗಿವೆ. 500 ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳು ಕೆಟ್ಟು ಹೋಗಿವೆ. ಸುಮಾರು 700 ಕುಡಿಯುವ ನೀರಿನ ಯೋಜನೆಗಳು ಸ್ಥಗಿತವಾಗಿವೆ.
ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮವಾಗಿ ಭಾರಿ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶ ರಾಜ್ಯವೂ ಕೂಡ ತಾಪಮಾನ ಬದಲಾವಣೆಯ ಪರಿಣಾಮದಿಂದ ಹೊರತಾಗಿಲ್ಲ ಎಂದು ಸ್ಪೆಷಲ್ ಸೆಕ್ರೆಟರಿ ಡಿ.ಸಿ.ರಾಣಾ ಹೇಳಿದ್ದಾರೆ. ಶಿಮ್ಲಾದಲ್ಲೂ ನಿತ್ಯ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಶಾಲಾ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ.
ವಿದ್ಯಾರ್ಥಿಗಳಲ್ಲಿ ಭಯ
ಶಾಲೆಗಳ ಕ್ಲಾಸ್ ರೂಮುಗಳು ಜಲಾವೃತ್ತವಾಗಿವೆ. ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಆವರಿಸಿದೆ.
ಶಿಮ್ಲಾದ ತನುಜಾ ಠಾಕೂರ್ ಎಂಬ ವಿದ್ಯಾರ್ಥಿನಿ ಹೇಳುವ ಪ್ರಕಾರ, ಶಿಮ್ಲಾದಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ನೀರು ಕ್ಲಾಸ್ ರೂಮು ಪ್ರವೇಶಿಸುತ್ತಿದೆ. ನಮ್ಮ ಬುಕ್ಸ್, ಬಟ್ಟೆಗಳು ನೀರಿನಲ್ಲಿ ತೊಯ್ದು ತೊಪ್ಪೆಯಾಗಿವೆ. ನಮ್ಮ ಟೀಚರ್ಸ್, ಮನೆಯಲ್ಲೇ ಇರೋದು ಉತ್ತಮ ಅಂತ ಹೇಳಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಇದನ್ನೂ ಓದಿ: ಫ್ರೀಡಂ ಪಾರ್ಕ್ನಲ್ಲಿ ಅನ್ನದಾತರ ಪ್ರತಿಭಟನೆ.. ಓರ್ವ ರೈತ ಮುಖಂಡ ಹೃದಯಾಘಾತದಿಂದ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ